ಪಾರ್ಲೆಜಿ ಬಿಸ್ಕಟ್ ನಿಂದ ಬ್ಯಾಗ್ ತಯಾರಿಸಿದ ಮುದ್ದಾದ ಯುವತಿ, ಜನ ಮೆಚ್ಚುಗೆ ಪಡೆದ ಬ್ಯಾ.ಗ್

 | 
Vjk

ಸಾಮಾನ್ಯವಾಗಿ ನಾವೆಲ್ಲರೂ ಮನೆಯಲ್ಲಿರುವ ಹಳೆಯ ವಸ್ತಗಳು ಅಥವಾ ಪ್ಲಾಸ್ಟಿಕ್ ಕವರ್​​ಗಳನ್ನೆಲ್ಲಾ, ಇದು ಇನ್ನು ಯಾವುದಕ್ಕೂ ಉಪಯೋಗವಾಗಲ್ಲ ಎಂದು ಎಸೆದು ಬಿಡುತ್ತೇವೆ. ಇದು ಒಂದು ರೀತಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ವಸ್ತುಗಳನ್ನು ಎಸೆಯುವ ಬದಲು, ಅವುಗಳನ್ನು ಮರುಬಳಕೆ ಮಾಡಿ, DIY  ಉತ್ಪನ್ನಗಳನ್ನು ತಯಾರಿಸಬಹುದಲ್ವಾ ಎಂಬುದನ್ನು ಯುವತಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ.  

ಹೌದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಲೋಕದಲ್ಲಿ ಈ ಒಂದು ಹೊಸ ಟ್ರೆಂಡ್ ಹೆಚ್ಚು ಸುದ್ದಿಯಲ್ಲಿದೆ. ಇದು ಹಳೆಯ ವಸ್ತುಗಳನ್ನು ಮರುಬಳಕೆ ಮಾಡಿ, ಅವುಗಳಿಂದ ಹೊಸ ಹೊಸ  ವಸ್ತುಗಳನ್ನು ತಯಾರು ಮಾಡುವಂತಹ ಮೋಜಿನ ಹವ್ಯಾಸವಾಗಿದೆ. ಹೀಗೆ ಹಳೆಯ ವಸ್ತುಗಳನ್ನು ಉಪಯೋಗಿಸಿಕೊಂಡು ಡಿಸೈನರ್ ಬಟ್ಟೆ, ಮ್ಯಾಟ್, ಕಿವಿಯೋಲೆ, ಬ್ಯಾಗ್ ಇತ್ಯಾದಿಗಳನ್ನು ತಯಾರು ಮಾಡುವ ವಿಡಿಯೋಗಳನ್ನು ನೋಡಿರುತ್ತೇವೆ. 

ಅದೇ ರೀತಿ ಈ ಯುವತಿ ಪಾರ್ಲೆ-ಜಿ ಬಿಸ್ಕಟ್ ಕವರ್ ಅನ್ನು ಉಪಯೋಗಿಸಿಕೊಂಡು ಅದರಿಂದ ಸ್ಲಿಂಗ್ ಬ್ಯಾಗ್ ತಯಾರಿಸಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಯುವತಿಯ ಕ್ರಿಯೇಟಿವಿಟಿಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ವಿಡಿಯೋವನ್ನು ಶ್ವೇತಾ (@shwetmahadik) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಅವರು ವೇಸ್ಟ್ ಪಾರ್ಲೆ-ಜಿ ಬಿಸ್ಕೆಟ್  ಕವರ್ ಅನ್ನು ಬಳಸಿಕೊಂಡು ಸುಂದರವಾದ ಸ್ಲಿಂಗ್ ಬ್ಯಾಗ್ ಅನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಕಾಣಬಹುದು.ಈ ವೈರಲ್ ವಿಡಿಯೋದಲ್ಲಿ ಶ್ವೇತಾ ಅವರು ದೊಡ್ಡ ಪಾರ್ಲೆ-ಜಿ ಬಿಸ್ಕೆಟ್ ಕವರ್ ಅನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ, ನಂತರ ಅದನ್ನು  ಸಮಭಾಗವನ್ನಾಗಿ ಕತ್ತರಿಸಿ ಎರಡು ಭಾಗಗಳಾಗಿ ವಿಭಜಿಸುತ್ತಾರೆ. ನಂತರ ಅದರಿಂದ ಒಂದು ಕವರ್ ತೆಗೆದುಕೊಂಡು ಅದನ್ನು ಎರಡು ಟ್ರಾನ್ಫರೆಂಟ್ ಪ್ಲಾಸ್ಟಿಕ್ ಕವರ್ ಮಧ್ಯೆ ಇಟ್ಟು ಸ್ಟಿಚ್ ಮಾಡಿಕೊಂಡು ಬಳಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.