ಈ ಬಾರಿಯ ಬಿಗ್ ಬಾಸ್ ಟ್ರೋಫಿ ಹನುಮಂತನ ಕೈಯಲ್ಲಿ, ಗುರೂಜಿಯ ಭವಿಷ್ಯಕ್ಕೆ ಹನುಮ ಫಿದಾ
Jan 22, 2025, 17:04 IST
ಹನುಮಂತು ಬಿಗ್ ಬಾಸ್ ಸೀಸನ್ 11 ಕ್ಕೆ ಕಾಲಿಟ್ಟ ದಿನದಿಂದ ಬಿಗ್ ಬಾಸ್ ಆಟದಲ್ಲಿ ಸಖತ್ ಕ್ರೇಜ್ ಸೃಷ್ಟಿಯಾಯ್ತು. ತನ್ನ ದೋಸ್ತನನ್ನೇ ನಾಮಿನೆಟ್ ಮಾಡೋಕೆ ಹಿಂದೆ ಮುಂದೆ ನೋಡದ ದೃಢತೆ. ಆಟ ಅಂತ ಬಂದಾಗ ಎಲ್ಲೂ ಫೇವರೀಸಮ್ ಇಲ್ಲ ಮೋಸ ಇಲ್ಲ. ಇನ್ನು ನೇರ ನುಡಿಯಲ್ಲೇ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾದ ಹನುಮಂತ ಸೀಸನ್ 11 ರ ಫಿನಾಲೆ ವೀಕ್‌ಗೆ ತಲುಪಿದ ಮೊದಲ ಸ್ಪರ್ಧಿಯಾಗಿದ್ದರು.
ಇನ್ನೇನು ಫಿನಾಲೆಗೆ 4 ದಿನ ಮಾತ್ರ ಬಾಕಿ ಉಳಿದಿದೆ. ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಕೂಡಾ ಜನರಲ್ಲಿ ಹೆಚ್ಚಾಗಿದೆ. ಇದೀಗ ಫಿನಾಲೆ ವೀಕ್‌ನಲ್ಲಿ ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ, ಭವ್ಯಾ ಗೌಡ, ರಜತ್‌ನ ಇದ್ದಾರೆ.ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಒಂದೇ ವಾರ ಬಾಕಿ ಇದೆ. ಈಗಾಗಲೇ ಟ್ರೋಫಿಯನ್ನು ಸ್ಪರ್ಧಿಗಳ ಮುಂದೆ ಅನಾವರಣಗೊಳಿಸಿದ್ದಾರೆ. ಮನದ ಮಾತುಗಳನ್ನ ಹೇಳೋಕೆ ಬಿಗ್ ಬಾಸ್ ಅವಕಾಶ ಮಾಡಿಕೊಡುತ್ತಿದ್ದಾರೆ.
<a href=https://youtube.com/embed/Ow8hNt7rSwA?autoplay=1&mute=1><img src=https://img.youtube.com/vi/Ow8hNt7rSwA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಇಂದಿನ ಎಪಿಸೋಡ್‌ನಲ್ಲಿ ಮಹರ್ಷಿ ದರ್ಶನ ಕಾರ್ಯಕ್ರಮದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದರು. ಈ ವೇಳೆ ಸ್ಪರ್ಧಿಗಳ ಬಗ್ಗೆ ಭವಿಷ್ಯ ನುಡಿದಿದ್ದು, ಸಿಂಗರ್ ಹನುಮಂತನ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಆಗಾಗ ಮದುವೆ ಬಗ್ಗೆ ಸುದ್ದಿ ತೆಗೆಯುತ್ತಲೇ ಇದ್ದಾರು. ಇನ್ನು ಫ್ಯಾಮಿಲಿ ರೌಂಡ್‌ನಲ್ಲೂ ತಂದೆಯೂ ಈ ಬಗ್ಗೆ ಒಮ್ಮೆ ಮಾತನಾಡಿದ್ದರು. ಇದೀಗ ಗುರೂಜಿ ಕೂಡ ಹನುಮಂತನ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಹನುಮಂತ ಅವರಿಗೆ 2026ರವರೆಗೆ ರಾಜಯೋಗ ಇರಲಿದೆ ಎಂದಿದ್ದಾರೆ. ಆದ್ರೆ ಮದುವೆ ಆಗೋದರ ಬಗ್ಗೆ ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಸದ್ಯ ಏನು ಮಾಡ್ಬೇಕು ಎಂಬುದರ ಮೇಲೆ ಸ್ವಲ್ಪ ಗಮನ ಹರಿಸಿದ್ರೆ ಒಳ್ಳೆಯದು ಎಂದಿದ್ದಾರೆ.ಇನ್ನು ಹನುಮಂತ ತಾಯಿ ಬಗ್ಗೆ ಭವಿಷ್ಯ ನುಡಿದಿರುವ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ, ಹನುಮಂತ ತಾಯಿ ಆರೋಗ್ಯದಲ್ಲಿ ಏರುಪೇರಾಗಲಿದೆ ಎಂದು ಹೇಳಿದ್ದಾರೆ. ಆದ್ದರಿಂದ ತಾಯಿ ಆರೋಗ್ಯದ ಬಗ್ಗೆ ಎಚ್ಚರವಹಿಸಿ, ಏನೇ ಸಮಸ್ಯೆ ಬಂದರೂ ಅದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಿ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.techವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.