ದರ್ಶನ್ ಜೀವನದಲ್ಲಿ ಮುದ್ದಾದ ಇಬ್ಬರು ಹೀರೋಹಿನ್ ಗಳ ಆಟ; ತಲೆ ಕೂದಲು ಉದುರೋಕೆ ಕಾರಣ ಯಾ ರು

 | 
J
ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಲ್ಲದೇ, ತಮ್ಮ ಖಾಸಗಿ ಫೋಟೋಗಳನ್ನೂ ಕಳುಹಿಸಿ, ತಮ್ಮೊಳಗಿನ ಮಾನಸಿಕ ಕ್ರೌರ್ಯವನ್ನು ಪ್ರದರ್ಶಿಸಿದ್ದರು ರೇಣುಕಾಸ್ವಾಮಿ. ಇದರಿಂದ ರೋಸಿ ಹೋದ ಪವಿತ್ರಾ, ಈ ವಿಚಾರವನ್ನು ದರ್ಶನ್‌ ಗಮನಕ್ಕೂ ತಂದಿದ್ದರು. ಅದಾದ ಬಳಿಕ ದುರಂತವೊಂದು ನಡೆದೇ ಹೋಯಿತು. ಇದೀಗ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ನಟ ದರ್ಶನ್‌ ಸೇರಿ ಒಟ್ಟು 17 ಮಂದಿ ಜೈಲು ಸೇರಿದ್ದಾರೆ. 
ನಟ ಜೈಲು ಸೇರುತ್ತಿದ್ದಂತೆ ಅವರ ಬಗ್ಗೆ ಸಾಕಷ್ಟು ಮಂದಿ ಮಾತನಾಡಿದ್ದಾರೆ. ಅವರ ಜಾತಕವನ್ನೂ ಜಾಲಾಡಿದ್ದಾರೆ. ಇದೀಗ ಕಾಳಿಮಾತೆಯ ಆರಾಧಕಿ ಚಂದಾ ಪಾಂಡೇ ಸಹ ದರ್ಶನ್‌ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ದರ್ಶನ್‌, ಕೊಲ್ಲೂರಿನ ಮೂಕಾಂಬಿಕೆಯ ಸನ್ನಿಧಾನಕ್ಕೆ ತೆರಳಿ, ಚಂಡಿಕಾ ಯಾಗದ ಮೊರೆ ಹೋಗಿದ್ದರು. 
ಈ ಯಾಗ ದರ್ಶನ್‌ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆಯೂ ಚಂದಾ ಪಾಂಡೆ ಟಿವಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಮಾಡುವ ಯಾಗದಲ್ಲಿ ಪತಿಗೂ ಪಾಲಿದೆ. ಏಕೆಂದರೆ ಸಂಪ್ರದಾಯ ಶಾಸ್ತ್ರಬದ್ಧವಾಗಿ ಅವರಿಬ್ಬರು ಸಪ್ತಪದಿ ತುಳಿದು ಮದುವೆಯಾಗಿರುತ್ತಾರೆ. ಹಾಗಾಗಿ ವಿಜಯಲಕ್ಷ್ಮೀ ಅವರ ಈ ಯಾಗದಿಂದ ಮನೆ ಊಟ ಸಿಗುವ ಸಾಧ್ಯತೆ ಇದೆ. ಅದರ ಜತೆಗೆ ಬೈಲ್‌ ಸಿಗುವಂತದ್ದು. ನಿಖರವಾಗಿ ಹೇಳಲು ಆಗಲ್ಲ ಎಂದಿದ್ದಾರೆ.
ಯಾರು ತೀರ್ಪು ಕೊಡುತ್ತಾರೆ, ಆ ತೀರ್ಪುಗಾರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಒಳ್ಳೆಯ ಸಂಕಲ್ಪದ ಮೂಲಕ ತನ್ನ ಪತಿಯನ್ನು ಹೊರತರಲು ಹೋರಾಡುತ್ತಿದ್ದಾಳೆ. ಪೂಜಾ ಫಲಗಳು ವೇಸ್ಟ್‌ ಆಗುವುದಿಲ್ಲ. ಇಂತಿಷ್ಟೇ ದಿನಕ್ಕೆ ಜಾಮೀನು ಸಿಗುತ್ತೆ, ರಿಲೀಸ್‌ ಆಗಿ ಬಿಡ್ತಾರೆ ಅಂತ ಹೇಳಲು ಸಾಧ್ಯವಿಲ್ಲ. 
ಶನಿಗೂ ಕೂದಲಿಗೂ ಸಂಬಂಧವಿದೆ. ಕೂದಲು ಬಂದು ಜ್ಞಾನಕಾರಕ. ಕರ್ಮ ನಿವಾರಣೆ ಮಾಡುವುದು ಕೂದಲು. ಕರ್ಮ ಅಂದರೆ ಶನಿ. ಆದರೆ, ದರ್ಶನ್‌ ಅವರು ಈ ಹಿಂದಿನ ತಮ್ಮ ಅಸಲಿ ಕೂದಲುಗಳು ಹೇಗಿದ್ದವೋ, ಅದೇ ರೀತಿಯಲ್ಲಿ ಹೇರ್‌ ಸ್ಟೈಲ್‌ ಮಾಡಿಸಿದ್ದರೆ ಇಷ್ಟು ದೊಡ್ಡ ದುರಂತಗಳಾಗುತ್ತಿರಲಿಲ್ಲ.
ಸಾಕಷ್ಟು ಸೆಲೆಬ್ರಿಟಿಗಳು ಈಗಲೂ ವಿಗ್‌ ಹಾಕಿದ್ದಾರೆ. ಆದರೆ, ಅವರು ಜನ್ಮದತ್ತವಾಗಿ ಬಂದ ಕೇಶ ರಚನೆ ಹೇಗಿತ್ತೋ ಅದನ್ನೇ ವಿಗ್‌ ರೂಪದಲ್ಲಿ ಧರಿಸಿದ್ದಾರೆ. ಆದರೆ, ದರ್ಶನ್‌ ಮಾತ್ರ ಅದನ್ನು ಮಾಡಿಲ್ಲ. ಮೇಲ್ಮುಖವಾಗಿ ವಿಗ್‌ ಮಾಡಿಸಿಕೊಂಡಿದ್ದಾರೆ. ಇನ್ನು 2018ರಲ್ಲಿ ದರ್ಶನ್‌ ದಸರಾದಲ್ಲಿ ಕಾರ್‌ ರೇಸ್‌ಗೆ ಹೋಗುವವಿದ್ದರು. ಆ ಬಗ್ಗೆ ಕೇಳಲು ಅವರ ಆಪ್ತರೊಬ್ಬರು ನನ್ನ ಬಳಿ ಬಂದಿದ್ದರು. ಆಗ ನಾನು ಹೋಗುವುದು ಬೇಡ, ದರ್ಶನ್‌ ಅವರಿಗೆ ಗಂಡಾಂತರವಿದೆ ಅಂತ ಹೇಳಿದ್ದೆ. 
ಆದರೂ ಕೇಳಿರಲಿಲ್ಲ. ರೇಸ್‌ಗೆ ಹೋದರು. ಅಪಘಾತದಲ್ಲಿ ಕೈ ಮುರಿಯಿತು. ಅದಾದ ಬಳಿಕ ಆಸ್ಪತ್ರೆಯಿಂದ ನನ್ನ ಬಳಿ ಬಂದರು. ಆದರೆ, ಮುಂದೆ ಇನ್ನು ಸಾಕಷ್ಟು ಗಂಡಾಂತರಗಳಿವೆ ಎಂದೂ ಹೇಳಿದ್ದೆ. ಆದರೆ, ಅದನ್ನು ಅವರು ಫಾಲೋ ಮಾಡಲಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.