ದೊಡ್ಡ ಮಗ ದರ್ಶನ್ ಇರುವಾಗ ನಾನ್ಯಾಕೆ ಎಂದ ಯಶ್; ಸುಮಕ್ಕನ ಪ್ರಚಾರಕ್ಕೆ ಯಶ್ ಕತ್ತರಿ

 

ರಾಕಿಂಗ್ ಸ್ಟಾರ್ ಯಶ್ ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ನಡೆದ ಮಂಗಳಕರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಎಸ್ಎಸ್ ರಾಜಮೌಳಿ ಅವರು ತಮ್ಮ ಪತ್ನಿ ರಮಾ ಅವರೊಂದಿಗೆ ಭಾಗಿಯಾಗಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.ಈ ವೇಳೆ ನಟ ಯಶ್ ಹಳದಿ ಕುರ್ತಾ-ಪೈಜಾಮಾ, ತಲೆಗೆ ಓಂ ಬರಹ ವಿನ್ಯಾಸದ ಶಾಲು ಧರಿಸಿ ಆಗಮಿಸಿ ಅಭಿಮಾನಿಗಳಿಗೆ ಖುಷಿ ನೀಡಿದರು.

ಕಳೆದ ಬಾರಿ ಲೋಕಸಭೆ ಚುನಾವನೆಯಲ್ಲಿ ಯಶ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಪರ ಸಕ್ರಿಯವಾಗಿ ನಟ ದರ್ಶನ್ ಜೊತೆಗೆ ಪ್ರಚಾರ ನಡೆಸಿದ್ದರು. ಈ ಬಾರಿಯೂ ಯಶ್ ಚುನಾವಣೆ ಪ್ರಚಾರಕ್ಕೆ ಬರುತ್ತಾರಾ ಎಂದು ಇತ್ತೀಚೆಗೆ ಸುಮಲತಾಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದರು. ಆಗ ನಾನಿನ್ನೂ ಯಶ್ ಜೊತೆ ಮಾತುಕತೆ ನಡೆಸಿಲ್ಲ ಎಂದು ಸುಮಲತಾ ಹೇಳಿದ್ದಾರೆ. <a href=https://youtube.com/embed/4a7BnMEtJkk?autoplay=1&mute=1><img src=https://img.youtube.com/vi/4a7BnMEtJkk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದೀಗ ಬಳ್ಳಾರಿಗೆ ಭೇಟಿ ನೀಡಿದ್ದ ಯಶ್ ಗೆ ಮಾಧ‍್ಯಮಗಳು ಮತ್ತೆ ರಾಜಕೀಯ ಎಂಟ್ರಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ತುಸು ಬೇಸರ ಮತ್ತು ಕೋಪದಿಂದಲೇ ಉತ್ತರಿಸಿದ ನಟ ಯಶ್ ಈಗ ಆ ವಿಷಯ ಬೇಕಾ ಎಂದು ಕೇಳಿದರು. ಮಾಧ್ಯಮ ಪ್ರತಿನಿಧಿಗಳು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷದ ಪರ ಕೆಲಸ ಮಾಡುತ್ತೀರಿ ಎಂದು ಕೇಳಿದಾಗ, ನಾನು ರಾಜಕೀಯಕ್ಕೆ ಬರಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರದಲ್ಲಿ ಈ ಬಾರಿ ತೊಡಗಿಸಿಕೊಳ್ಳುವುದಿಲ್ಲ ಎಂದು ಸಂದೇಶ ನೀಡಿದ್ದಾರೆ.

ಹೆಚ್ಚು ಕಡಿಮೆ ಆರು ವರ್ಷದ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ಸೇರಿ ಯಶ್ ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿದ್ದರು. ರಸ್ತೆ ಅಪಘಾತದಲ್ಲಿ ಸಿಲುಕಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರಿಗೆ ಪೊಲೀಸ್ ತನಿಖೆಯ ಹೆಸರಿನಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.ಅಪಘಾತವಾದಾಗ ಗೊಲ್ಡನ್ ಅವರ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ ಎಂಬ ಸಂದೇಶ ಸಾರುವ ಉದ್ದೇಶದಿಂದ ಬಳ್ಳಾರಿ ಪೊಲೀಸರಿಂದ ನಡೆದಿದ್ದ ಜಾಗೃತಿಗೆ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಕೈ ಜೋಡಿಸಿದ್ದರು.