Instagram ನಲ್ಲಿ 2.7 ಕೋಟಿ ರೂ ಕಳೆದುಕೊಂಡ ಮಹಿಳೆ; ಆ ವಿಡಿಯೋ ಲೀ ಕ್ ಮಾಡಿ ದರೋಡೆ

 

ಯೂಟ್ಯೂಬ್​ ಹಾಗೂ ಇನ್​ಸ್ಟಾಗ್ರಾಮ್​​​ ಬಳಕೆದಾರರೇ​​ ಬಿ ಅಲರ್ಟ್​. ಹಣ ಸಿಗುತ್ತೆ ಅಂತ ನೀವೇನಾದ್ರೂ ಬಿಟ್ಟಿ ದುಡ್ಡಿಗೆ ಆಸೆ ಪಟ್ರೆ ನಿಮ್ಮ ಬ್ಯಾಂಕ್​ ಬ್ಯಾಲೆನ್ಸ್​​ ಕಾಲಿ ಆಗೋದು ಪಕ್ಕಾ. ಹೀಗೆ ಇದೇ ರೀತಿ ಹಣ ಸಿಗುತ್ತೆ ಅಂತ ಮಹಿಳೆಯೊಬ್ಬಳು ಕಳೆದೊಕೊಂಡಿರೋದು ಬರೋಬ್ಬರಿ ಎರಡೂವರೆ ಕೋಟಿ. ಆದ್ರೆ ಮಹಿಳೆ ಮಾಡಿದ ಅದೊಂದು ಚಾಲಾಕಿತನದಿಂದ ಇಲ್ಲಿ ಒಂದೂವರೆ ಕೋಟಿ ವಾಪಸ್​​ ಪಡೆದಿದ್ದಾರೆ.

ಯೂಟ್ಯೂಬ್​​ ಲಿಂಕ್​ ಲೈಕ್​ ಮಾಡಿ ಹಣ ಗೆಲ್ಲಿ ಅಂತಾ ಮೆಸೇಜ್​​ ಬಂದಿದೆ. ಇದನ್ನು ನೋಡಿದ ಕೂಡಲೇ ಮಹಿಳೆ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾಳೆ. ಅದಕ್ಕೆ ವಂಚಕರು ಥ್ಯಾಂಕ್ಯೂ ಅಂತಾ ಮೆಸೇಜ್​ ಕಳುಹಿಸಿದ್ದಾರೆ. ಬಳಿಕ ಇದೇ ರೀತಿ ಹಣ ಇನ್ವೆಸ್ಟ್​​​ ಮಾಡಿ ಡಬಲ್​ ಆಗುತ್ತೆ ಅಂತಾ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಡಬಲ್​ ಆಗುತ್ತಾ ನಂಬಿ ಇನ್ವೆಸ್ಟ್​ ಮಾಡ್ತೀನಿ ಅಂತಾ ಹೇಳಿದ್ದಾಳೆ.

ಹೀಗೆ ಶುರುವಾಗಿದ್ದ ವಂಚಕರ ಜಾಲಕ್ಕೆ ಬಿದ್ದಿದ್ದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಆಂಟ್ರಪ್ರನ್ಯೂವರ್​ ಆಗಿ ಕೆಲಸ ಮಾಡ್ತಿದ್ದ 52 ವರ್ಷದ ಮಹಿಳೆ. ಹಂತ ಹಂತವಾಗಿ ಬರೋಬ್ಬರಿ 2.7 ಕೋಟಿ ಹಣ ಇನ್ವೆಸ್ಟ್​​ ಮಾಡಿದ್ರು. ಆದ್ರೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ಹಣವನ್ನ ಮಹಿಳೆ ವಾಪಸ್​ ಪಡೆಯೋದರಲ್ಲಿ ಯಶಸ್ವಿಯಾಗಿದ್ದಾರೆ.

ಏಪ್ರಿಲ್​ನಲ್ಲಿ ಖದೀಮರಿಂದ ಮಹಿಳೆಗೆ ಬಂದಿದ್ದ ಮೆಸೇಜ್​ ಬಂದಿತ್ತು. ಆ ಮೆಸೇಜ್​ನಲ್ಲಿ ಯೂಟ್ಯೂಬ್​ ಲಿಂಕ್​ ಲೈಕ್​ ಮಾಡುವಂತೆ ಆಮೀಶ ಒಡ್ಡಿದ್ರು. ಈ ಮೆಸೇಜ್​​ಗೆ ಮಹಿಳೆ ರಿಪ್ಲೆ ಮಾಡಿ ಬಳಿಕ ಯೂಟ್ಯೂಬ್​ ಚಾನೆಲ್​ಗೆ ಲೈಕ್ ಮಾಡಿದ್ರು. ಹೀಗೆ ಲೈಕ್​ ಮಾಡಿದ್ರಿಂದ ಮಹಿಳೆಗೆ 10 ಸಾವಿರ ಅಮೌಂಟ್​ ಬಂದಿತ್ತು. ಬಳಿಕ ಮಹಿಳೆ ಜಾಲಕ್ಕೆ ಬಿದ್ದಿದ್ದು, ಕನ್ಫರ್ಮ್​​ ಆದ ಮೇಲೆ ಇನ್ವೆಸ್ಟ್​​ ಮಾಡುವಂತೆ ಹಾಗೂ ಹಣ ಡಬಲ್​ ಆಗುವಂತೆ ವಂಚಕರು ಆಫರ್ ಕೊಟ್ಟಿದ್ರು. 

ಇದಕ್ಕೆ ಮಹಿಳೆ ಯೆಸ್​ ಎಂದಿದ್ರು, ಬಳಿಕ ಮಹಿಳೆಯನ್ನ ಟೆಲಿಗ್ರಾಂಗೆ ಗ್ರೂಪ್​ಗೆ ಆ್ಯಡ್ ಕೂಡ ಮಾಡಲಾಗಿತ್ತು. ಈ ​ಗ್ರೂಪ್​ನಲ್ಲಿದ್ದ ನೂರಾರು ಮಂದಿ ಹಣ ಡಬಲ್​ ಆದ ಬಗ್ಗೆ ಮೆಸೇಜ್​ ಹಾಕ್ತಿದ್ರು. ಇದನ್ನ ನಂಬಿದ್ದ ಮಹಿಳೆ ಹಣ ಹಂತಹಣತವಾಗಿ 2.7 ಕೋಟಿ ಹಣ ಇನ್ವೆಸ್ಟ್​ ಮಾಡಿದ್ರು.

ಬಳಿಕ ಪದೇ ಪದೇ ಬರ್ತಿದ್ದ ಮೆಸೇಜ್​ನಿಂದ ಅನುಮಾನ ಬಂದಿದ್ದ ಮಹಿಳೆ ಮನೆಯವರಿಗೆ ವಿಚಾರ ತಿಳಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೊಟ್ಟ ದೂರಿನಿಂದ ಖದೀಮರ ಬ್ಯಾಂಕ್​​ ಅಕೌಂಟ್​ ಟ್ರೇಸ್​ ಮಾಡಿ ಫ್ರೀಜ್​ ಮಾಡಿದ್ರಿಂದ ಮಹಿಳೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ವಾಪಸ್ಸಾಗಿದೆ. 

ಅದೇನೆ ಇರಲಿ ಪೊಲೀಸ್​​ ಇಲಾಖೆ ಹಾಗೂ ಸರ್ಕಾರ ಎಷ್ಟೇ ಎಚ್ಚರವಹಿಸಿದ್ರೂ ಖದೀಮರ ಆಟಕ್ಕಂತೂ ಕಡಿವಾಣ ಬೀಳುತ್ತಿಲ್ಲ. ಇನ್ಮುಂದೆ ಗೊತ್ತಿಲ್ಲದ ಲಿಂಕ್​ ಕ್ಲಿಕ್​ ಮಾಡೋ ಮುನ್ನ ಹುಷಾರಾಗಿರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.