ಮದುವೆ ಮಂಟಪದಲ್ಲೇ ವರನಿಗೆ ಲಿ ಪ್ ಕಿಸ್ ಕೊಟ್ಟ ವಧು, ರೊ ಚ್ಚಿಗೆದ್ದ ವರನಿಂದ ಆಗಿದ್ದೇ ಬೇರೆ

 
ಭಾರತೀಯ ಮದುವೆಗಳ ವೈಭವ ಕೇಳಬೇಕೆ? ಮದುವೆ ಮಂಟಪದಿಂದ ಪ್ರಸ್ತದವರೆಗೂ ನೂರೆಂಟು ಶಾಸ್ತ್ರಗಳು. ವಧುವರರೋ ಖಾಸಗಿ ಗಳಿಗೆಗಾಗಿ ತಹತಹಿಸುವಂಥ ಸಂದರ್ಭ. ಅತ್ತ ಪುರೋಹಿತರು, ಇತ್ತ ಬಂಧುಗಳು, ಸುತ್ತುವರಿದ ಸ್ನೇಹಿತರು ಹೀಗೆ. ಈಗಿಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ. ವರ ವಧುವಿಗೆ ತಾಳಿ ಕಟ್ಟುವ ಸಂದರ್ಭ.
ವಧುವಿನ ತಾಯಿ ಅದಕ್ಕೆ ಸಹಾಯ ಮಾಡುತ್ತಿದ್ದಾಳೆ. ಇಂಚುಗಳ ಅಂತರದಲ್ಲಿ ವಧುವರರ ಮುಖಗಳು. ಇದ್ದಕ್ಕಿದ್ದ ಹಾಗೆ ವಧು ವರನಿಗೆ ಚುಂಬಿಸಿಬಿಡುತ್ತಾಳೆ! ಹೀಗೆ ಮೈಮರೆತ ಚೆಂದದ ಕ್ಷಣಕ್ಕೆ ತನಗೇ ನಗು ಬಂದು ಜೋರಾಗಿ ನಕ್ಕುಬಿಟ್ಟಿದ್ದಾಳೆ ವಧು. ಬಂಧುಗಳೆಲ್ಲ ಈ ಮುದ್ದಾದ ಕ್ಷಣಗಳನ್ನು ನೋಡಿ ಆನಂದಿಸಿದ್ದಾರೆ. <a href=https://youtube.com/embed/bCBauVqSq-A?autoplay=1&mute=1><img src=https://img.youtube.com/vi/bCBauVqSq-A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವರನಿಗೆ ಈ ಅನಿರೀಕ್ಷಿತತೆಯಿಂದ ನಾಚಿಕೆ ಬಂದಿದೆ. ಏನಿದು ಈಕೆ ಹೀಗೆ ಪುರೋಹಿತರು, ಬಂಧುಬಳಗದವರೆದುರೇ ಚುಂಬಿಸಿದಳೆಂದು ಸುತ್ತುವರೆದವರೆಲ್ಲರನ್ನೂ ಒಂದು ಕ್ಷಣ ನೋಡಿದ್ದಾನೆ. ಕೆಲ ನೆಟ್ಟಿಗರು ಈ ವಿಡಿಯೋ ನೋಡಿ ನಕ್ಕಿದ್ದಾರೆ. ಇದು ಬಹುಶಃ ಪೂರ್ವನಿಯೋಜಿತವಿದ್ದಿರಬೇಕು. ಮಂಟಪದಲ್ಲಿಯೇ ಯಾರು ಯಾರಿಗೆ ಮೊದಲು ಮುತ್ತು ಕೊಡುತ್ತಾರೆ ಎಂದು ಹಾಕಿಕೊಂಡ ಸವಾಲಿರಬಹುದು. ಅಂತೂ ಬಹಳ ಮುದ್ದಾಗಿದೆ ಎಂದಿದ್ದಾರೆ.
ಇನ್ನೂ ಕೆಲವರು ಇದು ಭಾರತೀಯ ವಿವಾಹ ಪದ್ಧತಿಗೆ ವಿರುದ್ಧವಾಗಿದೆ. ಮಂಟಪದಲ್ಲಿಯೇ ಹೀಗೆ ವಧು ವರನನ್ನು ಚುಂಬಿಸಿರುವುದು ಅಪರಾಧ ಎಂಬಂತೆ ವಾದ ಮಾಡಿದ್ದಾರೆ. ಭಾರತೀಯ ಸಂಸ್ಕೃತಿಯ ಮರ್ಯಾದೆಯನ್ನು ಹೀಗೇ ಕಳೆಯುವುದು ಈಗಿನ ಹುಡುಗಿಯರು ಎಂದು ಕೆಲವರು ಕುಪಿತರಾಗಿದ್ದಾರೆ. ಇನ್ನೂ ಕೆಲವರು ರೀಲ್ ಮಾಡಿ ಪ್ರಸಿದ್ಧಿ ಹೊಂದಲೆಂದೇ ಈಕೆ ಹೀಗೆ ಮಾಡಿದ್ದಿದೆ ಎಂದು ಹಲವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.