ಒಳಗಡೆ ಒಳ್ಳೆಯ ಜೀವನ; 'ದರ್ಶನ್ ಅವರನ್ನು ಭೇಟಿ ಮಾಡಿ ಬಂದೆ'

 | 
Yu
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಆರೋಪಿಯಾಗಿದ್ದರೂ ಜೈಲಿನಲ್ಲಿಯೇ ಇರಬೇಕಾಗಿದೆ. ಕಳೆದ ಕೆಲವುಗಳ ಹಿಂದಷ್ಟೇ ಮನೆಯೂಟಕ್ಕೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು. ಇನ್ನು ತುವನೂರು ಸಿದ್ಧಾರೂಢ ಎನ್ನುವವರು ಇಪ್ಪತ್ತೆರಡು ವರ್ಷಗಳ ಕಾಲ ಜೈಲಿನಲ್ಲಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಸನ್ನಢತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೂ ಮುನ್ನ ಸಿದ್ಧಾರೂಢ ಅವರು ದರ್ಶನ್‌ ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಥರ್ಡ್‌ ಐ ಎನ್ನುವ ಯುಟ್ಯೂಬ್‌ ಚಾನೆಲ್‌ನಲ್ಲಿ ಸಿದ್ಧಾರೂಢ ಮಾತನಾಡಿದ್ದಾರೆ. ನಾನು ಜೈಲಿನಲ್ಲಿ ದರ್ಶನ್‌ ಅವರನ್ನು ನೋಡಿದಾಗ ವಿಗ್‌ ಇತ್ತು. ತುಂಬಾ ಕೂಲ್‌ ಆಗಿ ಎಲ್ಲರನ್ನೂ ಮಾತನಾಡಿಸುತ್ತಾರೆ. ಆದರೆ ಟಿವಿಯಲ್ಲಿ ನೋಡಿದ ರೀತಿ ಇಲ್ಲ. ತುಂಬಾ ಇಳಿದು ಹೋಗಿದ್ದಾರೆ. ಡಲ್ ಆಗಿದ್ದಾರೆ. ಬಹುಶಃ ತಪ್ಪು ಮಾಡಿದ ಬಗ್ಗೆ ಪಶ್ಚಾತ್ತಾಪ ಶುರುವಾಗಿರಬಹುದು.ದರ್ಶನ್‌ ಬೇರೆ ಆರೋಪಿಗಳ ಜೊತೆ ಜಗಳವಾಡಲು ಎಲ್ಲಾ ಅವಕಾಶವೇ ಇಲ್ಲ. ಏಕೆಂದರೆ ಅವರನ್ನು ಸಿಂಗಲ್‌ ಸೆಲ್‌ನಲ್ಲಿ ಇಟ್ಟಿರುತ್ತಾರೆ. ಒಬ್ಬರನ್ನೇ ಹಾಕಿರುವಾಗ ಬೇರೆಯವರನ್ನು ಭೇಟಿಯಾಗಲು ಸಾಧ್ಯವಿರುವುದಿಲ್ಲ. ಅವರ ಪ್ರಕರಣದ ಆರೋಪಿಗಳನ್ನೇ ಅವರು ಭೇಟಿಯಾಗಲು ಸಾಧ್ಯವಿಲ್ಲ. ಹೀಗಾಗಿ ಕಿತ್ತಾಡಿರುವುದೆಲ್ಲಾ ಅನುಮಾನ ಎಂದರು.
ನನಗೆ ದರ್ಶನ್‌ ಅವರನ್ನು ನೋಡಿದಾಗ ಖುಷಿ ಆಯ್ತು. ಆದರೆ ಆ ಸ್ಥಿತಿಯಲ್ಲಿ ನೋಡಿದಾಗ ಬೇಸರವಾಯ್ತು. ಯಾಕೆಂದರೆ ನಾನು ಕೂಡ ಅವರ ದೊಡ್ಡ ಫ್ಯಾನ್‌. ಈ ಪ್ರಕರಣದಲ್ಲಿ ದರ್ಶನ್‌ ದುಡುಕಿನ ನಿರ್ಧಾರ ತೆಗೆದುಕೊಂಡರು ಅನಿಸಿತು. ಅಂತ ದೊಡ್ಡ ಸ್ಟಾರ್‌ ಈ ರೀತಿ ಆಯ್ಕೆ ಮಾಡಿಕೊಳ್ಳಬಾರದಿತ್ತು. ಅವರ ಎಲ್ಲಾ ಅಭಿಮಾನಿಗಳಿಗೂ ಹೀಗೆ ಅನಿಸಿರುತ್ತದೆ.ದರ್ಶನ್‌ ಸರ್‌ ಆಗಿಲೀ ಯಾರೇ ಆಗಲಿ ಕ್ರೈಂ ಅನ್ನು ಆಯ್ಕೆ ಮಾಡಿಕೊಳ್ಳಬಾರದು. ಇದು ತಪ್ಪು. ಇದರಿಂದ ಜೀವನನೇ ಹಾಳಾಗುತ್ತದೆ. ಹೆಸರು ಕೆಟ್ಟು ಹೋಗುತ್ತದೆ. ಒಂದು ಸಣ್ಣ ವಿಚಾರ ಯಾವುದೇ ಆಗಲಿ ಬಗೆ ಹರಿಸಿಕೊಳ್ಳಬಹುದಿತ್ತು ಎಂದು ತಮ್ಮ ಅಭಿಪ್ರಾಯವನ್ನು ಹೇಳಿದರು.
ಸಾಮಾನ್ಯವಾಗಿ ಜೈಲಿನಲ್ಲಿ ಊಟ ತುಂಬಾ ಕೆಟ್ಟದಾಗಿರುತ್ತೆ ಅನ್ನೋ ಅಭಿಪ್ರಾಯ ಜನರಲ್ಲಿರುತ್ತೆ. ಜೈಲಿನ ಊಟ ಸೇರಲ್ಲ, ತಿನ್ಬೇಕಲ್ಲ ಅನ್ನೋ ಕಾರಣಕ್ಕೆ ಊಟ ಮಾಡ್ಬೇಕು ಅಂತಾ ಹೇಳ್ತಾರೆ. ಇದರ ಬಗ್ಗೆಯೂ ಸಿದ್ದಾರೂಢ ಮಾತನಾಡಿದ್ದಾರೆ. ನಮಗೆ ಊಟ ಅಡ್ಜೆಸ್ಟ್ ಆಗೋದು ತುಂಬಾ ಕಷ್ಟ, ಲಿಸ್ಟ್‌ನಲ್ಲೇ ಒಂದ್ ರೀತಿ ಇರುತ್ತೆ, ಅಲ್ಲಿ ಕೊಡೋ ಊಟನೇ ಒಂದು ರೀತಿ ಇರುತ್ತೆ ನಾಯಿ ಕೂಡ ತಿನ್ನಲ್ಲ.ಅದನ್ನು ತಿಂದು ಬಹಳ ದಿನಗಳ ಕಾಲ ಬದುಕಿರೋಕೆ ಅಗಲ್ಲ ಎಂದು ಸಿದ್ದಾರೂಢ ಆರೋಪಿಸಿದರು.
ಇನ್ನು ಜೈಲಿನಲ್ಲೇ ಇದ್ದು ಎಲ್‌ಎಲ್‌ಬಿ ಮಾಡಿರುವ ಸಿದ್ಧಾರೂಡ ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಿದ್ದು, ಈ ಪ್ರಕರಣದಲ್ಲಿ ದರ್ಶನ್‌ ಅವರಿಗೆ ಬೇಗ ಜಾಮೀನು ಸಿಗುವ ಸಾಧ್ಯತೆ ಇದೆ. ಚಾರ್ಜ್‌ಶೀಟ್‌ ಹಾಕುವವರೆಗೂ ಜೈಲಿನಲ್ಲಿ ಇರಬೇಕಾಗಬಹುದು. ಆದರೆ ಬೇಗ ಅವರಿಗೆ ಜಾಮೀನು ಸಿಗುತ್ತದೆ. ಚಾರ್ಜ್‌ಶೀಟ್‌ ಎಷ್ಟೇ ಸ್ಟ್ರಾಂಗ್‌ ಇದ್ದರೂ ಬೇಲ್ ಆಗುತ್ತದೆ. ಯಾಕೆಂದರೆ ಇಂತಹ ಅನೇಕ ಪ್ರಕರಣಗಳನ್ನು ನಾವು ಜೈಲಿನಲ್ಲಿ ನೋಡಿದ್ದೇವೆ. ಅದರಲ್ಲೂ ಇವರು ಎ-೨. ಹೀಗಾಗಿ ಅವರಿಗೆ ಬೇಲ್ ಸಿಗುತ್ತದೆ ಎಂದು ಹೇಳಿದರು. ( 
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.