ದೇವಲೋಕದ ಅಪ್ಸರೆಯಂತೆ ಮಿಂಚುತ್ತಿರುವ ವೈಷ್ಣವಿ ಗೌಡ; ಕನ್ನಡಿಗರು ಫಿದಾ

 

ಧಾರವಾಹಿ ಪ್ರಿಯರ ಮನಗೆದ್ದ ನಟಿ ಅಂದ್ರೆ ಅದು ವೈಷ್ಣವಿ ಗೌಡ. ಹೌದು ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ, ಸೀತಾರಾಮ ಧಾರವಾಹಿಯ ಸೀತಾ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಜೀ ಕನ್ನಡದ ಪ್ರಸಿದ್ಧ ಧಾರವಾಹಿಗಳಲ್ಲಿ ಒಂದಾದ ಸೀತಾರಾಮದಲ್ಲಿ ಮಿಂಚುತ್ತಿರುವ  ಕಿರುತೆರೆ ನಟಿ ವೈಷ್ಣವಿ ಗೌಡ ಅವರ ಡೀಪ್ ಫೇಕ್ ಫೋಟೋವನ್ನು ವೈರಲ್ ಮಾಡಲಾಗಿದೆ.  

ಸೀತಾ ಪಾತ್ರದಲ್ಲಿ ಮಿಂಚುತ್ತಿರುವ ವೈಷ್ಣವಿ ಅವರು ಈ ಹಿಂದೆ ಧರಿಸಿದ್ದ ಕೆಂಪು ಬಣ್ಣದ ಗೌನ್ ನನ್ನು ಎಡಿಟ್‌ ಮಾಡಿರುವ ಕಿಡಿಗೇಡಿಗಳು ಫೋಟೋವನ್ನು ಹರಿಬಿಟ್ಟಿದ್ದಾರೆ.ಕಳೆದ ಅಕ್ಟೋಬರ್ 2023 ರಲ್ಲಿ ಜೀ ಕನ್ನಡದ ಜೀ ಕುಟುಂಬ ಅವಾರ್ಡ್ ಸಮಯದಲ್ಲಿ ವೈಷ್ಣವಿ ಗೌಡ ಕೆಂಪು ಬಣ್ಣದ ಗೌನ್ ಧರಿಸಿದ್ದರು. ಈ ವೇಳೆ ಅದೇ ಡ್ರೆಸ್ ನಲ್ಲಿ  ಫೋಟೋ ಶೂಟ್‌ ಮಾಡಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದರು.  <a href=https://youtube.com/embed/yXELQqd0THE?autoplay=1&mute=1><img src=https://img.youtube.com/vi/yXELQqd0THE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದೀಗ ಇದೇ ಫೋಟೋವನ್ನು ಎಡಿಟ್ ಮಾಡಿರುವ ಕಿಡಿಗೇಡಿಗಳು ವೈಷ್ಣವಿ ಗೌಡ ಎಂಬ ಫೇಕ್‌ ಪೇಸ್ ಬುಕ್‌ ಪೇಜ್ ಕ್ರಿಯೇಟ್‌ ಮಾಡಿ  ಎಕ್ಸ್‌ಪೋಸ್‌ ಆಗಿ ಬಟ್ಟೆ ಹಾಕಿರುವಂತೆ ಬಿಂಬಿಸಿದ್ದಾರೆ.ಆದರೆ ಈ ಫೋಟೋಗೆ ನಿಜಾಂಶ ತಿಳಿಯದೆ ಕೆಲವರು ಕಮೆಂಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. 

ದಯವಿಟ್ಟು ಇತರ ಫೋಟೋಗಳನ್ನು ಹಾಕಬೇಡಿ ನಿಮ್ಮ ಮೇಲೆ ಗೌರವ ಜನಗಳಿಗೆ ಇದೆ ಇದನ್ನು ಕಾಪಾಡಿಕೊಳ್ಳಿ.  ಮೇಡಂ ಸೀತಾರಾಮ ಸಿರಿಯಲ್ ನಿಂದ ನಿಮಗೆ ಒಂದು ಒಳ್ಳೆ ಗೌರವ ಬಂದಿದೆ ಇಂತ ಬಟ್ಟೆ ಧರಿಸಿ ಅಂತಹ ಒಳ್ಳೆ ಪಾತ್ರ ಮಾಡುತ್ತಿರುವ ನಿಮ್ಮ ನಡತೆಗೆ ಭಂಗ ತಂದುಕೊಳ್ಳಬೇಡಿ. 

ಕರ್ನಾಟಕದ ಸಂಸ್ಕೃತಿಯ ಬಗ್ಗೆ ಮಾದರಿ ಹೆಣ್ಣಾಗಿ ಬದುಕೋದು ಕಲೀರಿ ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ. ಆದರೆ ಇದು ಡೀಪ್ ಫೇಕ್ ಅನ್ನೋದು ಗೊತ್ತಿಲ್ಲದೆ ಜನ ಕಮೆಂಟ್‌ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.