ಹಿಂದೂ ಯುವಕನ ಜೊತೆ ರೀಲ್ಸ್ ಮಾಡುತ್ತಿರುವ ರೇಷ್ಮಾ ಆಂಟಿ, ಗಂಡ ಯಾಸೀನ್ ಗರಂ
Dec 5, 2024, 17:55 IST
|
ಹಾಯ್ ಫ್ರೆಂಡ್ಸ್ ಬಾಯ್ ಫ್ರೆಂಡ್ಸ್ ಎಂದು ಹೇಳುತ್ತಾ ಫೇಮಸ್ ಆಗಿದ್ದ ರೀಲ್ಸ್ ಸ್ಟಾರ್ ರೇಷ್ಮಾ ಇದೀಗ ಕ್ರಿಯೇಟರ್ ನವೀನ್ ಜೊತೆ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಅಡುಗೆ ರೆಸಿಪಿಗಳನ್ನು ಕೂಡಾ ಜನರಿಗೆ ತೋರಿಸಿಕೊಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆಗಿದ್ದ ರೇಷ್ಮಾ ಅವರು ಇತ್ತೀಚಿಗೆಯಷ್ಟೆ ಗಿಚ್ಚಿಗಿಲಿಗಿಲಿ ಕಾಯ೯ಕ್ರಮಕ್ಕೂ ಎಂಟ್ರಿ ಕೊಟ್ಟಿದ್ದರು.
ಹೌದು ಇಷ್ಟು ದಿನ ಒಂಟಿಯಾಗಿ ರೀಲ್ಸ್ ಮಾಡುತ್ತಿದ್ದ ರೇಶ್ಮಾ ಆಂಟಿ ಇದ್ದಕ್ಕಿದ್ದಂತೆ ಯುವಕನೊಬ್ಬನ ಜೊತೆ ರೀಲ್ಸ್ ಮಾಡುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಬರುತ್ತಿದೆ. ರೇಶ್ಮಾ ಆಯ್ತು ಇಲ್ಲ ಅವರ ಜೊತೆ ಯಾಸಿನ್ ಜೊತೆ ರೀಲ್ಸ್ ಆಗುತ್ತಿತ್ತು ಆದರೆ ಈಗ ನವೀನ್ ಕುಮಾರ್ ಎಂಟ್ರಿ ಕೊಟ್ಟಿದ್ದಕ್ಕೆ ಫ್ಯಾಮಿಲಿಯಲ್ಲಿ ಮನಸ್ಥಾಪ ಆಗಿದೆ ಡಿವೋರ್ಸ್ ಆಗಲಿದೆ ಎಂದು ಕೀಳು ಮಟ್ಟದಲ್ಲಿ ಕಾಲೆಳೆಯುತ್ತಿರುವ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ.
https://www.instagram.com/reel/DDD6A4IvnRd/?igsh=MTkzcDRic203amN1bw==
ಈಗನ ಕಾಲದಲ್ಲಿ ಅಣ್ಣ ತಂಗಿ ಜೊತೆಗೆ ಹೋದರು ಕೂಡ ತಪ್ಪಾಗಿ ಅಥ೯ಮಾಡಿಕೊಳ್ಳುತ್ತಾರೆ. ಜನರಿಗೆ ಅವರಿಬ್ಬರು ಅಣ್ಣ ತಂಗಿ ಎಂದು ಅರ್ಥ ಆಗುವುದಿಲ್ಲ. ಓ ಬಾಯ್‌ಫ್ರೆಂಡ್ ಇರಬೇಕು ಲವರ್ ಇರಬೇಕು ಎಂದು ಹೆಸರಿಡುತ್ತಾರೆ. ಅವರಿಬ್ಬರು ಯಾರು? ಯಾಕೆ ಜೊತೆಯಲ್ಲಿ ವಿಡಿಯೋ ಮಾಡುತ್ತಿದ್ದಾರೆ? ಯಾಕೆ ಈ ರೀತಿ ವಿಡಿಯೋ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದಿದ್ದಾರೆ.
ಈಗ ನಾನು ಹಲವರ ಜೊತೆ ಆಕ್ಟಿಂಗ್ ಮಾಡುತ್ತಿದ್ದೀನಿ,ಒಬ್ಬ ಹುಡುಗ ಜೊತೆ ಆಕ್ಟಿಂಗ್ ಮಾಡಿದ ತಕ್ಷಣ ಅವರು ನನ್ನ ಗಂಡ ಆಗಲ್ಲ. ನನ್ನ ಗಂಡನ ಹೆಸರು ಯಾಸಿನ್ ರಾಜ. ನನ್ನ ಜೊನೆ ಉಸಿರು ಇರುವವರೆಗೂ ಅವರೇ ನನ್ನ ಗಂಡ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರೀಲ್ಸ್ ರೇಶ್ಮಾ ಸ್ಪಷ್ಟನೆ ನೀಡಿದ್ದಾರೆ.
ಇನ್ನು ರೇಷ್ಮಾ ಜೊತೆ ರೀಲ್ಸ್ ಮಾಡುತ್ತಿರುವ ನವೀನ್ ಕುಮಾರ್ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ರೇಶ್ಮಾ ಅವರಿಗೆ ನನ್ನ ಜೀವನದಲ್ಲಿ ಅಕ್ಕನ ಸ್ಥಾನ ಕೊಟ್ಟಿದ್ದೀನಿ ಯಾವತ್ತಿದ್ದರೂ ಅವರು ನನ್ನ ಅಕ್ಕನೇ ಎಂದು ನವೀನ್ ಕುಮಾರ್ ಹೇಳಿದ್ದಾರೆ.