ವಿರಾಟ್ ಕೊಹ್ಲಿ ಬಗ್ಗೆ ಸಿಡಿದೆದ್ದ ಶ್ರೇಯಾಂಕ; RCB ಸೋಲಿಗೆ ಕಾರಣ ಯಾ.ರು

 

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2024ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಗೆದ್ದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡವನ್ನು ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್, ದಿನೇಶ್‌ ಕಾರ್ತಿಕ್‌ ಸೇರಿದಂತೆ ದಿಗ್ಗಜರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ಮೊದಲು 5 ಮ್ಯಾಚ್ ಸೋತಿದ್ದರೂ ಕೂಡಾ ಉತ್ತಮ ಕಂಬ್ಯಾಕ್ ಮಾಡಿದ್ದಾರೆ. ಅದೆಷ್ಟೋ ವರ್ಷಗಳಿಂದ ಈಸಲ ಕಪ್ ನಮ್ದೆ ಎನ್ನುತ್ತಾ ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಈ ಬಾರಿ ಕಪ್ ಗೆದ್ದು ಕೊಡುವ ಮೂಲಕ ಕಪ್ ಬರವನ್ನು ನೀಗಿಸಿದೆ. ಇದರೊಂದಿಗೆ ಹಲವು ವಿಚಾರಗಳಲ್ಲಿ ಆರ್‌ಸಿಬಿ ಆಟಗಾರ್ತಿಯರು ಪ್ರಶಸ್ತಿಯನ್ನು ಪಡೆದಿದ್ದಾರೆ.

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭಿಕ ಕೆಲವು ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಸಂಯೋಜನೆ ತೋರುವಲ್ಲಿ ಎಡವಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್, ನಂತರ ಗಾಯದ ಸಮಸ್ಯೆಯಿಂದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ಬಲವಾಗಿ ಕಮ್‌ಬ್ಯಾಕ್ ಮಾಡಿದ್ದ ಶ್ರೇಯಾಂಕ, ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಪಡೆದು ಗಮನ ಸೆಳೆದರೂ ಆರ್‌ಸಿಬಿ ಕೇವಲ ಒಂದು ರನ್ ನಿಂದ ಸೋಲು ಕಂಡಿತ್ತು.  <a href=https://youtube.com/embed/A3y1r31rSoU?autoplay=1&mute=1><img src=https://img.youtube.com/vi/A3y1r31rSoU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಫೈನಲ್ ಪಂದ್ಯದಲ್ಲೂ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಪಡೆದಿದ್ದ ಆರ್‌ಸಿಬಿ ಸ್ಪಿನ್ನರ್ ಶ್ರೇಯಾಂಕ ಪಾಟೀಲ್, ಡೆಲ್ಲಿ ಕ್ಯಾಪಿಟಲ್ಸ್‌ನ ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಆರುಂಧತಿ ರೆಡ್ಡಿ ಹಾಗೂ ತಾನಿಯಾ ಭಾಟಿಯಾ ವಿಕೆಟ್ ಪಡೆದು ತಂಡ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಲು ನೆರವು ನೀಡಿದ್ದರು. 

ಗಾಯದ ಸಮಸ್ಯೆಯಿಂದ ಬಲವಾಗಿ ಕಮ್ ಬ್ಯಾಕ್ ಮಾಡಿ ಟೂರ್ನಿಯಲ್ಲಿ 13 ವಿಕೆಟ್ ಪಡೆದು ತನ್ನದೇ ತಂಡದ ಸೋಫಿ ಮೊಲಿನುಕ್ಸ್ ಹಾಗೂ ಶೋಭನಾ ಆಶಾ ಅವರನ್ನು ಹಿಂದಿಕ್ಕಿ ಪರ್ಪಲ್ ಕ್ಯಾಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.