ಬದುಕಿಬಂದ ಲಕ್ಷ್ಮಿ, ಅತ್ತೆ ಕಾವೇರಿಯ ಮುಖವಾಡ ಕಳಚಿ ಹಾಕಿದ ಲಕ್ಷ್ಮಿ ಹಾಗೂ ಕೀರ್ತಿ
Dec 4, 2024, 16:02 IST
|
ಕಲರ್ಸ್ ಕನ್ನಡ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ವೀಕ್ಷಕರು ಕಾಯ್ತಿದ್ದ ಕ್ಷಣ ಬರ್ತಿದೆ. ಇಷ್ಟು ದಿನ ಮಹಾಲಕ್ಷ್ಮಿ ಕಾಣ್ತಾ ಇರಲಿಲ್ಲ. ಲಕ್ಷ್ಮಿ ಸಾವನ್ನಪ್ಪಿದ್ದು ಎಷ್ಟು ಸತ್ಯ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡ್ತಾನೇ ಇತ್ತು. ಆದ್ರೆ ಈ ಎಲ್ಲ ಕುತೂಹಲಕ್ಕೆ ತೆರೆ ಬೀಳುವ ಸಮಯ ಬಂದಿದೆ. ಮಹಾಲಕ್ಷ್ಮಿ ಎಂಟ್ರಿಯಾಗಿದೆ. ಕೋರ್ಟ್ ಗೆ ಲಕ್ಷ್ಮಿ ಬರ್ತಾ ಇದ್ದಂತೆ ಕಾವೇರಿ ತತ್ತರಿಸಿ ಹೋಗಿದ್ದಾಳೆ.
ಕೆಲ ದಿನಗಳಿಂದ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಕೋರ್ಟ್ ದೃಶ್ಯವನ್ನು ನೀವು ಕಾಣ್ಬಹುದು. ವೈಷ್ಣವ್, ಮಹಾಲಕ್ಷ್ಮಿ ಸತ್ತಿದ್ದಾಳೆ ಅನ್ನೋದನ್ನು ಮೊದಲು ನಂಬಿರಲಿಲ್ಲ. ಆದ್ರೆ ದಿನ ಕಳೆದಂತೆ ತನ್ನ ಪತ್ನಿ ಮಹಾಲಕ್ಷ್ಮಿ ಸಾವನ್ನಪ್ಪಿದ್ದಾಳೆ ಎಂಬುದನ್ನು ನಂಬಿದ್ದಲ್ಲದೆ ಅದಕ್ಕೆ ಎಡೆ ಕೂಡ ಇಟ್ಟಿದ್ದ. ಇತ್ತ ಜೈಲು ಸೇರಿರುವ ಕಾವೇರಿ, ಲಾಯರ್ ಮುಂದೆ ಎಲ್ಲ ವಿಷ್ಯವನ್ನು ಹೇಳಿದ್ದರು. ಕಟಕಟೆ ಏರಿರುವ ಕಾವೇರಿ ಪರ ವಾದ ಮಂಡಿಸುತ್ತಿರುವ ಲಾಯರ್, ಕಾವೇರಿ, ಲಕ್ಷ್ಮಿ ಕೊಲೆ ಮಾಡಿಲ್ಲ ಎನ್ನುತ್ತಿದ್ದಾರೆ.
ಕಾವೇರಿ, ಲಕ್ಷ್ಮಿ ಗೊಂಬೆಯನ್ನು ರಾವಣ ದಹನದ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ಒಳಗೆ ಇಟ್ಟು ಹತ್ಯೆ ಮಾಡಿದ್ದಾಳೆ ಎಂಬ ಆರೋಪವಿದೆ. ಆದ್ರೆ ಕಾವೇರಿ ಲಾಯರ್, ಲಕ್ಷ್ಮಿಯ ಪ್ರೀತಿಯ ಗೊಂಬೆ ಕೀರ್ತಿ ರೂಮಿನಲ್ಲಿ ಸಿಕ್ಕಿದೆ. ಹಾಗಾಗಿ ಕೀರ್ತಿಯೇ, ಲಕ್ಷ್ಮಿಯನ್ನು ಏಕೆ ಕೊಲೆ ಮಾಡಿರಬಾರದು, ಪಟಾಕಿ ಡೀಲರ್ ಬದಲಿಸಿರಬಹುದಲ್ವಾ ಎಂದು ಕೋರ್ಟ್ ಮುಂದೆ ಪ್ರಶ್ನೆ ಮಾಡ್ತಾರೆ. ಇದನ್ನು ಕೇಳಿ ಕೀರ್ತಿ ಆತಂಕಕ್ಕೊಳಗಾದ್ರೆ, ಕೀರ್ತಿ ರಕ್ಷಣೆಗೆ ಮಹಾಲಕ್ಷ್ಮಿ ಎಂಟ್ರಿಯಾಗಿದೆ. ಬೆಂಕಿಯಂತೆ ಮಹಾಲಕ್ಷ್ಮಿ ಕೋರ್ಟ್ ಒಳಗೆ ಬರ್ತಾಳೆ.
ಸೀರೆಯುಟ್ಟಿರುವ ಮಹಾಲಕ್ಷ್ಮಿ, ಗ್ಲಾಸ್ ಧರಿಸಿದ್ದಾಳೆ. ಸ್ವಲ್ಪ ಮೇಕಪ್ ಕೂಡ ಮಾಡಲಾಗಿದೆ. ಮಹಾಲಕ್ಷ್ಮಿ ಲುಕ್ ಸ್ವಲ್ಪ ಬದಲಾಗಿದೆ. ಪ್ರೋಮೋ ವೀಕ್ಷಣೆ ಮಾಡಿದ ಫ್ಯಾನ್ಸ್ ಗೆ ಮಹಾಲಕ್ಷ್ಮಿ ಈ ಹೊಸ ಅವತಾರ ಇಷ್ಟವಾದಂತೆ ಕಾಣ್ತಿಲ್ಲ. ಲಕ್ಷ್ಮಿಗೆ ಗ್ಲಾಸ್ ಅವಶ್ಯಕತೆ ಇರಲಿಲ್ಲ, ಎಷ್ಟು ಸಿಂಪಲ್ ಆಗಿದ್ದ ಲಕ್ಷ್ಮಿಯನ್ನು ಯಾಕೆ ಹೀಗೆ ಬದಲಿಸಿದ್ದೀರಿ? ಯಾರ್ ಹೇಗೆ ಇರಬೇಕೋ ಹಾಗೇ ಇದ್ದರೆ ಚೆಂದ. ಲಕ್ಷ್ಮಿ ಹೊಸ ಲುಕ್ ನಮಗೆ ಇಷ್ಟ ಆಗ್ಲಿಲ್ಲ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಲಕ್ಷ್ಮಿಗೆ ಇಷ್ಟೊಂದು ಮೇಕಪ್ ಅವಶ್ಯಕತೆ ಇರ್ಲಿಲ್ಲ ಅನ್ನೋದು ಮತ್ತೊಂದಿಷ್ಟು ಮಂದಿಯ ಅಭಿಪ್ರಾಯ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.