ಈ ಲಡ್ಡು ಮುತ್ಯಾ ಮುಟ್ಟಿದೆಲ್ಲ ಚಿನ್ನವಾಗುವುದು ಯಾಕೆ, ಈತನ ಬಳಿ ಅಂತಹದ್ದು ಏನಿ ದೆ
Oct 7, 2024, 18:54 IST
ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಹತ್ತಾರು ಲಡ್ಡು ಮುತ್ಯಾನ ರೀಲ್ಸ್ಗಳು ಸಾಲು ಸಾಲಾಗಿ ಬರುತ್ತವೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ನಕಲಿ ಲಡ್ಡು ಮುತ್ಯಾನ ರೀಲ್ಸ್ಗಳು ಹರಿದಾಡುತ್ತಿವೆ. ವಿಕಲಚೇತನನೋರ್ವ ಮಾಡಿದ ಈ ರೀಲ್ಸ್ ಭಾರೀ ವೈರಲ್ ಆಗಿದ್ದು ಹತ್ತಾರು ಜನ ಅದನ್ನು ಅನುಕರಣೆ ಮಾಡಿ ರೀಲ್ಸ್ ಮಾಡ್ತಿದ್ದಾರೆ.
ಆದರೆ ಯಾರು ಈ ಲಡ್ಡು ಮುತ್ಯಾ, ಅವರು ಮಾಡಿದ ಪವಾಡವೇನು? ಲಡ್ಡು ಮುತ್ಯಾನ ಹಾಡಿಗೆ ರೀಲ್ಸ್ ಮಾಡಿದ ವಿಕಲಚೇತನ ವ್ಯಕ್ತಿ ಪವಾಡ ಪುರುಷನಾ ಎಂಬ ಬಗ್ಗೆ ಹಲವರಿಗೆ ಹಲವು ಅನುಮಾನಗಳು ಮೂಡಿವೆ.ಬಾಗಲಕೋಟೆಯ ಪವಾಡ ಪುರುಷ ಲಿಂಗೈಕ್ಯ ಲಡ್ಡು ಮುತ್ಯಾ ಅವರ ಹೆಸರಲ್ಲಿ ನಕಲಿ ಲಡ್ಡು ಮುತ್ಯಾ ಎಂದು ವಿಕಲಚೇತನ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ.
ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ ಎಂಬ ಹಾಡಿನೊಂದಿಗೆ ವಿಕಲಚೇತನ ವ್ಯಕ್ತಿ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಇಬ್ಬರು ವ್ಯಕ್ತಿಗಳು ಚೇರ್ನಲ್ಲಿ ಕುಳಿತ ನಕಲಿ ಲಡ್ಡು ಮುತ್ಯಾನ ಎತ್ತಿ ಹಿಡಿಯುತ್ತಾರೆ. ಆಗ ನಕಲಿ ಮುತ್ಯಾ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನೆ ಭಸ್ಮದ ರೀತಿ ಲೇಪಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಟ್ರೆಂಡಿಂಗ್ ನಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ದೇಶದಾದ್ಯಂತ, ವಿದೇಶದಲ್ಲೂ ಯುವಕರು, ಹಿರಿಯರು, ಮಕ್ಕಳು ಸೇರಿದಂತೆ ಅನೇಕರು ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿ ವಿಡಿಯೊ ಪೋಸ್ಟ್ ಮಾಡ್ತಿದ್ದಾರೆ.
<a href=https://youtube.com/embed/gY1ULj07YOg?autoplay=1&mute=1><img src=https://img.youtube.com/vi/gY1ULj07YOg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಇವರು ತಲೆಗೆ ಮೈಗೆ ಗೋಣಿ ಚೀಲದ ತಟ್ಟು ಸುತ್ತಿಕೊಳ್ತಿದ್ದರು. ತಟ್ಟಿಗೆ ಲಡ್ ಅಂತ ಕೂಡ ಇವರನ್ನು ಕರೆಯಲಾಗುತ್ತಿತ್ತು. ಈ ಕಾರಣಕ್ಕೆ ಲಡ್ಡು ಮುತ್ಯಾ ಎಂಬ ಹೆಸರು ಬಂತು. ಲಡ್ಡು ಮುತ್ಯಾ ಅವರ ಮೂಲ ಹೆಸರು ಮಲ್ಲಯ್ಯ. 1970-1990ರ ದಶಕದಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಲಡ್ಡು ಮುತ್ಯಾ ಅವರನ್ನು ಪವಾಡ ಪುರುಷ ಎಂದು ಪೂಜಿಸುತ್ತಿದ್ದರು. ಇವರು ಮದುವೆಯಾದ ಬಳಿಕ ಪತ್ನಿ ತ್ಯಜಿಸಿ ವಿರಾಗಿಯಾಗಿದ್ದರು.
ಮೈಮೇಲೆ ಬರಿ ಗೋಣಿ ಚೀಲದ ತಟ್ಟು ಸುತ್ತಿಕೊಳ್ಳುತ್ತಿದ್ದರು. ಇವರು ಆಡಿದ ಮಾತುಗಳು ನಿಜವಾಗ್ತಿದ್ದವು. ಅವರು ಯಾವ ಅಂಗಡಿಗೆ ಬಂದು ಹೋಗ್ತಾರೆ ಅವರಿಗೆ ಭಾರಿ ಲಾಭವಾಗ್ತಿತ್ತು. ಅವರ ಭಾಗ್ಯದ ಬಾಗಿಲು ತೆರೆಯುತ್ತಿತ್ತು. ಅವರು ಯಾರ ಮನೆಗೆ ಕಾಲಿಡ್ತಾರೆ ಅವರಿಗೆ ಅದೃಷ್ಟ ದೇವತೆ ಒಲಿಯುತ್ತಿದ್ದಳು. ಅವರ ಕುಟುಂಬ ಅಭಿವೃದ್ಧಿ ಆಗ್ತಿತ್ತು ಎಂಬ ನಂಬಿಕೆ ಇತ್ತು. ಈಗ ವೈರಲ್ ಆಗ್ತಿರೋದು ನಕಲಿ ಲಡ್ಡು ಮುತ್ಯಾದು ಎನ್ನಲಾಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.