ಯೂಟ್ಯೂಬ್ ಮೂಲಕ ಒಂದೇ ತಿಂಗಳಿಗೆ ನಾಲ್ಕು ಲಕ್ಷ ಸಂಪಾದನೆ ಮಾಡಿದ ಕಿತ್ತಡಿ ಕಿರಣ್
Dec 6, 2024, 18:42 IST
|
ಹೌದು, ಕನ್ನಡ ಖ್ಯಾತ ಯೂಟ್ಯೂಬರ್ ಕಿತ್ತಡಿ ಕಿರಣ್ ಅವರು ಇತ್ತಿಚೆಗೆ International travel ಮಾಡಿದ್ದಾರೆ, ಈ ಪ್ರಯಾಣದಲ್ಲಿ ಕಿರಣ್ ಅವರು ಸುಮಾರು 61 ವಿಡಿಯೋಗಳನ್ನು ತನ್ನ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು.
ಹೌದು, ಹೊರದೇಶಕ್ಕೆ ಹೋಗಿ ವಿಡಿಯೋ ಮಾಡಿದ್ದ ಕಿರಣ್ ಅವರು ಸುಮಾರು ನಾಲ್ಕು ಲಕ್ಷಗಿಂತಲೂ ಅಧಿಕವಾದ ಆದಾಯ ಮಾಡಿದ್ದಾರೆ. ಜೊತೆಗೆ ಈ ಪ್ರಯಾಣಕ್ಕೆ 15 ಲಕ್ಷ ಸಾಲ ಕೂಡ ಮಾಡಿದ್ದಾರಂತೆ.
ಕಿರಣ್ ಅವರು ಲಂಡನ್ ಪ್ರಯಾಣ ಶುರು ಮಾಡುವ ಮುನ್ನ ಸುಮಾರು 15 ಲಕ್ಷ ಸಾಲ ಮಾಡಿ ಈ ಪ್ರಯಾಣ ಬೆಳೆಸಿದರು. ಆದರೆ ಅವರಿಗೆ ಯೂಟ್ಯೂಬ್ ನಿಂದ ಬಂದ ಹಣ ಮಾತ್ರ ನಾಲ್ಕು ಲಕ್ಷ. ಇನ್ನು ಅವರ ಸ್ನೇಹಿತರು ಹಾಗೂ ಇನ್ನಿತರರ ಸಹಾಯದಿಂದ ಎರಡು ಲಕ್ಷ ಹಣ ಬಂದಿದೆ ಅಂತೆ. ಒಟ್ಟಾರೆಯಾಗಿ ಇವತ್ತು 9 ಲಕ್ಷ ಸಾಲದಲ್ಲಿ ಇದ್ದಾರೆ ಕಿರಣ ಅವರು.
ಇನ್ನು ಮುಂದಿನ ದಿನಗಳಲ್ಲಿ 9 ಲಕ್ಷ ಹಣವನ್ನು ಯೂಟ್ಯೂಬ್ ಮೂಲಕ ಮತ್ತೆ ಗಳಿಸುವುದಾಗಿ ಬರವಸೆಯ ಮಾತಾನಾಡಿದ್ದಾರೆ ಕಿತ್ತಡಿ ಕಿರಣ ಅವರು.