ಭಿಕ್ಷುಕಿ ಎಂದು ಹತ್ತಿರ ಹೋದ ಅಧಿಕಾರಿಗೆ ಚಳಿ ಜ್ವರ ಬಂದಿತ್ತು
ಬದುಕು ಹೇಗೆ ಬರುತ್ತದೆಯೋ ಹಾಗೆ ಸ್ವೀಕರಿಸಬೇಕು. ಹೌದು ನಮ್ಮ ಕೈಯಲ್ಲಿ ಹಣವಿದ್ದಾಗ ಅದನ್ನು ಉತ್ತಮ ರೀತಿಯಲ್ಲಿ ಬಳಸಬೇಕು. ಇತರರಿಗೆ ಸಹಾಯ ಮಾಡಬೇಕು. ಕೇರಳದ ಶಿಕ್ಷಿಕಿ ಒಬ್ಬರು ಯಾರೂ ದಿಕ್ಕಿಲ್ಲದೆ ತ್ರಿವೇಂಡ್ರಮ್ ರೈಲು ನಿಲ್ದಾಣದಲ್ಲಿ ಭಿಕ್ಷೆ ಎತ್ತಿ ಜೀವನ ನಡೆಸುತ್ತಿದ್ದರು.
ಸರ್ಕಾರಿ ಉದ್ಯೋಗಿಯಾಗಿರುವ ವಿದ್ಯಾ ಎಂಆರ್ ತನ್ನ ಸ್ನೇಹಿತನನ್ನು ಬರಮಾಡಿಕೊಳ್ಳಲು ತಿರುವನಂತಪುರದ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋದಾಗ, ಯಾರೋ ಭಿಕ್ಷೆ ಬೇಡುವುದನ್ನು ನೋಡುತ್ತಾಳೆ. ಅಯ್ಯೋ ಯಾಕಾದ್ರೂ ಭಿಕ್ಷೆ ಬೇಡುತ್ತಾರೆ ಎಂದು ಅಂದುಕೊಳ್ಳುವಾಗಲೆ ಆ ಭಿಕ್ಷುಕಿಯ ಗುರುತು ಸಿಗುತ್ತದೆ. ಅವರು ಬೇರೆ ಯಾರೂ ಆಗಿರದೆ. ವಿಧ್ಯಾಗೆ ಕಲಿಸಿದ ಗುರುಗಳಾಗಿರುತ್ತಾರೆ.
ರೈಲ್ವೆ ನಿಲ್ದಾಣದ ಹೊರಗೆ ತನ್ನ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ ಮನೆಯಿಲ್ಲದ ಮಹಿಳೆ ಮರದಿಂದ ಹಣ್ಣುಗಳನ್ನು ಕೀಳುವುದನ್ನು ಗಮನಿಸಿರುತ್ತಾಳೆ. ಮಹಿಳೆ ಪಾಲಿಥಿನ್ ಚೀಲಗಳು, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಹಳೆಯ ಬಟ್ಟೆಗಳನ್ನು ಹೊತ್ತೊಯ್ಯುತ್ತಿದ್ದರು. ಅವರ ನಡಿಗೆಯನ್ನು ನೋಡಿಯೇ ವಿದ್ಯಾಗೆ ಎಲ್ಲೋ ನೋಡಿರುವೆ ಎಂಬ ಅನುಮಾನ ಮೂಡಿರುತ್ತದೆ.
ಹಾಗಾಗಿ ವಿದ್ಯಾ ಮಹಿಳೆಯೊಂದಿಗೆ ಮಾತನಾಡಲು ಮತ್ತು ಅವರ ಕುಟುಂಬದ ಬಗ್ಗೆ ವಿಚಾರಿಸಲು ನಿರ್ಧರಿಸಿ ಕೇಳುತ್ತಾಳೆ. ಆಗ ಆ ಭೀಕ್ಷುಕಿಯು ತನ್ನೆಲ್ಲ ಬದುಕಿನ ಕತೆಯನ್ನು ತೆರೆದಿಸುತ್ತಾಳೆ. ಅದನ್ನು ಕೇಳಿ ವಿದ್ಯಾ ಬೇಸರದಿಂದ ತಮ್ಮ ಮನೆಗೆ ಕರೆದು ಕೊಂಡು ಹೋಗಿ ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.