40 ವರ್ಷದ ಮಹಿಳೆಯನ್ನು ಓಪನ್ ಪಾರ್ಕ್ ನಲ್ಲಿ ಅತ್ಯಾಚಾ.ರ ಮಾಡಿದ ಅಸಾಮಿ;

 | 
G

ಮಹಿಳೆಗೆ ಸಮಾನತೆ ಬೇಕು ಎನ್ನುವುದು ಒಂದುಕಡೆ ವಾದವಾಗಿದ್ರೆ ಮಹಿಳೆಗೆ ರಕ್ಷಣೆಯ ಅವಶ್ಯಕತೆ ಇದೆ ಅನ್ನೋದು ಇನ್ನೊಂದು ಕಡೆ ವಾದ. ಪ್ರಿಯಕರನೋರ್ವ ತನ್ನ ಪ್ರಿಯತಮೆ ಎದುರೇ ಮತ್ತೊಬ್ಬ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ಗೌರಿಬಿದನೂರು ತಾಲ್ಲೂಕಿನ ಕೊನಗಾನಹಳ್ಳಿ ಗ್ರಾಮ ಹೊರವಲಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.  ಕೊಲೆಯಾದ ದುರ್ದೈವಿಯನ್ನು ಅಲುಮೇಲಮ್ಮ ಎಂದು ಹೇಳಲಾಗುತ್ತಿದೆ.

ಅತ್ಯಾಚಾರವೆಸಗಿ ಕೊಲೆ ಮಾಡಿದ ಕಾಮುಕನನ್ನು ಸಂಜೀವಪ್ಪ ಎಂದು ಎಂದು ಹೇಳಲಾಗಿದ್ದು,  ಈತನ ಪ್ರಿಯತಮೆಯನ್ನು ರಾಮಾಂಜಿನಮ್ಮ ಎಂದು ಹೇಳಲಾಗುತ್ತಿದೆ. ಸಂಜೀವಪ್ಪ ರಾಮಾಂಜಿನಮ್ಮ ನಡುವೆ ಅನೈತಿಕ‌ ಸಂಬಂಧವಿದ್ದ ಹಿನ್ನಲೆ ಅಲುಮೇಲಮ್ಮ ಇಬ್ಬರ ಅನೈತಿಕ ಸಂಬಂದಕ್ಕೆ ಅಡ್ಡಿಯಾಗಿದ್ದಳು.

 ಈ ಹಿನ್ನಲೆಯಲ್ಲಿ ಪಾಪಿ ಸಂಜೀವಪ್ಪ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಅಲುಮೇಲಮ್ಮ ನಾಲ್ಕು ದಿನಗಳ ಹಿಂದೆ ಗ್ರಾಮದಿಂದ ನಾಪತ್ತೆಯಾಗಿದ್ದಳು. ಇಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿ ಕೊನಗಾನಹಳ್ಳಿ ಕುರುಚಲು ಅರಣ್ಯ ಪ್ರದೇಶದಲ್ಲಿ ಅಲುಮೇಲಮ್ಮ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿತ್ತು. 

ಅರಣ್ಯ ಪ್ರದೇಶದಲ್ಲಿ ಮಹಿಳೆ ಶವ ಗಮನಿಸಿದ ಕೊನಗಾನಹಳ್ಳಿ ಗ್ರಾಮಸ್ಥರು ಗ್ರಾಮಾಂತರ ಪೋಲೀಸರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರೀಶಿಲಿಸಿದರು. ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು. ಅತ್ತ ಅಲುಮೇಲಮ್ಮ ಶವ ಪತ್ತೆಯಾದ ಬಳಿಕ ರಾಮಾಂಜಿನಮ್ಮ ವರ್ತನೆ‌ಯಿಂದ  ಅನುಮಾನಗೊಂಡಿದ್ದ ಗ್ರಾಮಸ್ಥರು ಕೊನೆಗೆ ಆಕೆಯನ್ನು ವಿಚಾರಿಸಿದ ವೇಳೆ ಅಸಲಿ ಸತ್ಯ ಬಾಯಿಬಿಟ್ಟಿದ್ದಾಳೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.