ಬೆಂಗಳೂರು ಹೇಗಿದೆ ಎಂದು ನೋಡಲು ಬಂದ ವಿದೇಶಿ ಮಹಿಳೆ; ರೂಮ್ ಅಲ್ಲಿ ಹಾಕಿ ಮಾ ಡಿದ್ದೇನು ಗೊ.ತ್ತಾ

 | 
೬ಹಹಹ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿದೇಶಿ ಮಹಿಳೆಯೊಬ್ಬರು ಅನುಮಾನಾಸ್ಪದ ಸಾವನ್ನಪ್ಪಿದ್ದಾರೆ. ಮೃತರನ್ನು ಉಜ್ಬೇಕಿಸ್ತಾನ ಮೂಲದ 37 ವರ್ಷ ವಯಸ್ಸಿನ ಜರೀನಾ ಎಂದು ಗುರ್ತಿಸಲಾಗಿದೆ. ಜರೀನಾ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಪ್ರಕರಣ ಎಂದು ಭಾವಿಸಲಾಗಿದೆ.

ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಜಗದೀಶ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ನ ಎರಡನೇ ಮಹಡಿಯಲ್ಲಿ ಇರುವ ರೂಂನಲ್ಲಿ ಮಹಿಳೆಯ ಶವ ಸಿಕ್ಕಿದೆ. ಉಜ್ಬೇಕಿಸ್ತಾನ ದೇಶದ ಈ ಮಹಿಳೆ ನಾಲ್ಕು ದಿನದ ಹಿಂದೆ ಬೆಂಗಳೂರು ನಗರಕ್ಕೆ ಬಂದಿದ್ದರು. ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದ ವಿದೇಶಿ ಮಹಿಳೆ ಜರೀನಾ, ನಾಲ್ಕು ದಿನಗಳಿಂದಲೂ ಇದೇ ಹೋಟೆಲ್‌ನಲ್ಲಿ ತಂಗಿದ್ದರು.

ಅಸ್ಸಾಂ ಮೂಲದ ಅಮೃತ್‌ ಸೋನಾ  ಮತ್ತು ರಾಬರ್ಟ್‌  ಬಂಧಿಸಲಾಗಿದೆ. ಹೋಟೆಲ್‌ನ ಕೊಠಡಿ ಸಂಖ್ಯೆ 219ರಲ್ಲಿ ಉಳಿದುಕೊಂಡಿದ್ದ ಜರಿನಾ ಅವರನ್ನು ಮಾ.13 ರಂದು ರಾತ್ರಿ ಅಮೃತ್‌, ರಾಬರ್ಟ್‌ ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ಜರಿನಾ ಬಳಿಯಿದ್ದ ಐಫೋನ್‌, 25 ಸಾವಿರ ರೂ. ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಜರಿನಾ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಲುವಾಗಿ ಉಜ್ಬೇಕಿಸ್ತಾನ ರಾಯಭಾರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.