ಲೀಲಾವತಿ ಅಮ್ಮನ ಫೋಟೋ ಮುಂದೆ ಗಳಗಳನೇ ಕ‌.ಣ್ಣೀರು ಹಾಕುತ್ತಿರುವ ಶ್ವಾನ, ಯಾರ ಮಾತು ಕೇಳುತ್ತಿಲ್ಲ

 

ಹಿರಿಯ ನಟಿ ಲೀಲಾವತಿ ನಿಧನದ ನಂತರ, ಅವರ ಅಚ್ಚುಮೆಚ್ಚಿನ ನಾಯಿ ಬ್ಲ್ಯಾಕಿ ಮೌನವಾಗಿ ಕುಳಿತುಕೊಂಡಿದೆ. ಹೌದು, ನಟಿ ಲೀಲಾವತಿ ಅವರ ಭಾವಚಿತ್ರದ ಎದುರು ಕುಳಿತುಕೊಂಡು, ಅವರ ಬರುವಿಕೆಗಾಗಿ ಕಾಯುತ್ತಿದೆ. 

ಮೂಕಪ್ರಾಣಿಗಳನ್ನು ಕಂಡರೆ ನಟಿ ಲೀಲಾವತಿ ಅವರಿಗೆ ಅಚ್ಚುಮೆಚ್ಚು. ಅವರ ಮನೆಯಲ್ಲಿ 7 ರಿಂದ 8 ನಾಯಿಗಳನ್ನು ಸಾಕಲಾಗಿದೆ. ಅವರ ಅಚ್ಚುಮೆಚ್ಚಿನ ನಾಯಿ ಬ್ಲ್ಯಾಕಿ, ಸದಾ ಲೀಲಾವತಿ ಅಮ್ಮನವರನ್ನು ತುಂಬಾ ಹಚ್ಚಿಕೊಂಡಿದೆ.

ಕೆಲ ದಿನಗಳ ಹಿಂದಷ್ಟೇ ಅಸ್ವಸ್ಥಗೊಂಡ ಲೀಲಾವತಿ ಅವರನ್ನ ನೆಲಮಂಗಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತು. ನಂತರ ಲೀಲಾವತಿ ಮನೆಗೆ ಬಾರದೇ ಇರುವುದನ್ನು ಕಂಡು ಬ್ಲ್ಯಾಕಿಯು ದುಃಖ ವ್ಯಕ್ತಪಡಿಸುತ್ತಿದೆ. ಲೀಲಾವತಿ ಅವರ ಫೋಟೋ ಮುಂದೆ ಮೌನವಾಗಿ ಕುಳಿತಿದೆ. ಆಹಾರ ಬಿಟ್ಟು ಮೂಕರೋಧನೆ ಪಡುತ್ತಿದೆ. ಕೆಲಸದವರು ಆಹಾರ ಕೊಟ್ಟರು ತೆಗೆದುಕೊಳ್ಳುತ್ತಿಲ್ಲ. <a href=https://youtube.com/embed/tGWLu3SfzGg?autoplay=1&mute=1><img src=https://img.youtube.com/vi/tGWLu3SfzGg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕ್ಷಣಕ್ಷಣಕ್ಕೂ ಬೇಸರ ಹೆಚ್ಚಾಗ್ತಿದೆ. ಸ್ವಲ್ಪ ಸಮಯದ ಹಿಂದೆ ಅಮ್ಮ ಜೊತೆಗಿದ್ದರು. ಕ್ಷಣಗಳು ಉರುಳುತ್ತಿದ್ದಂತೆ ಅಮ್ಮ ನಮ್ಮ ಜೊತೆಗೆ ಇರೋದಿಲ್ಲ ಎನ್ನುವ ಬೇಸರ ಜಾಸ್ತಿಯಾಗ್ತಿದೆ. ನಿನ್ನೆ ಬೆಳಗ್ಗೆ ಮಾತಾಡಿದ್ರು, ಚೆನ್ನಾಗಿದ್ರು. ಆದರೆ ಕೈ ನೋಯ್ತಿದೆ ಅಂತಾ ಹೇಳಿದ್ರು. ನನ್ನ ಜೊತೆಗೆ ಇದ್ರು, ಇಷ್ಟು ವರ್ಷ ಅವರ ಜೊತೆಗೆ ಖುಷಿಯಾಗಿ ಕಾಲ ಕಳೆದಿದ್ದೇನೆ. ಅವರ ಪ್ರೀತಿಯ ನಾಯಿ ನಿನ್ಬೆ ಅಮ್ಮ ಅಂತಿತ್ತು. ಅಮ್ಮನಿಲ್ಲದ ಮನೆಯಲ್ಲಿ ಶ್ವಾನ ಕಣ್ಣೀರು ಹಾಕ್ತಿದೆ. 

ಮನೆಯ ಒಳಭಾಗ ಲೀಲಾವತಿಯವರ ಪೋಟೋ ಮುಂದೆ ಕುಳಿತು ನಾಯಿಯ ರೋದಿಸುತ್ತಿದೆ. ಕಳೆದ ಅನೇಕ ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನವಾಗಿದ್ದ ಬ್ಲ್ಯಾಕಿ ಮನೆಯಲ್ಲಿಯೇ ಇತ್ತು. ಕೆಲಸವದರು ಊಟ ಕೊಟ್ಟರೂ ಬ್ಲ್ಯಾಕಿ ಊಟ ಮಾಡದೆ ಮಲಗಿಕೊಂಡಿದೆ. ತನ್ನ ಒಡತಿ ಬರುತ್ತಾಳೆ ಎಂದು ಕಾಯುತ್ತಲೇ ಕುಳಿತಿರುವ ಬ್ಲ್ಯಾಕಿಯೂ ರೋದಿಸುತ್ತಿದೆ.

ಅಮ್ಮನಿಗೂ ಈ ಶ್ವಾನ ಎಂದರೆ ಬಹಳ ಪ್ರೀತಿ. ಅವರ ನೆನಪಿನಲ್ಲಿ ಸದಾ ನಾನು ಇರುತ್ತೇನೆ. ಅವರ ಕೆಲ ಕನಸುಗಳಿದ್ವು ಅದನ್ನು ನನಸಾಗಿಸುತ್ತೇನೆ ಎಂದು ಪುತ್ರ ವಿನೋದ್ ರಾಜ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.