ಮಗಳ ಸಾ.ವಿನ ದಿನವೇ ಅಳಿಯನ್ನು ಮದುವೆಯಾದ ಅತ್ತೆ;

 

ಇದು ಕಲಿಗಾಲ, ಈ ಕಾಲದಲ್ಲಿ ಏನು ಬೇಕಾದರೂ ಆಗಬಹುದು, ಜನ ನೋಡಿ ಅಚ್ಚರಿ ಪಡುವ, ಬಾಯಿ ಮೇಲೆ ಕೈಯಿಟ್ಟುಕೊಳ್ಳುವ ಘಟನೆಗಳು ಈ ಕಾಲದಲ್ಲಿ ನಡೆಯುತ್ತದೆ. ಇಂತಹದ್ದೇ ಘಟನೆ ಬಿಹಾರದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಪತ್ನಿಯ ತಾಯಿಯನ್ನೇ ಪ್ರೀತಿಸಿ ಮದುವೆಯಾದ ಘಟನೆಯೊಂದು ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮಾವನ ಒಪ್ಪಿಗೆ ಪಡೆದು ಮದುವೆಯಾಗಿರುವ ಘಟನೆ ಬಿಹಾರ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರ್​ಮೋತಿ ಗ್ರಾಮದಲ್ಲಿ ನಡೆದಿದೆ.ಹೀರ್​ಮೋತಿ ಗ್ರಾಮದ ಸಿಕಂದರ್ ಯಾದವ್, ಅತ್ತೆ ಗೀತಾ ದೇವಿ ಮದುವೆಯಾದ ನವ ಜೋಡಿಗಳಾಗಿದ್ದಾರೆ. 

ಗೀತಾ ದೇವಿ, ದಿಲೇಶ್ವರ್ ದರ್ವೆ ಎನ್ನುವಾತನನ್ನು ವಿವಾಹವಾಗಿದ್ದಳು. ಈ ದಂಪತಿಗೆ ಒಬ್ಬಳು ಮಗಳಿದ್ದು, ಆಕೆಯನ್ನು ಕೆಲವು ವರ್ಷಗಳ ಹಿಂದೆ ತಮ್ಮ ಮಗಳನ್ನು ಸಿಕಂದರ್ ಯಾದವ್​ಗೆ ಕೊಟ್ಟು ಮದುವೆ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ಅನಾರೋಗ್ಯ ಹಾಗೂ ಕಾರಣಗಳಿಂದ ಸಿಕಂದರ್‌ ಯಾದವ್ ಪತ್ನಿ ಸಾವನ್ನಪ್ಪುತ್ತಾಳೆ.

ಪತ್ನಿ ಸಾವಿನ ನಂತರ ಸಿಕಂದರ್ ಯಾದವ್ ಒಂಟಿಯಾಗುತ್ತಾನೆ. ಹೆಂಡತಿ ಸತ್ತರೂ ಸಹ ಮಾವನಾದ ದಿಲೇಶ್ವರ್ ದರ್ವೆ ಮನೆಯಲ್ಲಿ ಇರಲು ಪ್ರಾರಂಭಿಸುತ್ತಾನೆ. ಕೆಲವು ಸಮಯ ಇಲ್ಲೇ ಇರುತ್ತಾನೆ. ಪತ್ನಿ ಇಲ್ಲದೇ ಏಕಾಂಗಿಯಾಗಿದ್ದ ಸಿಕಂದರ್ ಯಾದವ್‌ ಸಂಗಾತಿಗಾಗಿ ಹುಡುಕಾಡುತ್ತಿರುತ್ತಾನೆ. ಈ ಅವಧಿಯಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಹತ್ತಿರವಾಗುತ್ತಾರೆ ಎನ್ನಲಾಗಿದೆ. <a href=https://youtube.com/embed/wVlrlH_rNPQ?autoplay=1&mute=1><img src=https://img.youtube.com/vi/wVlrlH_rNPQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅಳಿಯ, ಅತ್ತೆ ಮನೆಯಲ್ಲಿ ಇರುವುದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿ ಮೂಡಿರುತ್ತದೆ. ಈ ಬಗ್ಗೆ ಕುಟುಂಬದಲ್ಲಿ ಅನುಮಾನ ಕೂಡ ಬಂದಿರುತ್ತದೆ. ಆದರೆ ಅಧಿಕೃತವಾಗಿ ಯಾರೂ ಪ್ರಸ್ತಾಪ ಮಾಡಿರುವುದಿಲ್ಲ. ಮಾವನಿಗೆ ತನ್ನ ಅಳಿಯ- ಪತ್ನಿಯ ಪ್ರಣಯದ ಬಗ್ಗೆ ತಿಳಿಯುತ್ತಿದ್ದಂತೆ ರೆಡ್​​ ಆ್ಯಂಡ್​ ಆಗಿ ಹಿಡಿದು ಇಬ್ಬರನ್ನು ಪಂಚಾಯತಿ ಕಟ್ಟೆಗೆ ಕರೆತಂದಿದ್ದಾನೆ.

ಪಂಚಾಯತಿ ಕಟ್ಟೆಯಲ್ಲಿ ನಡೆದ ವಿಚಾರಣೆಯಲ್ಲಿ ಸಿಕಂದರ್ ಯಾದವ್‌ ಅತ್ತೆ ಮೇಲಿರುವ ಪ್ರೀತಿಯನ್ನು ಗ್ರಾಮದ ಹಿರಿಯರ ಮುಂದೆ ಬಹಿರಂಗವಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಕೊನೆಗೂ ಅತ್ತೆ ಹಾಗೂ ಅಳಿಯನ ಪ್ರೀತಿಗೆ ಮಾವ ಹಾಗೂ ಗ್ರಾಮದ ಹಿರಿಯರು ಒಪ್ಪಿಗೆ ನೀಡಿದ್ದು, ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇನ್ನು ಆಕೆಯ ಪತಿ ಅಂದರೆ ಸಿಕಂದರ್ ಯಾದವ್‌ ಮಾವ ಕಾನೂನು ಪ್ರಕಾರ ಆಕೆಗೆ ತನ್ನ ಸಂಬಂಧದಿಂದ ಬಿಡುಗಡೆ ನೀಡಿ ಅಳಿಯನ ಜೊತೆ ಮದುವೆಯನ್ನು ಮಾಡಿಸಿದ್ದಾರೆ ಎಂದು ವರದಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.