'ವಿಜಯ್ ದೇವರಕೊಂಡ ನನ್ನ ಗಂಡ ಎಂದ ರಶ್ಮಿಕಾ ಮಂದಣ್ಣ' ಪಬ್ಲಿಕ್ ಮುಂದೆ ಓಪನ್ ಹೇಳಿಕೆ ನೀಡಿದ ಶ್ರೀವಲ್ಲಿ
ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್, ಬಾಲಿವುಡ್ ನಲ್ಲಿಯೂ ಸೌಂಡ್ ಮಾಡುತ್ತಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್ ಇಂಡಿಯಾ ಹಿರೋಯಿನ್ ಆಗಿ ಮಿಂಚುತ್ತಿದ್ದಾರೆ.. ಟಾಲಿವುಡ್‌ಗೆ ಎಂಟ್ರಿ ಕೊಟ್ಟಾಗಿನಿಂದಲೂ ನಟಿಯ ಅಫೇರ್ ವದಂತಿಗಳು ಸಾಕಷ್ಟು ಹಬ್ಬಿವೆ.. ಆದರೆ ಅದ್ಯಾವುದಕ್ಕೂ ರಶ್ಮಿಕಾ ಪ್ರತಿಕ್ರಿಯಿಸಿಲ್ಲ.. ಆದರೆ ಇತ್ತೀಚೆಗೆ ನಟಿ ಒಂದು ಪೋಸ್ಟ್‌ಗೆ ಪರೋಕ್ಷವಾಗಿ ಪ್ರತಿಕ್ರಿಯಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಂತರ ಮೊದಲ ಸಿನಿಮಾದಲ್ಲಿ ನಟಿಸಿದ ಕೋ ಸ್ಟಾರ್ ರಕ್ಷಿತ್ ಶೆಟ್ಟಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು.. ಎಂಗೇಜ್‌ಮೆಂಟ್ ಸಹ ಮಾಡಿಕೊಂಡಿದ್ದರು.. ಆದರೆ ಕೆಲದಿನಗಳ ನಂತರ ಕಾರಣಾಂತರಗಳಿಂದ ಇಬ್ಬರೂ ದೂರವಾದರು.
ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ನಂತರ ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದರು.. ಈ ಸಿನಿಮಾದಲ್ಲಿ ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರೀ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು.. ಹೀಗೆ ಒಂದೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಇವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ವದಂತಿಗಳು ಇಲ್ಲಿಯವರೆಗೂ ಹರಡುತ್ತಲೇ ಇವೆ.
ಆದರೆ ಯಾವುದೇ ವದಂತಿಗಳಿಗೂ ಪ್ರತಿಕ್ರಿಯಿಸದ ರಶ್ಮಿಕಾ ಇತ್ತೀಚೆಗೆ ದೆಹಲಿ ಫ್ಯಾನ್ಸ್ ಎಕ್ಸ್ ಅಂದ್ರೆ ಹಳೆಯ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ತಮ್ಮ ಪೋಸ್ಟ್‌ಗೆ ರಿಯಾಕ್ಟ್ ಮಾಡಿದ್ದಾರೆ.. ಆ ಪೋಸ್ಟ್‌ನಲ್ಲಿ ರಶ್ಮಿಕಾ ಭಾವಿ ಪತಿ ವಿಡಿಯಂತಿರಬೇಕು..ನನ್ನ ಪ್ರಕಾರ ವಿಡಿ ಎಂದರೆ ವೆರಿ ಡೇರಿಂಗ್.. ಕ್ವೀನ್ ಎಂದು ಕರೆಸಿಕೊಳ್ಳುವ ರಶ್ಮಿಕಾಗೆ ಅವನೇ ರಾಜನಾಗಿರಬೇಕು ಎಂದು ಬರೆದುಕೊಂಡಿದ್ದಾರೆ.. ಇದಕ್ಕೆ ರಶ್ಮಿಕಾ ಮಂದಣ್ಣ, 'ಹೌದು, ಇದು ನಿಜ' ಎಂದು ಕಾಮೆಂಟ್ ಮಾಡಿದ್ದಾರೆ.
ಆದರೆ ಇಲ್ಲಿ ವೈರಲ್ ಆಗುತ್ತಿರುವುದು ವಿಡಿ ಎನ್ನುವ ಪದ ಮಾತ್ರ ಏಕೆಂದರೆ ವಿಜಯ್ ದೇವರಕೊಂಡ ಅವರನ್ನು ಶಾರ್ಟ್ ಆಗಿ ವಿಡಿ ಎಂತಲೂ ಕರೆಯುತ್ತಾರೆ,, ಹಾಗಾಗಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದು.. ಮದುವೆ ಘೋಷಣೆ ಯಾವಾಗ ಬೇಕಾದರೂ ಆಗಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.