ಲಾರಿ ಚಾಲನೆ ಮಾಡುತ್ತಿದ್ದ ಈ ಮಹಿಳೆಯ ಖದರ್ ನೋಡಿ ಅಧಿಕಾರಿಗಳು ತಬ್ಬಿ ಬ್ಬು
ಭಾರತದಲ್ಲಿ ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳನ್ನು ಕೇವಲ ಅನುಭವಿ ಪುರುಷ ಚಾಲಕರು ಮಾತ್ರ ಸುಲಭವಾಗಿ ಚಾಲನೆ ಮಾಡುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡುವ ಹಲವಾರು ಮಹಿಳಾ ಚಾಲಕರಿದ್ದಾರೆ.
ಭಾರತದಲ್ಲಿ ಟ್ರಕ್ ಚಾಲನೆ ಮಾಡುವ ಮಹಿಳಾ ಚಾಲಕರ ಸಂಖ್ಯೆ ಕೇವಲ ಬೆರಳಣಿಕೆಯಷ್ಟು ಮಾತ್ರ. ಇತ್ತೀಚೆಗೆ ಕೇರಳದ 24 ವರ್ಷದ ಯುವತಿಯೊಬ್ಬರು ಪೆಟ್ರೋಲಿಯಂ ಟ್ಯಾಂಕರ್ ಚಾಲನೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಡೆಲಿಶಾ ಡೇವಿಸ್ ಅವರೇ ಟ್ರಕ್ ಚಾಲನೆ ಮಾಡಿ ಸುದ್ದಿಯಲ್ಲಿರುವವರು. ಎಂಕಾಂ ವಿದ್ಯಾರ್ಥಿನಿಯಾದ ಡೆಲಿಶಾ ಡೇವಿಸ್ ಚಿಕ್ಕ ವಯಸ್ಸಿನಿಂದಲೇ ಡ್ರೈವಿಂಗ್ ಬಗ್ಗೆ ಉತ್ಸಾಹ ಹೊಂದಿದ್ದರು.
ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನ ಚಾಲನೆಯನ್ನು ಕಲಿತ ನಂತರ ಅವರು ಹೆಚ್ಚು ಸವಾಲಿನಿಂದ ಕೂಡಿರುವ ಟ್ರಕ್ ಚಾಲನೆ ಕಲಿಯಲು ಮುಂದಾದರು. ಡೆಲಿಶಾಳ ತಂದೆ ಕಳೆದ 42 ವರ್ಷಗಳಿಂದ ಇಂಧನ ಟ್ಯಾಂಕರ್ ಚಾಲನೆ ಮಾಡುತ್ತಿದ್ದು, ತಮ್ಮ ಮಗಳ ಕನಸಿಗೆ ನೀರೆದಿದ್ದಾರೆ. ಡೆಲಿಶಾ ಡೇವಿಸ್ ಟ್ಯಾಂಕರ್ ಕಳೆದ ಮೂರು ವರ್ಷಗಳಿಂದ ಟ್ಯಾಂಕರ್ ಚಾಲನೆ ಮಾಡುತ್ತಿದ್ದಾರೆ.
ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಚಾಲನೆ ಮಾಡುತ್ತಿದ್ದ ವೇಳೆ ಮೋಟಾರು ವಾಹನ ಇಲಾಖೆಯ ಅಧಿಕಾರಿಯೊಬ್ಬರು ತಪಾಸಣೆ ನಡೆಸಿದ್ದಾರೆ. ಆಗ ಡೆಲಿಶಾ ಭಾರೀ ವಾಹನ ಚಾಲನೆ ಮಾಡಲು ಹೊಂದಿದ್ದ ಪರವಾನಗಿ ತೋರಿಸಿದ್ದಾರೆ. ಡೆಲಿಶಾ ಅಪಾಯಕಾರಿ ವಾಹನಗಳನ್ನು ಚಾಲನೆ ಮಾಡಲು ಪರವಾನಗಿ ಪಡೆದಿರುವ ಕೇರಳದ ಏಕೈಕ ಮಹಿಳಾ ಚಾಲಕಿಯಾಗಿದ್ದಾರೆ.
ಅವರು ಕೊಚ್ಚಿಯ ಇರುಂಬನಂ ರಿಫೈನರಿಯಿಂದ ಮಲಪ್ಪುರಂನ ಇಂಧನ ಕೇಂದ್ರಕ್ಕೆ ಇಂಧನ ಸಾಗಿಸುತ್ತಾರೆ. ಇರುಂಬನಂನಿಂದ ಮಲಪ್ಪುರಂವರೆಗಿನ ದೂರವು 300 ಕಿ.ಮೀಗಳಿಗಿಂತ ಹೆಚ್ಚು. ಈ ಮಾರ್ಗದಲ್ಲಿ ಅವರು ವಾರಕ್ಕೆ ಮೂರು ಬಾರಿ ಸಂಚರಿಸುತ್ತಾರೆ. ಡೆಲಿಶಾ 16 ವರ್ಷದವರಿದ್ದಾಗಲೇ ಟ್ಯಾಂಕರ್ ಚಾಲನೆ ಮಾಡಲು ಕಲಿತಿದ್ದರು.
ಅವರು 18ನೇ ವಯಸ್ಸಿನಲ್ಲಿ ಚಾಲನಾ ಪರವಾನಗಿ ಹಾಗೂ 20ನೇ ವಯಸ್ಸಿನಲ್ಲಿಅಪಾಯಕಾರಿ ವಾಹನಗಳ ಚಾಲನಾ ಪರವಾನಗಿ ಪಡೆದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.