ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಹೆಂಡತಿ ಮಗನ ಜೊತೆ ಐಶಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿರುವ ವಿನಯ್

 

ಬಿಗ್ ಬಾಸ್ ಮನೆಯ ಸದಸ್ಯರೆಲ್ಲ ಇದೀಗ ಫ್ಯಾನ್ಸ್‌ಗೆ ಟೈಮ್ ಕೊಡ್ತಿದ್ದಾರೆ. ಮನೆಯಿಂದ ಬಂದ್ಮೇಲೆ ಮಾಧ್ಯಮಗಳಿಗೆ ಸಂದರ್ಶನ ಕೊಡೋದರಲ್ಲಿಯೇ ಬ್ಯುಸಿ ಇದ್ದರು. ಆದರೆ ಇದೀಗ ಫ್ಯಾನ್ಸ್‌ಗೆ  ಮೀಟ್ ಆಗೋಕೆ ಪ್ಲಾನ್ ಮಾಡಿದ್ದಾರೆ. ದೊಡ್ಮನೆಯ ವಿನಯ್ ಗೌಡ, ನಮ್ರತಾ, ಮೈಕಲ್ ಹಾಗೂ ರಕ್ಷಕ್ ಬುಲೆಟ್ ಒಂದು ಹೊಸ ಐಡಿಯಾ ಮಾಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಾರೆ. ಅಲ್ಲಿಯೇ ತಾಯಿ ಚಾಮುಂಡೇಶ್ವರಿಗೆ ಭೇಟಿಯಾಗಿ  ಪೂಜೆ ಸಲ್ಲಿಸಿ ಆ ಬಳಿಕ ತಮ್ಮ ಫ್ಯಾನ್ಸ್‌ ಭೇಟಿ ಆಗುತ್ತಿದ್ದಾರೆ. ಈ ಒಂದು ವಿಚಾರವನ್ನ ಸ್ವತಃ ವಿನಯ್ ಗೌಡ ಆ್ಯಂಡ್ ಟೀಮ್ ವಿಡಿಯೋ ಮೂಲಕ ಹೇಳಿಕೊಂಡಿದೆ. <a href=https://youtube.com/embed/sdHzQMzG1aA?autoplay=1&mute=1><img src=https://img.youtube.com/vi/sdHzQMzG1aA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ವಿನಯ್ ಗೌಡ ಚಾಮುಂಡಿ ಬೆಟ್ಟಕ್ಕೆ ತನ್ನ ಪತ್ನಿ ಮತ್ತು ಮಗನೊಂದಿಗೆ ಆಗಮಿಸಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಹೌದು, ರಕ್ಷಕ್ ಬುಲೆಟ್, ಮೈಕಲ್, ನಮೃತಾ, ವಿನಯ್ ಗೌಡ ಇವರೆಲ್ಲ ಚಾಮುಂಡಿ ಬೆಟ್ಟದಲ್ಲಿ ಫ್ಯಾನ್ಸ್ ಭೇಟಿ ಆಗಲಿದ್ದಾರೆ. ತಾಯಿಯ ದರ್ಶನ ಪಡೆದ ಬಳಿಕ ಫ್ಯಾನ್ಸ್ ಭೇಟಿ ಆಗೋ ಪ್ಲಾನ್ ಹಾಕಿಕೊಂಡಿದ್ದಾರೆ. ಈ ಒಂದು ವಿಚಾರವನ್ನ ನಾಲ್ಕೂ ಜನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಬೆಟ್ಟದಲ್ಲಿ ಲಕ್ಷಾಂತರ ಮಂದಿ ವಿನಯ್ ಗೌಡ ಅವರ ಅಭಿಮಾನಿಗಳು ಸೇರಿದ್ದರು. ಅಣ್ಣಾ ನೀವೇ ಗೆಲ್ಲಬೇಕಿತ್ತು. ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರನ್ನು ಸಮಾಧಾನ ಪಡಿಸಿದ ವಿನಯ್ ನಿಮ್ಮ ಪ್ರೀತಿ ಸಾಕು ಎಂದಿದ್ದಾರೆ. ಇನ್ನು ಅವರ ಹೆಂಡತಿ ಅಕ್ಷತಾ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಒಟ್ಟಿನಲ್ಲಿ ಆನೆ ವಿನಯ್ ಆರ್ಭಟಕ್ಕೆ ಚಾಮುಂಡಿ ಬೆಟ್ಟ ತುಂಬಿತ್ತು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.