ಸಾ ವನ್ನಪ್ಪುವ 5 ಗಂಟೆ ಮುನ್ನ ಅಪರ್ಣಾ ಅವರು ಅಭಿಮಾನಿಗಳ ಜೊತೆ ಲೈವ್ ಮಾತುಕತೆ
ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಬನಶಂಕರಿಯಲ್ಲಿರುವ ಅಪರ್ಣಾ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ವರೆಗೂ ಆಪ್ತರಿಗೆ, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಆ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.
ನಿರೂಪಕಿ ಅಪರ್ಣಾ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಿನಿಮಾ ರಂಗದ ಹಲವು ಗಣ್ಯರು ಅವರ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಗಾಯಲಿ ಅರ್ಚನಾ ಉಡುಪ, ಬಿ.ಆರ್.ಛಾಯಾ ಸೇರಿದಂತೆ ಅನೇಕರು ಆಗಮಿಸಿ ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ.
ಅಂತಿಮ ದರ್ಶನ ಪಡೆದುಕೊಂಡು ಮಾತನಾಡಿದ ಹಿರಿಯ ನಟ ದತ್ತಣ್ಣ ಅವರು, ಸಾವಿನ ಮುನ್ಸೂಚನೆ ಗೊತ್ತಿದ್ದರು ನಗುತ್ತಾ ಇದ್ದ ನಟಿ ಅಪರ್ಣಾ ಅವರು, ಅವರ ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಕುಟುಂಬಸ್ಥರಿಗೆ ಈ ನೋವು ಭರಿಸುವ ಶಕ್ತಿಕೊಡಲಿ ಎಂದು ಹೇಳಿದ್ದಾರೆ. ಹಿರಿಯ ನಟ ಶ್ರೀನಾಥ್ ಮಾತನಾಡಿ, ಆಯಸ್ಸು ಜಾಸ್ತಿ ಆದಷ್ಟು ಕಣ್ಣ ಮುಂದೆ ಸಾವು ನೋಡ್ತಿರೋದು ಕಷ್ಟವಾಗಿದೆ.
ಜೀವನದಲ್ಲಿ ತುಂಬಾ ನೋವು ಕಂಡಿದ್ದಅಪರ್ಣಾ ಅದನ್ನೆಲ್ಲ ಮೆಟ್ಟಿ ನಿಂತಿದ್ದರು, ನಟನೆಗಿಂತ ನಡೆದುಕೊಳ್ಳುವ ರೀತಿಯಲ್ಲಿ ಜನರಿಗೆ ಮಾದರಿಯಾಗಿದ್ದರು ಎಂದು ಹೇಳಿದರು. ಇನ್ನು ಕನ್ನಡವನ್ನ ಕಲಿತಿದ್ದೆ ಅಪರ್ಣಾ ಅವರಿಂದ, ಅವರ ಕನ್ನಡ ಶುದ್ದ, ಎಂತವರಿಗೂ ಅರ್ಥವಾಗ್ತಿತ್ತು. ಅಪರ್ಣಾ ರನ್ನ ನೋಡಿ ಕಲಿಯೋದು ತುಂಬಾ ಇತ್ತು, ಅವರ ವಿನಯತೆ ಎಲ್ಲರು ಕಲಿಯಲಿ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟಿ ಹೇಮಾ ಪಂಚಮುಖಿ ಹೇಳಿದ್ದಾರೆ.
ಇನ್ನು ಇವರ ಕುರಿತಾಗಿ ನಾನು ಚಿಕ್ಕವನಿದ್ದಾಗಿಂದಲು ಅಪರ್ಣಾ ನನಗೆ ಪರಿಚಯ, ಇತ್ತೀಚಿನ ನಮ್ಮ ತಂದೆಯವರ ಕಾರ್ಯಕ್ರಮ ವನ್ನ ನಡೆಸಿಕೊಟ್ಡಿದ್ದರು. ಅದ್ಬುತ ವಾದ ನಟಿ, ವ್ಯಾಕರಣ ಉಚ್ಚರಣೆ, ಅವರ ಮಾತಿನಲ್ಲಿ ಕೇಳಿಸೊಕೊಳ್ಳುವುದೆ ಖುಷಿಯಾಗ್ತಿತ್ತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.