ಎಲ್ಲವೂ ಮುಗಿಸಿದ ಪ್ರಿಯತಮ,‌ ಮೊಬೈಲ್ ‌ನಲ್ಲಿ ಮಾತ್ರೆ ನೋಡಿದ ಪೋಷಕರಿಗೆ ಡವಡವ

 | 
Ud
ಪ್ರೀತಿ ಮಾಯೆ ಹುಷಾರು ಅನ್ನೋದು ಸುಳ್ಳೇನಲ್ಲ ಆದ್ರೆ ಅದನ್ನ ಜನ ನಂಬುವುದಿಲ್ಲ ಅಷ್ಟೇ.ಆಕೆ 17 ವರ್ಷದ ಅಪ್ರಾಪ್ತ ಯುವತಿ .ಹದಿಹರೆಯದ ವಯಸ್ಸಿನಲ್ಲಿ ನನಗೂ ಒಬ್ಬ ಗೆಳೆಯ ಬೇಕು ಅಂತಾ ಅವಳಿಗೂ ಅನ್ನಿಸಿತ್ತು. ಮೊಬೈಲ್ ಮೂಲಕ ಕೆಲವೇ ತಿಂಗಳ ಪರಿಚಯವಾಗಿದ್ದ ಯುವಕನ ಜೊತೆ ಪ್ರೇಮದ ಬಲೆಗೆ ಬಿದ್ದಿದ್ದ ಯುವತಿ ಇದೀಗ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.
ಈ ಹದಿಹರೆಯದ ವಯಸ್ಸು ಅನ್ನೋದು ತುಂಬಾ ಡೇಂಜರ್. ಈ ವಯಸ್ಸಿನಲ್ಲಿ ಮನಸ್ಸು ಕೇಳೋ ವಿಚಿತ್ರ ಆಸೆ ಕೆಲವೊಮ್ಮೆ ಜೀವನವನ್ನೇ ತೆಗೆದುಬಿಡುತ್ತದೆ. ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೇಮದ ಪಾಶಕ್ಕೆ ಸಿಲುಕಿದ ಚಿಗುರು ಈಗ ಬಾಡಿ ಹೋಗಿದೆ. ಕೆಲವೇ ತಿಂಗಳೊಳಗೆ ಪರಿಚಯವಾದ ಯುವಕ ತನಗೆ ಮೋಸ ಮಾಡಿದ ಅಂತಾ ಅಪ್ರಾಪ್ತ ಯುವತಿ ಈಗ ಸಾವಿಗೆ ಶರಾಣಾದ ಘಟನೆ ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.
ರಿಶ್ವಿ ಎಂಬ ಯುವತಿ ತನ್ನ ಸಂಬಂಧಿ ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ ಎಂಬಾತನ ಜೊತೆಗೆ ಲವ್ ಆಗಿದೆ. ಮೊಬೈಲ್ ಮೂಲಕವೇ ಪ್ರೀತಿಯನ್ನು ಗಟ್ಟಿಗೊಳಿಸಿದ ಯುವತಿ ಮುಂದೆ ಅವನನ್ನೇ ಅರ್ಧಾಂಗಿ ಎಂದು ಸ್ವೀಕರಿಸಿದ್ದಾಳೆ. ಪ್ರವೀಣನೂ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದು, ಊರಿಗೆ ಬಂದಾಗ ಮೀಟ್ ಮಾಡುತ್ತಿದ್ದ. ಕೆಲವೇ ತಿಂಗಳ ಲವ್​ನಲ್ಲಿ ಇವರಿಬ್ಬರ ಬಾಂಧವ್ಯ ಕೂಡ ಗಟ್ಟಿಯಾಗಿತ್ತು. ಕೇವಲ ಎಂಟು ತಿಂಗಳ ಪ್ರೇಮದಲ್ಲಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು.
ಈ ಸಂದರ್ಭದಲ್ಲಿ ಯುವತಿಗೆ ಪ್ರವೀಣ ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ದಾನೆ. ಯುವತಿ ಮನೆಯವರು ವಯಸ್ಸು ಪೂರ್ತಿಯಾದಾಗ ಮದುವೆ ಮಾಡಿ ಕೊಡೋದಾಗಿ ಹೇಳಿದ್ದಾರೆ. ಪ್ರೀತಿ ಸಾಗುತ್ತಿದ್ದಾಗ ಪ್ರವೀಣ್​ಗೆ ಯಾಕೋ ಈಕೆಗೆ ಜೊತೆಗಿನ ಸಾಂಗತ್ಯ ಬೋರ್ ಎನಿಸಿದೆ. ದೂರ ಆಗೋಣ ಬ್ರೇಕಪ್ ಅಂತಾ ಹೇಳಿದ್ದಾನೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರವೀಣ ಕೈ ಕೊಡುತ್ತಿರೋದನ್ನು ಸಹಿಸಲಾಗದೆ ಯುವತಿ ಇಲಿ ಪಾಶಣ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಬ್ಬರ ಪ್ರೇಮದ ಕುರಿತಾಗಿ ಇದೀಗ ರಿಶ್ವಿಯ ದೊಡ್ಡಮ್ಮನ ಮಗ ಸತ್ಯ ಬಿಚ್ಚಿಟ್ಟಿದ್ದಾನೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.