ತೆಲುಗು ಬಿಗ್ ಬಾಸ್ ನಲ್ಲಿ ಅಬ್ಬರಿಸುತ್ತಿರುವ ಮಂಗಳೂರು ಶೆಟ್ಟಿ, ಕನ್ನಡದಲ್ಲಿ ಯಾಕೆ ಅವಕಾಶ ಸಿಗಲಿಲ್ಲ
Sep 19, 2024, 08:57 IST
ಕನ್ನಡದ ಬಹಳಷ್ಟು ತಾರೆಯರು ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ನನ್ನರಸಿ ರಾಧೆ ಧಾರವಾಹಿಯಲ್ಲಿ ನಟಿಸಿದ್ದ ನಟ, ಮಿಥುನರಾಶಿ ಅಲ್ಲಿ ನಟಿಸಿದ್ದ ನಟ ಇನ್ನು ನಟಿಯರಂತೂ ಕೇಳಲೇ ಬೇಡಿ ಸ್ಟಾರ್ ಮಾ ದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ಒಟ್ಟು 14 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಇದರಲ್ಲಿ ನಾಲ್ವರು ಕನ್ನಡಿಗರು. ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು. ಇದರಲ್ಲಿ ಓರ್ವ ಮಂಗಳೂರಿನ ಪ್ರತಿಭೆ. ಆತನೇ ಪೃಥ್ವಿರಾಜ್ ಶೆಟ್ಟಿ.
ಪಕ್ಕಾ ಕರಾವಳಿ ಹುಡುಗ ಪೃಥ್ವಿರಾಜ್ ಶೆಟ್ಟಿ ತನ್ನ ಪ್ರಾಥಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರು, ಕಾಸರಗೋಡು ಮತ್ತು ಉಡುಪಿ ಜಿಲ್ಲೆಯಲ್ಲಿ ಪೂರೈಸಿದ್ದಾರೆ. ಶಿಕ್ಷಣದ ನಂತರ ಪೃಥ್ವಿ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟರು. ಕಾಲೇಜು ದಿನಗಳಲ್ಲಿ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದ ಪೃಥ್ವಿ ಶೆಟ್ಟಿಗೆ ನಂತರ ನಟನೆಯತ್ತ ಆಸಕ್ತಿ ಬಂತು. ಹೀಗಾಗಿ ಸಿನಿಮಾ ಮತ್ತು ಟಿವಿ ಶೋಗಳಲ್ಲಿ ನಟಿಸುವ ಆಸೆಯಿಂದ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದರು.
<a href=https://youtube.com/embed/KsiurphQLHQ?autoplay=1&mute=1><img src=https://img.youtube.com/vi/KsiurphQLHQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಪೃಥ್ವಿ ಪ್ರಿನ್ಸ್ ಶೆಟ್ಟಿ ಅವರ ನಟನಾ ವೃತ್ತಿಜೀವನವು 2022 ರಲ್ಲಿ ತೆಲುಗು ಚಲನಚಿತ್ರ ಮಹಿಷಾ ನಲ್ಲಿ ಪ್ರಾರಂಭವಾಯಿತು. ಈ ಚಿತ್ರವು ಪೃಥ್ವಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಯ್ತು. ಅದೇ ವರ್ಷ ಸ್ಟಾರ್ ಸುವರ್ಣದಲ್ಲಿ ಅರ್ಧಾಂಗಿ ಧಾರವಾಹಿಯಲ್ಲಿ ಪೃಥ್ವಿ ಶೆಟ್ಟಿ ನಾಯಕನಾಗಿ ದಿಗಂತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
2023ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೀತಿಯ ಅರಸಿ ಧಾರಾವಾಹಿಯಲ್ಲಿ ರಾಕಿ ಪಾತ್ರದಲ್ಲಿ ನಾಯಕನ ಪಾತ್ರ ನಿಭಾಯಿದ್ದರು. ಒಂದೆರಡು ಸೀರಿಯಲ್ ನಲ್ಲಿ ನಟಿಸಿದ ಬಳಿಕ ಉತ್ತಮ ಅವಕಾಶ ಸಿಗಲಿಲ್ಲ. ಬಳಿಕ 2023 ರಲ್ಲಿ ತೆಲುಗಿನಲ್ಲಿ ನಾಗಪಂಚಮಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದು ಪೃಥ್ವಿ ಶೆಟ್ಟಿ ಬಣ್ಣದ ಬದುಕಿಗೆ ಬ್ರೇಕ್ ಕೊಟ್ಟಿತು. ಒಂದೆರಡು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.