ಮಹಾಮಾರಿ ಕ್ಯಾನ್ಸರ್ ರೋಗಕ್ಕೆ ಖ್ಯಾ ತ ಆಂಕರ್ ಒಮ್ಮೆಲೇ ಸಾ ವು;

 

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್ ನಿಂದ ಮರಣ ಹೊಂದಿದ ಸುದ್ದಿ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೀಗ ಈ ಬೆನ್ನಲ್ಲೇ ತಮಿಳಿನ ಜನಪ್ರಿಯ ಸುದ್ದಿ ವಾಹಿನಿಯೊಂದರಲ್ಲಿ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಸೌಂದರ್ಯ ಅಮುದಮೊಳಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

ಹೌದು, ಸೌಂದರ್ಯ ನ್ಯೂಸ್ ತಮಿಳು 24X 7 ಸುದ್ದಿ ಓದುಗರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಆಕೆ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 26 ರಂದು ಅವರು ಕೊನೆಯುಸಿರೆಳೆದರು.

ಅಂದಹಾಗೆ ಮೇ ತಿಂಗಳಲ್ಲಿ, ಅವರು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಆರೋಗ್ಯದ ಕುರಿತಾಗಿ ಮಾಹಿತಿ ನೀಡುವುದರ ಜತೆಗೆ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಕೋರಿದರು. ಆಸ್ಪತ್ರೆಯ ಹಾಸಿಗೆಯ ಫೋಟೋಗಳನ್ನು ಹಂಚಿಕೊಳ್ಳುವಾಗ ಅವರು ಖಾತೆಯ ವಿವರಗಳನ್ನು ಹಂಚಿಕೊಂಡಿದ್ದರು. 

ಹೀಗಾಗಿ ಸೌಂದರ್ಯ ಚಿಕಿತ್ಸೆಗೆ ಆರ್ಥಿಕ ಸಹಾಯ ಕೇಳಿದಾಗ ಆಕೆಗೆ ರೂ. 5.51 ಲಕ್ಷ ಆರ್ಥಿಕ ನೆರವು ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹ ರೂ. 50 ಲಕ್ಷ ನೀಡಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸೌಂದರ್ಯ ಅಸುನೀಗಿದ್ದಾರೆ. ಹಲವಾರು ಮಂದಿ ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ