ವಿಜಯಲಕ್ಷ್ಮಿ ನನ್ನ ಬೆಸ್ಟ್ ಫ್ರೆಂಡ್ ಆದ್ರೆ ದಶ೯ನ್ ನನ್ನು ಬಿಡಲ್ಲ ಎಂದ ನಟಿ ರಮ್ಯಾ

 

      ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಕೇಸ್‌ನ ವಿಚಾರಣೆ. 

     ಹೈಕೋರ್ಟ್‌ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನವನ್ನು ಹೊರ ಹಾಕಿತ್ತು. ಈ ಬೆನ್ನಲ್ಲೇ ರಮ್ಯಾ ಅದನ್ನು ಬೆಂಬಲಿ ಸೋಶಿಯಲ್ಮೀ ಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲಿಂದ ದರ್ಶನ್ ಫ್ಯಾನ್ಸ್ ರಮ್ಯಾರನ್ನು ಅಶ್ಲೀಲ ಪದಗಳಿಂದ ಟೀಕಿಸುತ್ತಿದ್ದಾರೆ. <a style="border: 0px; overflow: hidden" href=https://youtube.com/embed/w7rYzBfOLMo?autoplay=1&mute=1><img src=https://img.youtube.com/vi/w7rYzBfOLMo/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
     ರಮ್ಯಾ ಈ ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆತ್ಮೀಯ ಸ್ನೇಹಿತೆ. ಆದರೆ, ನನಗೆ ಸತ್ಯ ಮುಖ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಇಂತಹ ಅಶ್ಲೀಲ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಮಹಿಳೆಯರು ಮುಂದೆ ಬರಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. 
     ದರ್ಶನ್ ವಿರುದ್ಧ ನಿಂತಿದ್ದನ್ನು ರಮ್ಯಾ ಇಲ್ಲೂ ಸಮರ್ಥಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗಮನಿಸಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವ ಭರವಸೆಯಿದೆ ಎಂದು ಹೇಳಿದ್ದು, ಇದಕ್ಕೆ ಅಶ್ಲೀಲ ಪದಗಳನ್ನು ಬಳಸಿ ಕಮೆಂಟ್ ಮಾಡಿತ್ತಿದ್ದಾರೆ. ಇದು ಅವರಿಗೆ ಕಾಮನ್ ಆಗಿದೆ. ಸುದೀಪ್, ತಶ್ ಅವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಯಶ್ ಪತ್ನಿ, ಮಕ್ಕಳ ಬಗ್ಗೆನೂ ಕೆಟ್ಟ ಪದಗಳಲ್ಲಿ ಕಮೆಂಟ್ ಮಾಡಿದ್ದಾರೆ. ಇಂತಹ ಪ್ರವೃತ್ತಿಗೆ ಅಂತ್ಯ ಹಾಡಲೇಬೇಕಿದೆ ಎಂದು ರಮ್ಯಾ ಗರಂ ಆಗಿದ್ದಾರೆ.