ಈ ಬಾರಿಯ ಬಿಗ್ ಬಾಸ್ ರನ್ನರ್ ಅಪ್  ಗೆ 10 ಲಕ್ಷ ಬಹುಮಾನ ಕೊಡುತ್ತೇನೆ ಎಂದ ವರ್ತೂರ್ ಸಂತು

 

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಸದ್ದು ಆರಂಭವಾಗಿದ್ದು, ಪ್ರತಿ ಎಪಿಸೋಡಿಗೂ ಪ್ರೇಕ್ಷಕರು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಈ ನಡುವೆ ಜನರ ಮನಸೆಳೆಯುವಂತಹ ಹೇಳಿಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ ವರ್ತೂರು ಸಂತೋಷ್‌.

ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ 12 ಪ್ರಾರಂಭವಾಗಿದ್ದು, ಒಟ್ಟಾರೆ 19 ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಶೋ ಆರಂಭವಾದ ಕ್ಷಣದಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಯಾರು ಗೆಲ್ಲುತ್ತಾರೆ? ಯಾರು ಹೆಚ್ಚು ದಿನ ಮನೆಗೆ ತಲುಪುತ್ತಾರೆ? ಎಂಬ ಪ್ರಶ್ನೆಗಳು ಈಗಾಗಲೇ ಟ್ರೆಂಡ್ ಆಗಿವೆ.

ಬಿಗ್ ಬಾಸ್ 12ರ ಬಗ್ಗೆ ಮಾತನಾಡಿದಾಗ ವರ್ತೂರು ಸಂತೋಷ್ ಅವರು ಒಂದು ಭರ್ಜರಿ ಘೋಷಣೆ ಮಾಡಿದ್ದಾರೆ.ಅವರ ಮಾತು ಪ್ರಕಾರ –ಬಿಗ್ ಬಾಸ್ 12 ರ ರನ್ನರ್ ಅಪ್ ಆಗುವ ಸ್ಪರ್ಧಿಗೆ ಅವರು ₹10 ಲಕ್ಷ ರೂಪಾಯಿ ಬಹುಮಾನ ನೀಡಲು ಸಿದ್ದರಾಗಿದ್ದಾರೆ. ಆದರೆ ಈ ಕುರಿತಾಗಿ ಯಾವುದೇ ಪತ್ರಿಕಾ ಪ್ರಕಟಣೆ ನೀಡಿಲ್ಲ. <a style="border: 0px; overflow: hidden" href=https://youtube.com/embed/dZA2zrQX5zM?autoplay=1&mute=1><img src=https://img.youtube.com/vi/dZA2zrQX5zM/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಈ ಘೋಷಣೆಯ ನಂತರ ಸಂತೋಷ್ ಅಭಿಮಾನಿಗಳು ಹಾಗೂ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿದೆ. ಸಾಮಾನ್ಯವಾಗಿ ಬಿಗ್ ಬಾಸ್ ವಿಜೇತರಿಗೆ ಮಾತ್ರ ದೊಡ್ಡ ಬಹುಮಾನ ದೊರೆಯುತ್ತದೆ. ಆದರೆ ಈ ಬಾರಿ ರನ್ನರ್ ಅಪ್ ಕೂಡ ಹೆಚ್ಚುವರಿ ಬಹುಮಾನ ಪಡೆಯಲು ಸಾಧ್ಯವಾಗಲಿದೆ ಎಂಬ ವಿಚಾರ ಜನರಲ್ಲಿ ಖುಷಿ ತಂದಿದೆ.