ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಸಂಭ್ರಮ, ಕಿರುತೆರೆ ನಟಿ ಅಂಕಿತಾ ಅಮರ್ ಹಾಗೂ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮದುವೆ.
Jul 23, 2025, 14:29 IST
ಕಿರುತೆರೆ ಲೋಕದಲ್ಲಿ ಖ್ಯಾತಿ ಪಡೆದಿದ್ದ ನಟಿ ಅಂಕಿತಾ ಅಮರ್ ಹಾಗೂ ಮಾಜಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ನಿಜಾನಾ ಅಥವಾ ಸುಳ್ಳಾ ಮುಂದೆ ನೋಡೋಣ ಬನ್ನಿ...
ಹೌದು ನಟಿ ಅಂಕಿತಾ ಅಮರ್ ಹಾಗೂ ನಟ ಶೈನ್ ಶೆಟ್ಟಿ ಮದುವೆ ಆಗಲಿದ್ದಾರೆ. ಆದರೆ ಈ ಮದುವೆ ನಿಜ ಜೀವನದಲ್ಲಿ ಅಲ್ಲ ಸಿನಿಮಾದಲ್ಲಿ ಮಾತ್ರ. ಹೌದು ಅಂಕಿತಾ ಅಮರ್ ಮತ್ತು ಶೈನ್ ಶೆಟ್ಟಿ ಅವರು ‘ಜಸ್ಟ್ ಮ್ಯಾರೀಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ನೂತನ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆ ಆಗಿದೆ.
<a style="border: 0px; overflow: hidden" href=https://youtube.com/embed/bd7TImDnTyo?autoplay=1&mute=1><img src=https://img.youtube.com/vi/bd7TImDnTyo/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
ನಾಗೇಂದ್ರ ಪ್ರಸಾದ್ ಅವರ ಹೃದಯಸ್ಪರ್ಶಿ ಸಾಹಿತ್ಯ, ಅಜನೀಶ್ ಲೋಕನಾಥ್ ಅವರ ಸುಮಧುರ ಸಂಗೀತದಲ್ಲಿ ‘ಮಾಂಗಲ್ಯಂ ತಂತುನಾನೇನ’ ಹಾಡು ಸಿದ್ಧವಾಗಿದೆ. ಮದುವೆಯ ಸಂಭ್ರಮ ಮತ್ತು ಸಡಗರ ಈ ಹಾಡಿನಲ್ಲಿ ಇದೆ.
ಈಗಾಗಲೇ ಹಲವಾರು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಜಿತ್ ಹೆಗ್ಡೆ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ. ಅವರ ಸೂಪರ್ ಹಿಟ್ ಗೀತೆಗಳ ಸಾಲಿಗೆ ‘ಮಾಂಗಲ್ಯಂ ತಂತುನಾನೇನ’ ಹಾಡು ಕೂಡ ಸೇರ್ಪಡೆ ಆಗಿದೆ.