ಕೇಳಿದ್ದು ಒಂದು ಮಗು ಅದೇ ಕೊಟ್ಟಿಲ್ಲ ಅಂದ್ರೆ ಹೇಗೆ; ಚಂದನ್ ಸ್ನೇಹಿತ

 

ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ವಿಡಿಯೋ ಹಾಕುತ್ತಾ ತಮ್ಮದು ರೊಮ್ಯಾಂಟಿಕ್ ಜೋಡಿ ಎಂದು ಬಿಂಬಿಸಿಕೊಂಡಿದ್ದ ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರ ವಿಚ್ಛೇದನದ ಕಾರಣವೇನು ಎಂದು ಅವರ ಆಪ್ತ ನವರಸ್ ವಿವರಿಸಿದ್ದಾರೆ. ಹೌದು ಅವರಿಬ್ಬರ ಕೇರಿಯರ್ ವಿಷಯ ಮನಸ್ಥಾಪ ಮೂಡಿದೆ.

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಚಂದನ್​ ಶೆಟ್ಟಿ ಅವರು ವಿನ್ನರ್​ ಆದರೆ, ನಿವೇದಿತಾ ಗೌಡ ಅವರು ಮೂರನೇ ರನ್ನರ್​ ಅಪ್​ ಆಗಿದ್ದರು. ಆ ಶೋನಿಂದ ಇಬ್ಬರ ಖ್ಯಾತಿಯೂ ಹೆಚ್ಚಿತು. ಬಿಗ್​ ಬಾಸ್​ ಮುಗಿದ ಬಳಿಕ ನಿವೇದಿತಾ ಗೌಡ ಅವರು ಇನ್ನೂ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್ ಫೇಮಸ್​ ಆಗಿದ್ದಾರೆ. ಚಿತ್ರರಂಗದಲ್ಲಿ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿ ಚಂದನ್​ ಶೆಟ್ಟಿ ಬ್ಯುಸಿ ಆಗಿದ್ದಾರೆ.  <a href=https://youtube.com/embed/C6ZWb4lU6SQ?autoplay=1&mute=1><img src=https://img.youtube.com/vi/C6ZWb4lU6SQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ಥಾಪ ಉಂಟಾಗಿರುವ ಸಾಧ್ಯತೆ ಇದೆ.ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ತುಂಬ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಅವರು ಹೊಸ ಹೊಸ ರೀಲ್ಸ್​ ಹಂಚಿಕೊಳ್ಳುತ್ತಾರೆ. ಅವರ ಪೋಸ್ಟ್​ಗಳು ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗುತ್ತವೆ. ಅದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಾರೆ. ನಿವೇದಿತಾ ಗೌಡ ಅವರ ಪೋಸ್ಟ್​ಗೆ ಒಂದಷ್ಟು ಜನರು ನೆಗೆಟಿವ್​ ಕಮೆಂಟ್​ ಮಾಡುತ್ತಾರೆ.

 ಆ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಕಮೆಂಟ್​ಗಳಲ್ಲಿ ಅನೇಕರು ಚಂದನ್​ ಶೆಟ್ಟಿಯ ಹೆಸರನ್ನೂ ಆಗಾಗ ಎಳೆದು ತರುತ್ತಾರೆ. ಈ ಕಾರಣದಿಂದಲೂ ಸಂಸಾರದಲ್ಲಿ ಏನಾದರೂ ಕಿರಿಕ್​ ಆಗಿರಬಹುದೇ ಎಂದು ಕೂಡ ಕೆಲವರು ಊಹಿಸುತ್ತಿದ್ದಾರೆ. ಇನ್ನು ನಿವೇದಿತಾ ಸಣ್ಣ ಮಗುವಿನಂತೆ ಹೆಚ್ಚು ಮೆಚ್ಯೂರ್ ಅಲ್ಲ ಹಾಗಾಗಿ ಅವಳು ಸರಿಯಿಲ್ಲ ಎಂಬ ತೀರ್ಮಾನಕ್ಕೆ ಜನ ಬಹುಬೇಗ ಬಂದುಬಿಡುತ್ತಾರೆ.

ಈವರೆಗೂ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಸಾರ್ವಜನಿಕವಾಗಿ ಮನಸ್ತಾಪ ಹೊರಹಾಕಿರಲಿಲ್ಲ. ಏಕಾಏಕಿ ಅವರ ವಿಚ್ಛೇದನದ ಬಗ್ಗೆ ಸುದ್ದಿ ಕೇಳಿಬಂದಿರುವುದರಿಂದ ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಅಚ್ಚರಿ ಆಗಿದೆ. ಈ ಬಗ್ಗೆ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಕುಟುಂಬದವರು ಹೇಳಿಕೆ ನೀಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.