ಯಶ್ ದರ್ಶನ್ ಸುದೀಪ್ ಗೆ ಈ ಜೀವ ಮಾನದಲ್ಲಿ ಇಂತಹ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದ ಪ್ರೇಕ್ಷಕರು

 

ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಕಾಂತಾರಾ: ಚಾಪ್ಟರ್ 1’ ಅಕ್ಟೋಬರ್ 2ರಂದು ಬಿಡುಗಡೆಯಾಗಬೇಕಿದ್ದರೂ, ಅಕ್ಟೋಬರ್ 1ರ ರಾತ್ರಿ ಕೆಲವೆಡೆ ವಿಶೇಷ ಶೋ ನಡೆಸಲಾಯಿತು. ಇದರಿಂದಲೇ ಸಿನಿಮಾ ನೋಡಿದವರು ತಮ್ಮದೇ ಆದ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮೊದಲ ವಿಮರ್ಶೆಗಳ ಪ್ರಕಾರ, ಚಿತ್ರವು ದೃಶ್ಯಕಾವ್ಯ ರೀತಿಯಲ್ಲಿ ಮೂಡಿಬಂದಿದ್ದು, ಪ್ರತಿಯೊಂದು ಫ್ರೇಮ್ ಕಲಾತ್ಮಕ ಪೇಂಟಿಂಗ್ ಹೀಗಿದೆ ಎಂದು ಹಲವರು ಹೊಗಳಿದ್ದಾರೆ. ಅದ್ಭುತ ಸೆಟ್‌ಗಳು, ಶಕ್ತಿಶಾಲಿ ಅಭಿನಯ ಮತ್ತು ಭಾವಪೂರ್ಣ ದೃಶ್ಯಗಳು ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ ಎಂದು ಅಭಿಮಾನಿಗಳು ಹೇಳಿದ್ದಾರೆ. <a style="border: 0px; overflow: hidden" href=https://youtube.com/embed/nZ32Noh5AZM?autoplay=1&mute=1><img src=https://img.youtube.com/vi/nZ32Noh5AZM/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ರಿಷಬ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ಅವರ ಅಭಿನಯವನ್ನು ವಿಶೇಷವಾಗಿ ಮೆಚ್ಚಲಾಗಿದೆ. ರಿಷಬ್ ತಮ್ಮ ಸ್ಟೋರಿ ಟೆಲಿಂಗ್ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದರೆ, ರುಕ್ಮಿಣಿ ತಮ್ಮ ಗ್ಲಾಮರ್ ಮತ್ತು ನೈಸರ್ಗಿಕ ಅಭಿನಯದಿಂದ ಗಮನ ಸೆಳೆದಿದ್ದಾರೆ. ಅನೇಕರು ಚಿತ್ರಕ್ಕೆ “larger-than-life experience” ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.ಆದರೆ, ಎಲ್ಲರೂ ಮೆಚ್ಚಿಲ್ಲ. ಕೆಲವರು ಚಿತ್ರದ ಕಥಾಹಂದರ ಸಾಧಾರಣವಾಗಿದೆ, ಡಲ್ ಆಗಿದೆ ಎಂದು ಹೇಳಿದ್ದಾರೆ.

ರುಕ್ಮಿಣಿ ಹೊರತುಪಡಿಸಿ ಇತರರ ಅಭಿನಯ ಅಷ್ಟಾಗಿ ಮನಸೂಡಲಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಹೀಗಾಗಿ ಸಿನಿಮಾ ಬಗ್ಗೆ ಅಭಿಪ್ರಾಯ ಮಿಶ್ರವಾಗಿದ್ದು, ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.ಇದೇ ವೇಳೆ, ತೆಲುಗು ರಾಜ್ಯಗಳಲ್ಲಿ ಈ ಚಿತ್ರ ವಿವಾದಕ್ಕೊಳಗಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಅಭಿಯಾನ ನಡೆಸಿದ್ದು, ಇದಕ್ಕೆ ರಾಜಕೀಯ ತಿರುವು ದೊರೆತಿದೆ. ಆದರೂ, ಹೈದರಾಬಾದ್ ಪ್ರಚಾರ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿಯವರು ಕನ್ನಡದಲ್ಲೇ ಮಾತನಾಡಿದ್ದು ಅಭಿಮಾನಿಗಳ ಮನ ಗೆದ್ದಿದೆ.