ನನ್ನ ಜೊತೆ ದರ್ಶನ್ ಯಾಕೆ ನ ಟಿಸಿಲ್ಲ; ಬೇಸರ ಹೊರ ಹಾಕಿದ ರಾಗಿಣಿ

 

ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ನಟಿ ರಾಗಿಣಿ ತಮ್ಮ ಸಿನಿಮಾ ಜೀವನದಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಿದ್ದಾರೆ. ಮೊದಲು ನಟಿಯಾಗಿ ಮಿಂಚಿದ್ದ ರಾಗಿಣಿ ಬಳಿಕ ಕೆಲವು ಸಂಕಷ್ಟಗಳನ್ನು ಎದುರಿಸಿದರು. ಜೈಲುವಾಸ ಕೂಡ ಅನುಭವಿಸುವಂತಾಯಿತು. ಬಿಡುಗಡೆಯಾದ ಬಳಿಕ ಇದೀಗ ಮತ್ತೆ ರಾಗಿಣಿ ನಟನೆ ಆರಂಭಿಸಿದ್ದು, ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿದ್ದಾರೆ.

ಈ ಮಧ್ಯ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಜೆ ರಾಜೇಶ್ ಜೊತೆಗಿನ ಸಂದರ್ಶನದಲ್ಲಿ ರಾಗಿಣಿ ಭಾಗಿಯಾಗಿದ್ದು, ತಮ್ಮ ಬಾಲ್ಯ, ಸಿನಿಮಾ ಬದುಕು, ಕುಟುಂಬ ಹಾಗೂ ಕಷ್ಟದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.ಸುದೀಪ್‌, ಶಿವಣ್ಣ, ಉಪೇಂದ್ರ ಅವರ ಜೊತೆ ಸಿನಿಮಾ ಮಾಡಿದ್ದೀರಿ. ಆದರೆ ದರ್ಶನ್‌, ಯಶ್‌ ಹಾಗೂ ಪುನೀತ್‌ ಅವರ ಜೊತೆ ಯಾಕೆ ಸಿನಿಮಾ ಮಾಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ರಾಗಿಣಿ, ಯಶ್‌ ಹಾಗೂ ಪುನೀತ್‌ ಅವರ ಜೊತೆ ಅವಕಾಶ ಅಥವಾ ಸಂದರ್ಭಗಳು ನನಗೆ ಸಿಕ್ಕಿಲ್ಲ. 

ಆದರೆ ದರ್ಶನ್ ಅವರೊಂದಿಗೆ ನಾನು ಮೂರು ಸಿನಿಮಾ ಸಹಿ ಮಾಡಿ ಶೂಟ್ ಮಾಡಿಲ್ಲ. ನಾನು ದರ್ಶನ್‌ ಜೊತೆ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದೆ ಆದರೆ ಅವುಗಳು ಆಗಲಿಲ್ಲ ಎಂದರು. ದರ್ಶನ್ ಜೊತೆ ಯಾಕೆ ಆ ಮೂರು ಸಿನಿಮಾಗಳಲ್ಲಿ ನಟಿಸಲಿಲ್ಲ? ಆ ಸಿನಿಮಾಗಳು ಕೈ ತಪ್ಪಿ ಹೋಗುವುದಕ್ಕೆ ಕಾರಣವೇನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಗಿಣಿ, ಯಾಕೆ ಸಿನಿಮಾ ಮಾಡಿಲ್ಲ ಅಂದರೆ, ಪಾಲಿಟಿಕ್ಸ್. 

ಅದಕ್ಕೆ ಆಂತರಿಕ ರಾಜಕೀಯ ಅಂತ ಹೇಳಬಹುದು. ಒಳಗೊಳಗೆ ಗೇಮ್ ಆಡೋರು. ಚೀಪ್ ಗಿಮಿಕ್ಸ್ ಮಾಡುತ್ತಾರೆ. ಕೆಲವರ ಬದುಕಿನ ಉದ್ದೇಶನೇ ಅದು. ಹಾಗೆಲ್ಲ ಮಾಡುವವರು ಇದ್ದಾರೆ. ನಿಮ್ಮ ಕೆಲಸವನ್ನು ಹೇಗೆ ಹಾಳು ಮಾಡೋದು. ಒಬ್ಬರು ಇನ್ನೊಬ್ಬರೊಂದಿಗೆ ಕೆಲಸ ಮಾಡಬಾರದು ಅಂತ ಮಾಡೋದು. ಅದೇ ಜೀವನ ಅವರದ್ದು ಎಂದು ಅಂತಹ ವ್ಯಕ್ತಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.