ಒಂಟಿಯಾಗಿ ಬದುಕಲಾಗದೆ ಮೂರು ಮಕ್ಕಳ ತಂದೆಯನ್ನು ಮದುವೆಯಾದ ಕನ್ನಡದ ನ.ಟಿ

 

ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸುಂದರ ನಟಿಯರಲ್ಲಿ ಅಗ್ರ ಸ್ಥಾನದಲ್ಲಿರುವ ಜಯಪ್ರದಾ ಅವರು ತಮ್ಮ ಅಲೌಕಿಕ ಸೌಂದರ್ಯ, ಅಗಾಧ ಪ್ರತಿಭೆ ಮತ್ತು ಯಶಸ್ವಿ ವೃತ್ತಿಜೀವನದಿಂದ ಇಂದಿಗೂ ಅಭಿಮಾನಿಗಳಿಗೆ ಅಚ್ಚು ಮೆಚ್ಚು.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಲಲಿತಾ ರಾಣಿಯಾಗಿ ಜನಿಸಿದ ಜಯಪ್ರದಾ ಭಾರತೀಯ ಚಿತ್ರರಂಗದ ಅಪ್ರತಿಮ ನಟಿಯಾಗಿ 70 ಮತ್ತು 80 ರ ದಶಕದ ಸಿನಿರಂಗವನ್ನು ಆಳ್ವಿಕೆ ಮಾಡಿದ ತಾರೆ. 1985 ರ ಸುಮಾರಿಗೆ ಅವರು ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು.ಇದು ಅವರ ವೃತ್ತಿಜೀವನದ ಉತ್ತುಂಗದ ಸಮಯವಾಗಿತ್ತು. 

ಆದರೆ ಇದೇ ವೇಳೆ ಎದುರಾಗಿದ್ದ ಸಂಕಷ್ಟಗಳನ್ನು ನಿವಾರಿಸಲು ಜಯಪ್ರದಾ ಜೀವನದಲ್ಲಿ ಬೆಳಕಾಗಿ ಬಂದಿದ್ದು.. ನಿರ್ಮಾಪಕ ಶ್ರೀಕಾಂತ್.. ಅಂದಿನಿಂದ ಅವರೊಂದಿಗೆ ಬೆಳೆದ ಸ್ನೇಹ.. ಪ್ರೀತಿಯಾಗಿ ತಿರುಗಿತು.. ಶ್ರೀಕಾಂತ್ ನಹತಾ ಮತ್ತು ಜಯಪ್ರದಾ ಅವರ ಪ್ರೇಮ ಪ್ರಕರಣ ಮತ್ತು ಮದುವೆ ಮನರಂಜನಾ ಜಗತ್ತಿನಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. 

ಏಕೆಂದರೆ ಶ್ರೀಕಾಂತ್ ಅವರಿಗೆ ಮೊದಲೇ ಮದುವೆಯಾಗಿತ್ತು.ಮದುವೆಯಾಗಿ ಮೂರು ಮಕ್ಕಳಿರುವವವರನ್ನು ಮದುವೆಯಾಗಿದ್ದಾರೆ ಎನ್ನುವ ದೊಡ್ಡ ಆರೋಪವನ್ನು ಹೊತ್ತುಕೊಂಡರು. ದುರಂತವೆಂದರೇ ಶ್ರೀಕಾಂತ್‌ ಅವರು ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ ನೀಡಿರಲಿಲ್ಲ. ಆದರೂ ಜಯಪ್ರದಾ ಹುಚ್ಚಿಯಂತೆ ಶ್ರೀಕಾಂತ್‌ ಅವರನ್ನು ಪ್ರೀತಿಸುತ್ತಿದ್ದರು.1986 ರ ಸಂದರ್ಶನವೊಂದರಲ್ಲಿ, ಜಯಪ್ರದಾ ವಿವಾಹಿತ ವ್ಯಕ್ತಿ ಶ್ರೀಕಾಂತ್ ನಹತಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.