ಎಣ್ಣೆ ಎಷ್ಟು ಮುಖ್ಯನೋ ಅಷ್ಟೆ ಮುಖ್ಯ ಈ ಚೆಲುವೆಯರು; ರಾಮ್ ಗೋಪಾಲ್ ವರ್ಮಾ

 
ಕೆಲವರು ಒಳ್ಳೆಯ ವಿಚಾರಗಳಿಗೆ ಫೇಮಸ್ ಆದರೆ ಇನ್ನು ಕೆಲವರು ಬೇಡದ ವಿಷಯಗಳಿಂದಲೇ ಸದ್ದು ಮಾಡ್ತಾರೆ. ರಾಮ್ ಗೋಪಾಲ್ ವರ್ಮಾ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರು ನೀಡುವ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಚೆಕ್​ಬೌನ್ಸ್ ಕೇಸ್​ನಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಅವರಿಗೆ ಬಂಧನ ಭೀತಿ ಇದೆ. ಆದರೆ, ಅವರು ಮಾತ್ರ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.
 ನಟಿ ಮಣಿಯರ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ಈಗ ಆರ್​ಜಿವಿ ನೀಡಿದ ಹೇಳಿಕೆ ಒಂದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರ ಹೇಳಿಕೆಗೆ ಅನೇಕರು ಟೀಕೆ ಹೊರಹಾಕಿದ್ದಾರೆ.ಯುವ ಹೀರೋಯಿನ್​ಗಳನ್ನು ಆರ್​ಜಿವಿ ಹೆಚ್ಚೆಚ್ಚು ಆಕರ್ಷಿಸಿಕೊಳ್ಳುತ್ತಾರೆ. ಅವರ ಜೊತೆ ಲಲ್ಲೆ ಹೊಡೆಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಅವಕಾಶ ಸಿಗಬಹುದು ಎಂಬುದು ಯುವ ಹೀರೋಯಿನ್​ಗಳ ಆಲೋಚನೆ ಇದ್ದರೂ ಇರಬಹುದು. ಹೀಗಾಗಿ, ಕೆಲ ನಟಿಯರು ಆರ್​ಜಿವಿ ಜೊತೆ ಫಿಲ್ಟರ್ ಇಲ್ಲದೆ ಮಾತನಾಡುತ್ತಾರೆ. ಆರ್​ಜಿವಿ ಏನೇ ಹೇಳಿದರೂ ಮುಜುಗರ ಮಾಡಿಕೊಳ್ಳದೆ ನಗುತ್ತಾರೆ. <a style="border: 0px; overflow: hidden" href=https://youtube.com/embed/JJZ85lF_RXw?autoplay=1&mute=1><img src=https://img.youtube.com/vi/JJZ85lF_RXw/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
ಈಗ ಪ್ರತ್ಯುಷಾ ಎಂಬುವವರು ರಾಮ್ ಗೋಪಾಲ್ ವರ್ಮಾ ಜೊತೆ ವಿಡಿಯೋ ಒಂದನ್ನು ಮಾಡಿದ್ದಾರೆ. ಮೊದಲು ಆರ್​ಜಿವಿ ಅವರು ಪ್ರತ್ಯುಷಾನ ಹಗ್ ಮಾಡಿಕೊಳ್ಳುತ್ತಾರೆ. ಆ ಬಳಿಕ ಪ್ರತ್ಯುಷಾ ಅವರು, ಹುಡುಗಿಯರ ಯಾವ ಭಾಗ ಹೆಚ್ಚು ಇಷ್ಟ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸೋ ಆರ್​ಜಿವಿ, ಸುಳ್ಳು ಹೇಳಬೇಕಾ ಅಥವಾ ನಿಜ ಹೇಳಬೇಕಾ ಎಂದು ಕೇಳುತ್ತಾರೆ. ಆಗ ಪ್ರತ್ಯುಷಾ ಅವರು ನಿಜವನ್ನೇ ಹೇಳಬೇಕು ಎಂದು ಒತ್ತಾಯಿಸುತ್ತಾದಾಗಿ ಬಾಯಿ ಬಿಟ್ಟಿದ್ದಾರೆ.
ಎದೆ ಭಾಗ ಹಾಗೂ ಹಿಂಭಾಗ ನನಗೆ ತುಂಬಾನೇ ಇಷ್ಟ ಎಂದರು ಆರ್​ಜಿವಿ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಬಿಗ್ ಬಾಸ್ ತೆಲುಗು ಸೀಸನ್ 9ಕ್ಕೆ ಸ್ಪರ್ಧಿ ಸಿಕ್ಕರು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಆರ್​ಜಿವಿ ಹೇಳಿಕೆಗೆ ಟೀಕೆ ಹೊರಹಾಕಿದ್ದಾರೆ. ಯುವ ನಟಿಯರನ್ನು ಅವರು ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.‌