ಪತ್ನಿಯನ್ನು ಕೂರಿಸಿಕೊಂಡು 300 ಸ್ಪೀಡ್ ನಲ್ಲಿ KTM ಬೈಕ್ ಓಡಿಸಿದ 90ರ ಅಜ್ಜ

 | 
Dhu

ಮೊದಲೆಲ್ಲ ಇಷ್ಟು ವಯಸ್ಸಿನ ಒಳಗೆ ಇದನ್ನ ಮಾಡಿ ಎನ್ನುತ್ತಿದ್ದರು. ಇದೀಗ ಯಾವುದೇ ವಯಸ್ಸಿನ ಹಂಗಿಲ್ಲ. ಮಗನೊಂದಿಗೆ ಅಮ್ಮ ಕೂಡ ಪರೀಕ್ಷೆ ಬರೆಯುತ್ತಿದ್ದಾಳೆ. ವಯಸ್ಸಾದ ದಂಪತಿ ಹೀರೋ ಸ್ಪ್ಲೆಂಡರ್ ಅಥವಾ ಆಕ್ಟೀವಾದಂತಹ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ದುಬಾರಿ ಮೋಟಾರ್‌ಸೈಕಲ್‌ನಲ್ಲಿ ಓಡಾಡುವುದು ಬಹಳ ಅಪರೂಪ. ಇಂತಹ ಅಪರೂಪದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮಿಳುನಾಡಿನಲ್ಲಿ ಅಜ್ಜ-ಅಜ್ಜಿ ಕೆಟಿಎಂ ಆರ್‌ಸಿ 390 ಮೋಟಾರ್‌ಸೈಕಲ್‌ನಲ್ಲಿ ಸವಾರಿ ಮಾಡುತ್ತಾ ತಮಿಳುನಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಕಾರಿನ ಮುಂದೆ ಕೆಟಿಎಂ ಆರ್‌ಸಿ ಮೋಟಾರ್‌ಸೈಕಲ್‌ನಲ್ಲಿ ಈ ಜೋಡಿ ಕಾಣುತ್ತಿದ್ದಂತೆ ಕಾರಿನಲ್ಲಿದ್ದ ವ್ಯಕ್ತಿ ತಮ್ಮ ಫೋನ್ ಹೊರತೆಗೆದು ದೃಶ್ಯವನ್ನು ಸೆರೆಹಿಡಿದ್ದಾರೆ.

ಅಷ್ಟಕ್ಕೂ ಇದರಲ್ಲಿ ಬೈಕಿನ ವಿಶೇಷತೆ ಏನಿದೆ ಎಂದು ನೀವು ಅಂದುಕೊಳ್ಳಬಹುದು. ಇಲ್ಲಿ ಬೈಕ್ ಅಲ್ಲ, ಅದನ್ನು ಸವಾರಿ ಮಾಡಿದ ದಂಪತಿ ಇದನ್ನು ವಿಶೇಷಗೊಳಿಸಿದ್ದಾರೆ. ಬೈಕ್ ಅನ್ನು ವಯಸ್ಸಾದ ವ್ಯಕ್ತಿ ಓಡಿಸುತ್ತಿದ್ದರೆ ಆತನ ಹೆಂಡತಿ ಹಿಂಬದಿ ಕುಳಿತಿದ್ದಾರೆ. ದೇಶದಲ್ಲಿ ವಯಸ್ಸಾದ ದಂಪತಿ ಹೀಗೆ ಕೆಟಿಎಂ ಆರ್‌ಸಿಯಂತಹ ಪರ್ಫಾಮೆನ್ಸ್ ಬೈಕ್ ಅನ್ನು ಓಡಿಸುತ್ತಾ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಈ ವೀಡಿಯೊ ವಿಶೇಷತೆ ಪಡೆದುಕೊಂಡಿದೆ.

ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ದಂಪತಿ ಗಮನಿಸಿದ್ದು, ಹಿಂಬದಿ ಕುಳಿತಿದ್ದ ಹಿರಿಯ ಮಹಿಳೆ ನಗುತ್ತಿರುವುದನ್ನು ಸಹ ನಾವು ನೋಡಬಹುದು. ಬೈಕ್ ಸವಾರಿ ಮಾಡುತ್ತಿದ್ದ ವೃದ್ಧ ಬೈಕ್ ಅನ್ನು ಸಲೀಸಾಗಿ ನಿಯಂತ್ರಣ ಮಾಡುತ್ತಿದ್ದರು. ಆತ ಬೈಕ್ ಓಡಿಸಲು ಹೆಣಗಾಡುತ್ತಿದ್ದಂತೆ ಕಾಣಲಿಲ್ಲ. ಕೆಟಿಎಂ ಆರ್‌ಸಿಯಲ್ಲಿ ಸವಾರಿ ಮಾಡುತ್ತಿರುವ ಈ ವೃದ್ಧ ದಂಪತಿ ವಯಸ್ಸು ಕೇವಲ ಸಂಖ್ಯೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.