ಎರಡು ಬಾರಿ ಆ ಕೆಲಸವಾದರೂ ಕೂಡ ಪರವಾಗಿಲ್ಲ ಎಂದು ಮದುವೆಗೆ ಒಪ್ಪಿಕೊಂಡ ಪ್ರಿಯತಮ

 

ನಟಿ ಪೂಜಾ ಗಾಂಧಿ ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ಟರ ಕಾಂಬಿನೇಷನ್ನಲ್ಲಿ ತೆರೆಗಪ್ಪಳಿಸಿದ ಮುಂಗಾರು ಮಳೆ ಸಿನಿಮಾ ನೆನಪಿಗೆ ಬಂದುಬಿಡುತ್ತದೆ. ಈ ಚಿತ್ರದ ಮೂಲಕ ಮಳೆ ಹುಡುಗಿ ಎಂದೇ ಪ್ರಖ್ಯಾತಿ ಪಡೆದು ದಕ್ಷಿಣ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಅದ್ಭುತ ಪೂರ್ವ ಅಭಿನಯದ ಮೂಲಕ ಸಾಕಷ್ಟು ಸಿನಿಮಾಗಳ ಆಫರ್ ಗಿಟ್ಟಿಸಿಕೊಂಡು ಅದೊಂದು ಕಾಲದಲ್ಲಿ ಉತ್ತುಂಗದ ಶಿಖರದಲ್ಲಿದ್ದ ಈ ನಟಿ ವಿವಿಧ ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ವಿಧವಿಧವಾದ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ.

ಜೊತೆಗೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಮೂರಕ್ಕೂ ಸ್ಪರ್ಧಿಸಿ ತಮ್ಮ ನೈಜ ವ್ಯಕ್ತಿತ್ವ ಎಂತದ್ದು ಎಂಬುದನ್ನು ಪೂಜಾ ಗಾಂಧಿ ಪರಿಚಯಿಸಿಕೊಂಡರು ಎಂದರೆ ತಪ್ಪಾಗಲಾರದು. ಇಂತಹ ನಟಿ ವಯಸ್ಸು 40ವರ್ಷ ಆಸು ಪಾಸಾದರು ಮದುವೆಯಾಗದಿರುವುದು ಯಾಕೆ ಎಂಬುದು ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಿರುವಂತಹ ಪ್ರಶ್ನೆ. 

ನಟಿ ಪೂಜಾ ಗಾಂಧಿ ಅವರ ಮೂಲ ಹೆಸರು ಸಂಜನಾ ಗಾಂಧಿ, ಏಳನೇ ತಾರೀಕು ಅಕ್ಟೋಬರ್ 1983 ರಂದು ಉತ್ತರ ಪ್ರದೇಶದಲ್ಲಿ ಜನಿಸಿದ ಇವರಿಗೆ ಚಿಕ್ಕಂದಿನಿಂದಲೂ ಮಾಡಲಿಂಗ್ ಹಾಗೂ ಫ್ಯಾಷನ್ ಲೋಕದಲ್ಲಿ ಅಗಾಧವಾದ ಆಸಕ್ತಿ ಇದ್ದ ಕಾರಣ ಕಾಲೇಜು ದಿನಗಳಲ್ಲಿಯೇ ಫ್ಯಾಷನ್ ಶೋ ಹಾಗೂ ಇನ್ನಿತರ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುಂಗಾರು ಮಳೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಈ ಮುನ್ನ ತಮಿಳಿನ ಕೊಕ್ಕಿ ಹಾಗೂ ಬಂಗಾಳಿಯ ಟೊಮೇಕ್ ಸಲಾಂ ಎಂಬ ಸಿನಿಮಾಗಳಲ್ಲಿ ಅಭಿನಯಿಸಿರುತ್ತಾರೆ. ಆದರೆ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಕೆಲಸ ಮಾಡಿದ ಮುಂಗಾರು ಮಳೆ ಸಿನಿಮಾದ ನಂದಿನಿ ಪಾತ್ರದ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 2017ರಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳಲ್ಲಿ ಪೂಜಾ ಗಾಂಧಿ ಅಭಿನಯಿಸಿದರು. ಅದುವೇ ಮನ್ಮಥ, ಕೃಷ್ಣ ಮಿಲನ, ಗೆಳೆಯ, ಅನಂತರ, ಹನಿ ಹನಿ, ಆಕ್ಸಿಡೆಂಟ್, ಕಾಮಣ್ಣನ ಮಕ್ಕಳು, ನೀ ಟಾಟಾ ನಾ ಬಿರ್ಲಾ, ತಾಜ್ಮಹಲ್, ಕೊಡಗನ ಕೋಳಿ ನುಂಗಿತ್ತ?

ಕಲ್ಯಾಣ ಮಸ್ತು ಹಾಗೂ 2016ರಲ್ಲಿ ಕೊನೆಯದಾಗಿ ಅಭಿನಯಿಸಿದ ದಂಡುಪಾಳ್ಯ ಭಾಗ ಎರಡರವರೆಗೂ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ಪೂಜಾ ಗಾಂಧಿ, ಸಿನಿಮಾ ರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ಹಿಂದಿ ಹಾಗೂ ಬಂಗಾಳಿ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಪೂಜಾ ಗಾಂಧಿ ಅವರು ಬರೋಬ್ಬರಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. <a href=https://youtube.com/embed/Vb3xBUH24q4?autoplay=1&mute=1><img src=https://img.youtube.com/vi/Vb3xBUH24q4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನೂ ಬಿಗ್ ಬಾಸ್ ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿದ್ದಾಗ ಪೂಜಾ ಗಾಂಧಿ ಅವರು ನಟಿ ಪ್ರೇಮ ಅವರ ಸಹೋದರ ಕ್ರಿಕೆಟರ್ ಅಯ್ಯಪ್ಪ ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಅಲ್ಲಿಂದ ಹೊರ ಬಂದ ನಂತರ ಈ ಜೋಡಿಗಳು ಮತ್ತೆ ಹೆಚ್ಚಾಗಿ ಸದ್ದು ಮಾಡಲಿಲ್ಲ. ಇನ್ನು ಪೂಜಾ ಗಾಂಧಿ ಅವರಿಗೆ ಯಾವಾಗ ಸಿನಿಮಾದಲ್ಲಿ ಅವಕಾಶಗಳು ಕೈತಪ್ಪಿ ಹೋಯಿತು ಆಗ ತಮ್ಮ ಬಹುಕಾಲದ ಗೆಳೆಯ ಆನಂದ ಗೌಡ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ.

ಇವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಭಾರಿ ವೈರಲ್ ಆದವು, ಆದರೆ ಕೆಲವು ವೈಯಕ್ತಿಕ ಕಾರಣದಿಂದಾಗಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡರು. ಈಗ ಬೆಂಗಳೂರಿನ ಯಲಹಂಕ ಸಮೀಪ ಇರುವ ಆರಂಭ ರೆಸ್ಟೋರೆಂಟ್‌ನಲ್ಲಿ ಪೂಜಾ- ವಿಜಯ್ ಮದುವೆ ನೆರವೇರಿದೆ. ಉದ್ಯಮಿ ವಿಜಯ್ ಘೋರ್ಪಡೆ ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.