ಕೇವಲ ಸೀರಿಯಲ್ ನಲ್ಲಿ ನಟಿಸಿ ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿರುವ ಕನ್ನಡದ ನಟಿ
Mar 24, 2025, 08:57 IST
|

ನಟಿ ರಮೋಲಾ ಭರ್ಜರಿ ಬ್ಯಾಚುಲರ್ಸ್ 2 ವೇದಿಕೆಯಲ್ಲಿ ತಾವು ಒಂದು ದಿನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ರಮೋಲಾ ಒಂದು ದಿನದ ಖರ್ಚು ಕೇಳಿ ನೀವು ದಂಗಾಗೋದಂತೂ ಗ್ಯಾರೆಂಟಿ. ಹಾಗಾದರೆ ರಮೋಲಾ ಅವರ ಒಂದು ದಿನದ ಖರ್ಚು ಎಷ್ಟು ಎಂಬುದರ ಬಗ್ಗೆ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ.
ನಟಿ ರಮೋಲಾ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ 2 ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ರಕ್ಷಕ್ ಬುಲೆಟ್ ಮೆಂಟರ್ ಆಗಿ ಪ್ರೇಕ್ಷಕರನ್ನು ಸಖತ್ ಎಂಟರ್‌ಟೈನ್ ಮಾಡುತ್ತಿದ್ದಾರೆ. ನೋಡುವುದಕ್ಕೂ ಸಖತ್ ಬಿಂದಾಸ್ ಆಗಿರುವ ರಮೋಲಾ ಅವರ ಖರ್ಚು ಕೂಡ ಅಷ್ಟೇ ಬಿಂದಾಸ್ ಆಗಿದೆ. ರಮೋಲಾ ಒಂದು ದಿನಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಾರೆ ಎಂಬುದು ಸದ್ಯ ರಿವೀಲ್ ಆಗಿದ್ದು, ಅದನ್ನು ಕೇಳಿ ವೀಕ್ಷಕರು ಕಂಗಾಲಾಗಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ 2 ಕಾರ್ಯಕ್ರಮದಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ, ಬ್ಯೂಟಿಯರಿಗೆ ಒಂದು ದಿನದ ಅಂದಾಜಿನ ಖರ್ಚು ಎಷ್ಟು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಮೃತಾ, ಮೂರು ಸಾವಿರ ಎನ್ನುತ್ತಿದ್ದಂತೆ, ಈ ಸುನೀಲ ಒಂದು ದಿನವೂ ಅವಳ ಜೊತೆ ಬಾಳುವುದಿಲ್ಲ. ಬರೀ ಹಾಡು ಹೇಳಿಕೊಂಡು ಹೋಗಬೇಕು ಅಷ್ಟೇ ಎಂದು 'ಕ್ರೇಜಿ ಸ್ಟಾರ್' ರವಿಚಂದ್ರನ್ ಕಾಲೆಳೆದಿದ್ದಾರೆ. ಆಮೇಲೆ ಪವಿ ಪೂವಪ್ಪಗೆ ಈ ಪ್ರಶ್ನೆ ಕೇಳಲಾಗಿದ್ದು, ಒಂದು ದಿನಕ್ಕೆ ಅದು ಇದು ಎಲ್ಲಾ ಸೇರಿ 1,500 ರೂಪಾಯಿ ಖರ್ಚು ಆಗುತ್ತದೆ ಎಂದು ಪವಿ ಪೂವಪ್ಪ ಹೇಳಿದ್ದಾರೆ.
ಮುಂದುವರೆದು ರಮೋಲಾಗೆ ಇದೇ ಪ್ರಶ್ನೆಯನ್ನು ಕೇಳಿದಾಗ, ನಾನು ಒಂದು ದಿನಕ್ಕೆ ಹತ್ತು ಸಾವಿರ ರೂಪಾಯಿ ಖರ್ಚು ಮಾಡುತ್ತೀನಿ ಎಂದಿದ್ದಾರೆ. ರಮೋಲಾ ಹೇಳಿದ ಈ ಮಾತನ್ನು ಕೇಳಿದ್ದೇ ತಡ ನಿರಂಜನ್ ದೇಶಪಾಂಡೆ ಒಂದು ಕ್ಷಣ ಶಾಕ್ ಆಗಿ ಬಿಟ್ಟಿದ್ದಾರೆ. ಸದ್ಯ ಈ ಕುರಿತ ಪ್ರೋಮೋ ಇದೀಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಕಣ್ಣು ಬಾಯಿ ಬಿಟ್ಟಿದ್ದಾರೆ.
ದಿನಕ್ಕೆ ಹತ್ತು ಸಾವಿರ ಅಂದರೆ, ತಿಂಗಳಿಗೆ ಮೂರು ಲಕ್ಷ ರೂಪಾಯಿ. ಇಷ್ಟು ಹಣ ಎಲ್ಲಿಂದ ಬರುತ್ತದೆ ನಿಮಗೆ? ನಿಮ್ಮಂತವರನ್ನು ಮದುವೆ ಆದರೆ ಹುಡುಗರ ಪಾಡೇನು? ನಮ್ಮಂತಹ ಮಿಡಲ್ ಕ್ಲಾಸ್ ಜನರಿಗೆ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಸಂಬಳ ಬರುತ್ತೆ, ಅದನ್ನು ನೀವು ಒಂದೇ ದಿನದಲ್ಲಿ ಖರ್ಚು ಮಾಡುತ್ತೀರಾ. ನಿಮ್ಮ ಆದಾಯ ಏನು ಎಂದು ಹಲವರು ಬಗೆಬಗೆಯ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.