ಶಾಟ್ಸ್೯ ಧರಿಸಿ ಬೆಂಗಳೂರು ಸುತ್ತಿದ ಯುವತಿ, ಸರಿಯಾಗಿ ಕ್ಲಾಸ್ ತೆಗೆದುಕೊಂಡ ಆಂಟಿ

 
 ಮೊದಲೆಲ್ಲಾ ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಇದೀಗ ಹೊಟ್ಟೆ, ಬಟ್ಟೆ ಇವೆರಡೂ ಬಳಸುವುದು ಬದಲಾಗಿದೆ.ಈಗೀಗ ಶಾರ್ಟ್ಸ್‌, ತುಂಡುಡುಗೆ ತೊಟ್ಟು ಓಡಾಡುವುದು ಕಾಮನ್‌ ಆಗಿ ಬಿಟ್ಟಿದೆ. ಬೆಂಗಳೂರು, ಮುಂಬೈನಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಯುವತಿಯರು ಸ್ಟೈಲಿಷ್‌ ಆಗಿ ಕಾಣಲು ತುಂಡುಡುಗೆ ತೊಟ್ಟು ಓಡಾಡ್ತಿರ್ತಾರೆ. 
ಆದ್ರೆ ದೇಸಿ ಜನ್ರಿಗೆ ಇದನ್ನೆಲ್ಲಾ ನೋಡಿದಾಗ ʼಇದೆಲ್ಲಾ ಏನ್‌ ಅವತಾರʼ ಅಂತ ಸ್ವಲ್ಪ ಸಿಟ್ಟು ಬರುತ್ತೆ. ಅದೇ ರೀತಿ ಇಲ್ಲೊಬ್ರು ಮಹಿಳೆ ಕೂಡಾ ಯುವತಿಯೊಬ್ಬಳು ಶಾರ್ಟ್ಸ್‌ ಧರಿಸಿ ಸಾರ್ವಜನಿಕವಾಗಿ ಓಡಾಡಿದ್ದನ್ನು ಕಂಡು ಸಿಕ್ಕಾಪಟ್ಟೆ ಕೋಪಗೊಂಡಿದ್ದು, ಹಂಗೆಲ್ಲಾ ಬಿಚ್ಕೊಂಡು ಓಡಾಡ್ಬಾರ್ದು ಎಂದು ಆಕೆಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಯುವತಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ಸ್‌ ಧರಿಸಲು ಅವಕಾಶವಿಲ್ವಾ? ಎಂದು ಪ್ರಶ್ನೆ ಕೇಳಿದ್ದಾಳೆ.
ಅಷ್ಟಕ್ಕೂ ಈ ಘಟನೆ ನಮ್ಮ ಬೆಂಗಳೂರಿನಲ್ಲಿ ನಡೆದಿದ್ದು, ಸೋಷಿಯಲ್‌ ಮೀಡಿಯಾ ಇನ್ಫ್ಲುಯೆನ್ಸರ್‌ ಟ್ಯಾನಿ ಭಟ್ಟಾಚಾರ್ಜಿ ಅವರು ಶಾರ್ಟ್ಸ್‌ ಧರಿಸಿ ಬೆಂಗಳೂರು ನಗರದಲ್ಲಿ ಓಡಾಡಿದ್ದಕ್ಕಾಗಿ ಮಹಿಳೆಯೊಬ್ಬರು ಹಿಂಗೆಲ್ಲಾ ತುಂಡುಡುಗೆ ತೊಟ್ಟು ಓಡಾಡ್ಬಾರ್ದು ಎಂದು ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಟ್ಯಾನಿ fit_and_fabb ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ಸ್‌ ಧರಿಸಲು ಅವಕಾಶವಿಲ್ವಾ? ಎಂದು ಪ್ರಶ್ನೆ ಕೇಳಿ ಪೋಸ್ಟ್ ಹಾಕಿದ್ದಾರೆ .
ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಯುವತಿಗೆ ಕ್ಲಾಸ್‌ ತೆಗೆದುಕೊಳ್ಳುವ ದೃಶ್ಯವನ್ನು ಕಾಣಬಹುದು. ಯುವತಿಯ ಪರವಾಗಿ ಒಂದಷ್ಟು ಜನ ಏನ್‌ ತಪ್ಪಿದೆ ಅದ್ರಲ್ಲಿ ಅಂತ ಪ್ರಶ್ನೆ ಮಾಡಿದ್ರೂ ಆ ಮಹಿಳೆ ಹಂಗೆಲ್ಲಾ ಬಿಚ್ಕೊಂಡು ಓಡಾಡ್ಬಾರ್ದೂ, ಎಲ್ರೂ ನನ್‌ ಮಕ್ಳೇ ಹಂಗೆಲ್ಲಾ ಓಡಾಡ್ಬಾರ್ದೂ ಎಂದು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.