ದೇವರಿಗೆ ಪೂಜೆ ಮಾಡುವ ಮುನ್ನ ಈ ಘಟನೆ ಕೇ ಳಿ

 
ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ‌ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಇದರ ನಡುವೆಯೇ ವರಮಹಾಲಕ್ಷ್ಮೀ ಹಬ್ಬದಂದು ಎಚ್ಚರದಿಂದ ಇರುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದೇವಿಯ ಮೈ ಮೇಲೆ ಆಭರಣಗಳನ್ನ ಹಾಕಿ ಹಬ್ಬ ಆಚರಣೆ ಮಾಡುವವರು ಹುಷಾರಾಗಿ ಎಚ್ಚರಿಕೆಯಿಂದ ಇರಿ ಸಲಹೆ ನೀಡಲಾಗಿದೆ.
ಹಬ್ಬದ ಆಚರಣೆ ಸಂದರ್ಭದಲ್ಲಿ ಮನೆಮಂದಿಯಲ್ಲರೂ ಬ್ಯುಸಿಯಾಗಿ ಇರ್ತಾರೆ. ಇಂತಹ ಸಂದರ್ಭದಲ್ಲಿ ಸಣ್ಣ ಕಿಂಡಿ ಇದ್ದರೂ ಸಹ ಕಳ್ಳರಿಗೆ ದಾರಿಯಾಗಬಹುದು. ಕಿಟಿಕಿ ಬಾಗಿಲುಗಳನ್ನ ಭದ್ರವಾಗಿಡಿ, ಅಪರಿಚಿತರು ರಸ್ತೆಯಲ್ಲಿ ಕಂಡರೆ ಯಾರು ಅಂತಾ ವಿಚಾರಿಸಿ. ಕಳ್ಳತನಕ್ಕೆ ಆಸ್ಪದ ಕೊಡದಂತೆ ಎಚ್ಚರಿಕೆ ವಹಿಸಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. <a href=https://youtube.com/embed/pJTw4DDjVHU?autoplay=1&mute=1><img src=https://img.youtube.com/vi/pJTw4DDjVHU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಏಕೆಂದರೆ ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯಲ್ಲಿಟ್ಟಿದ್ದ ಲಕ್ಷ್ಮೀ ಮುಖವಾಡ ಹಾಗೂ ಆಭರಣ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ನಗರದ ಮಹದೇವಪುರದಲ್ಲಿ ನಡೆದಿದೆ. ಹಬ್ಬ ಆಚರಿಸಲು ನಿನ್ನೆಯಿಂದಲೇ ಕುಟುಂಬಸ್ಥರು ತಯಾರಿ ನಡೆಸಿದ್ದರು. ಈ ವೇಳೆ ಮನೆಗೆ ನುಗ್ಗಿರುವ ನಾಲ್ವರ ಗ್ಯಾಂಗ್, ಕಳ್ಳತನ ಮಾಡಿ ಎಸ್ಕೇಪ್ ಆಗಿದೆ.
ಇನ್ನು, ಪ್ರಕರಣದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಬೆನ್ನುಬಿದ್ದ ಪೊಲೀಸರು ಹಬಕ್ಕೆ ಮುನ್ನವೇ ಕಳ್ಳರ ಗ್ಯಾಂಗ್ ಅನ್ನು ಬಂಧನ ಮಾಡಿದೆ. ಬಂಧಿತ ಆರೋಪಿಗಳು ಕೆಜಿಎಫ್ ಮೂಲದ ಗ್ಯಾಂಗ್ ಸದಸ್ಯರು ಎಂದು ಗುರುತಿಸಲಾಗಿದೆ. ಬಂಧಿತರಿಂದ 75 ಲಕ್ಷ ಮೌಲ್ಯದ 840 ಗ್ರಾ ಚಿನ್ನ, ಬೆಳ್ಳಿ ವಸ್ತುಗಳು, ಲಕ್ಷ್ಮೀಯ ಬೆಳ್ಳಿ ಮುಖವಾಡವನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಕೆಜಿಎಫ್ ಗ್ಯಾಂಗ್ ಒಂಟಿ ಮನೆಗಳು, ಮನೆ ಮುಂದೆ ಚಪ್ಪಲಿ ಇಲ್ಲದ ಮನೆಗಳು. ಲೈಟ್ ಆಫ್ ಆದ ಮನೆಗಳು, ಮನೆ ಮುಂದೆ ನ್ಯೂಸ್ ಪೇಪರ್ ಬಿದ್ದಿರುವ ಮನೆಗಳೇ ಇವರ ಟಾರ್ಗೆಟ್ ಮಾಡ್ತಿದ್ದರಂತೆ. ಒಂದೇ ಸಲ ಮಹದೇವಪುರ ವ್ಯಾಪ್ತಿಯಲ್ಲಿ ಆರು ಮನೆಗಳಲ್ಲಿ ಕಳ್ಳತನ ಮಾಡಿದ್ದರಂತೆ. 
ಸದ್ಯ ಆರೋಪಿಗಳ ಬಂಧನದಿಂದ 18 ಮನೆಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಇನ್ನು ಬಂಧಿತರನ್ನು ಜ್ಞಾನಪ್ರಕಾಶ್, ಪ್ರೇಮಕುಮಾರ್, ಸಂತೋಷ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.