ಬೇಕಾದಷ್ಟು ಹಣ ಕೊಟ್ಟು ಕರೆಯುತ್ತಾರೆ; ಬಾಲಿವುಡು ಸಹವಾಸ ಬೇಡ ಎಂದ ಪ್ರಿಯಾಮಣಿ

 

ಮುದ್ದು ಮುಖದ ಚೆಲುವೆ ಪ್ರಿಯಾಮಣಿ ಅಭಿನಯಕ್ಕು ಜೈ ಡ್ಯಾನ್ಸ್ ಗೆ ಕೂಡ ಸೈ. ಹೌದು ತಮಿಳು, ತೆಲುಗು, ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಮದುವೆ ಬಳಿಕ ವೆಬ್ ಸೀರಿಸ್ ಗಳಲ್ಲಿ ಶೈನ್ ಆಗ್ತಿದ್ದು, ಇದೀಗ ಪ್ರಿಯಾಮಣಿ ಬಾಲಿವುಡ್ ಸೆಲೆಬ್ರೆಟಿಗಳ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ.

ಬಾಲಿವುಡ್​ ಸೆಲೆಬ್ರೆಟಿಗಳು ಜಿಮ್​ಗೆ ಹೋಗ್ಲಿ, ಸಲೂನ್​​ಗೆ ಹೋಗ್ಲಿ, ಮನೆ, ಪಾರ್ಟಿ, ವಿಮಾನ ನಿಲ್ದಾಣಕ್ಕೆ ಹೋದ್ರು ಪಾಪರಾಜಿಗಳು ಮುತ್ತಿಕೊಳ್ತಾರೆ. ಹೇಗೆ ಬರ್ತಾರೆ ಇವರೆಲ್ಲಾ ಅಂತ ಅನೇಕರು ಯೋಚಿಸುತ್ತಾರೆ. ಇದಕ್ಕೆಲ್ಲಾ ಈಗ ಪ್ರಿಯಾಮಣಿಯೇ ಉತ್ತರ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತಾಡಿದ ಪ್ರಿಯಾಮಣಿ, ಬಾಲಿವುಡ್​ ಸೆಲೆಬ್ರೆಟಿಗಳನ್ನು ಪಾಪರಾಜಿಗಳು ಮುತ್ತಿಕೊಳ್ಳೋದು ಕೂಡ ಒಂದು ರೀತಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರ ಎಂದಿದ್ದಾರೆ. ಸೆಲೆಬ್ರೆಟಿಗಳು ಸೂಟ್​ನಲ್ಲಿ ಇರೋದು, ಸಲೂನಿಗೆ ಹೋದಾಗಲೂ ಪಾಪರಾಜಿಗಳ ಕ್ಯಾಮೆರಾಗೆ ಸಿಗ್ತಾರೆ. ಪಾಪರಾಜಿಗಳೇ ಅವರ ಹಿಂದೆ ಓಡಾಡ್ತಿರುತ್ತಾರೆ ಎಂದು ಜನ ಸಾಮಾನ್ಯರು ಊಹಿಸಿರುತ್ತಾರೆ. ಆದ್ರೆ, ಸತ್ಯ ಬೇರೆನೇ ಇದೆ.

ಪ್ರಚಾರ ಪ್ರಿಯ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ. ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ-ವಿಡಿಯೋ ತೆಗೆದು ಪ್ರಚಾರ ಮಾಡೋದು ಅಂತ ನಟಿ ಪ್ರಿಯಾಮಣಿ ಹೇಳಿದ್ದಾರೆ. ಸಾಮನ್ಯವಾಗಿ ನಟ -ನಟಿಯರ ಪಿಆರ್​ ತಂಡದವರೇ ಪಾಪರಾಜಿಗಳಿಗೆ ಮಾಹಿತಿ ನೀಡ್ತಾರೆ. ಇದೆಲ್ಲಾ ಪ್ರಚಾರಗಿಟ್ಟಿಸಿಕೊಳ್ಳುವ ಒಂದು ತಂತ್ರ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.