ಬಾಡ್ ಗಾರ್ಡ್ ಗಳಿಗೆ ದುಬೈನಲ್ಲಿ ಬಾಡೂಟ ಹಾಕಿದ ಯಶ್ ದಂಪತಿ
Sep 29, 2024, 10:24 IST
ಬಸ್ ಕಂಡಕ್ಟರ್ ಮಗನಾಗಿ , ಬಹಳ ಕಷ್ಟದ ದಿನಗಳನ್ನು ಕಂಡು ಇದೀಗ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿ ಆಗಿರುವ ನಟ ಯಶ್ ಸದ್ಯ ಪತ್ನಿ ನಟಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸದ ನಿಮಿತ್ತ ಮುಂಬೈಗೆ ಬಂದ ಯಶ್ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಟ ಯಶ್ ಕಂಡು ಅಭಿಮಾನಿಗಳು ಕನ್ನಡದಲ್ಲೇ ಮಾತಾಡಿಸಿದ್ದು ಮತ್ತೊಂದು ವಿಶೇಷವಾಗಿದೆ.
ಟಾಕ್ಸಿಕ್ ಸಿನಿಮಾಕ್ಕಾಗಿ ಫ್ಯಾಮಿಲಿ ಜೊತೆ ಮುಂಬೈನಲ್ಲಿರುವ ನಟ ಯಶ್ ಜೊತೆ ಪತ್ನಿ ರಾಧಿಕಾ, ಮಕ್ಕಳು ಹಾಗೂ ರಾಧಿಕಾ ಪಂಡಿತ್ ತಂದೆ-ತಾಯಿ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಸದಸ್ಯರ ಜೊತೆ ಸಿಬ್ಬಂದಿಯನ್ನುಕೂಡ ಜೊತೆಯಲ್ಲೇ ಕೂರಿಸಿಕೊಂಡು ಯಶ್ ಊಟ ಮಾಡಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯಶ್ ದಂಪತಿಯ ಸಿಂಪ್ಲಿಸಿಟಿಯನ್ನು ಕೊಂಡಾಡಿದ್ದಾರೆ.
ಅಷ್ಟಕ್ಕೂ ಯಶ್, ಪತ್ನಿ ರಾಧಿಕಾ ಪಂಡಿತ್ ಜೊತೆ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್ ಮಾಡಿದ್ದಾರೆ. ಯಶ್ ಅವರು ತಮ್ಮ ಬಾಡಿಗಾರ್ಡ್ ಶ್ರೀನಿವಾಸ್, ಜಿಮ್ ಟ್ರೇನರ್ ಪಾನಿಪುರಿ ಕಿಟ್ಟಿ ಜೊತೆಗೆ ಸೇರಿ ಒಂದೇ ಟೇಬಲ್‌ನಲ್ಲಿ ಊಟ ಮಾಡಿದ್ದಾರೆ. ಈ ಫೋಟೋ ಈಗ ವೈರಲ್ ಆಗ್ತಿವೆ. ಹೌದು ಬಡತನದಲ್ಲಿ ಹುಟ್ಟಿ ಬೆಳೆದ ನಟ ಯಶ್ ಸಿಂಪಲ್ ಆಗಿಯೇ ಬದುಕಲು ಇಷ್ಟ ಮಾಡ್ತಾರೆ.
ಹಾಗಾಗಿ ಅವರು ನಾವು ಕೂಡ ಕಾಮನ್ ಮ್ಯಾನ್ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಯಶ್ ಹಾಗೂ ರಾಧಿಕಾ ಪಂಡಿತ್, ರಸ್ತೆ ಬದಿಯ ಸಣ್ಣ ಕಿರಾಣಿ ಅಂಗಡಿಯಲ್ಲಿ ಮಕ್ಕಳಿಗೆ ತಿಂಡಿ ಕೊಡಿಸಿದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿಯೇ ಬ್ಯುಸಿ ಇದ್ದಾರೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಚಿತ್ರೀಕರಣ ಕೂಡ ಶುರು ಆಗಿದೆ. ಇಲ್ಲಿಯ ಎಚ್.ಎಂ.ಟಿ. ಫ್ಯಾಕ್ಟರಿಯಲ್ಲಿ ಸಿನಿಮಾದ ಸೆಟ್ ಕೂಡ ಹಾಕಲಾಗಿದೆ. ಇದರ ಮಧ್ಯೆ ರಾಕಿಂಗ್ ಸ್ಟಾರ್ ಯಶ್ ಬಿಡುವು ಮಾಡಿಕೊಂಡು ಫ್ಯಾಮಿಲಿ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.