ಉಡುಪಿ ದೈವಸ್ಥಾನದಲ್ಲಿ ಕಳ್ಳತನ ಮಾಡಿದ ಯುವಕ; ಕದ್ದ ಮರುಕ್ಷಣ ನಿದ್ದೆಗೆ ಜಾರಿದ್ದಾನೆ

 
ಕರಾವಳಿ ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡಸದೃಶ ಘಟನೆ ನಡೆದಿದ್ದು, ಇದೊಂದು ದೈವ ಕಾರಣಿಕದ ಘಟನೆ ಎಂದೇ ಭಕ್ತರು ಹೇಳುತ್ತಿದ್ದಾರೆ. ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಕಳವು ಮಾಡಿದ ವ್ಯಕ್ತಿಯನ್ನು 24 ಗಂಟೆಯ ಒಳಗೆ ಬಂಧಿಸಲಾಗಿದೆ. ಇದರ ಸೂಚನೆಯನ್ನೂ ದೈವವೇ ನೀಡಿದೆ.
ಜು.4ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿತ್ತು. ಮರುದಿನ ಅಂದರೆ ಜು.5ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನೆ ಹಾಕಲಾಗಿತ್ತು. ಊರಿನ ಸಂಕಷ್ಟ ಬಗೆಹರಿಸುವ ದೈವ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದರು.
24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಪ್ರಾರ್ಥನೆಯ ಬಳಿಕ ಜು.6ರಂದು ಬೆಳಿಗ್ಗೆ ಕಳ್ಳ ಪತ್ತೆಯಾಗಿದ್ದಾನೆ! ಕಳವು ಮಾಡಿ ನಗರದಿಂದ ಪರಾರಿಯಾಗಲು ಬಸ್‌ ನಿಲ್ದಾಣಕ್ಕೆ ತೆರಳಿ ಅಲ್ಲಿ ಕಾಯುತ್ತಿದ್ದ ಈತ ಸಿಕ್ಕಿಬಿದ್ದಿದ್ದಾನೆ. ಬಸ್ ನಿಲ್ದಾಣ ಪರಿಸರದಲ್ಲಿ ಅಲರ್ಟ್‌ ಆಗಿದ್ದ ಆಟೋ ಚಾಲಕರೊಬ್ಬರಿಂದ ಈತನ ಪತ್ತೆಯಾಗಿದೆ.
ಈತ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಗಲಕೋಟೆ ಮೂಲದ ಮುದುಕಪ್ಪ ಪೊಲೀಸರ ಸೆರೆಯಾದ ಕಳ್ಳನಾಗಿದ್ದು, ಈತ ಬಾಗಲಕೋಟೆಗೆ ಹೋಗಬೇಕಾದ ಬಸ್ಸಿಗೆ ಕಾಯುತ್ತಾ ನಿಲ್ದಾಣದಲ್ಲಿ ನಿದ್ದೆ ಹೋಗಿದ್ದ. ಬೆಳಿಗ್ಗೆ ಎಂಟು ಗಂಟೆಯಾದರೂ ಮಂಪರಿನಲ್ಲಿ ಮಲಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. <a href=https://youtube.com/embed/zaImGTTJMjg?autoplay=1&mute=1><img src=https://img.youtube.com/vi/zaImGTTJMjg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ದೈವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿ ಹೊಂದಿದ್ದ ಕಳ್ಳ ಮುದುಕಪ್ಪ, ಚಿಟ್ಪಾಡಿ ದೈವಸ್ಥಾನದ ನಂತರ ಉದ್ಯಾವರ ಪರಿಸರದಲ್ಲೂ ಕಳ್ಳತನ ಮಾಡಿದ್ದ. ದೋಚಿದ ಹಣದೊಂದಿಗೆ ಬಾಗಲಕೋಟೆಗೆ ಹೋಗಲು ತಯಾರಿ ಮಾಡಿಕೊಂಡು ಬಸ್‌ ನಿಲ್ದಾಣಕ್ಕೆ ಬಂದಿದ್ದು, ಅಂದು ಬಸ್ ಸಿಗದ ಕಾರಣ ಬಸ್ ಸ್ಟಾಂಡ್‌ನಲ್ಲಿ ಉಳಿದುಕೊಂಡಿದ್ದ.
ಹೀಗೆ ಕಳ್ಳನನ್ನು ತೋರಿಸಿ ಮಾತು ಉಳಿಸಿಕೊಂಡ ಬಬ್ಬು ಸ್ವಾಮಿ ದೈವದ ಕಾರಣಿಕದ ಬಗ್ಗೆ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಹಿಂದೆಯೂ ಇದೇ ಸನ್ನಿಧಾನದಲ್ಲಿ ಇನ್ನೊಂದು ಪವಾಡ ನಡೆದಿತ್ತು. ದೈವ ಸನ್ನಿಧಾನಕ್ಕಾಗಿ ಕೊರೆಯಿಸಿದ ಬೋರ್ವೆಲ್‌ನಲ್ಲಿ ನೀರು ಸಿಗದೇ ಹೋದಾಗ ಸಾಮೂಹಿಕ ಪ್ರಾರ್ಥನೆ ನಡೆಸಲಾಗಿತ್ತು. ಪ್ರಾರ್ಥನೆ ನಡೆದ ಬೆನ್ನಲ್ಲೇ ಬೋರ್‌ವೆಲ್‌ನಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.