ಮದುವೆಯಾಗಿ ಮಗು ಮಾಡಿ ಕೈಕೊಟ್ಟ ಗಂಡ; ಜಾಹ್ನವಿ ಈಗ ಸಿನಿಮಾ‌ ಹೀರೋಹಿನ್

 | 
Hjs

ಇಷ್ಟು ದಿನಗಳ ಕಾಲ ತೆರೆ ಮೇಲೆ ನ್ಯೂಸ್‌ ಓದಿ ಜನರಿಗೆ ಸುದ್ದಿ ಮುಟ್ಟಿಸುತ್ತಿದ್ದ ನಿರೂಪಕಿ ಜಾಹ್ನವಿ ಈಗ ಸಿನಿಮಾ ಹೀರೋಯಿನ್.‌ ಜಾಹ್ನವಿ ಅಭಿನಯಿಸುತ್ತಿರುವ 'ಅಧಿಪತ್ರ' ಚಿತ್ರದ ಸಿನಿಮಾ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ. ಚಿತ್ರದಲ್ಲಿ ರೂಪೇಶ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ

ಜಾಹ್ನವಿ, ನ್ಯೂಸ್ ಆಂಕರ್‌ ಆಗಿದ್ದಾಗ ಆಕೆಗೆ ಸಾಕಷ್ಟು ಅಭಿಮಾನಿಗಳಿದ್ದರು, ಈಗ ಆಕೆ ನಾಯಕಿಯಾಗಿ ಆಯ್ಕೆ ಆದ ನಂತರ ಫ್ಯಾನ್‌ ಫಾಲೋಯಿಂಗ್‌ ಮತ್ತಷ್ಟು ಹೆಚ್ಚಾಗಿದೆ. ಜಾಹ್ನವಿ ಮೂಲತ: ಹಾಸನದ ಸಕಲೇಶಪುರದವರು. ಚಿಕ್ಕ ವಯಸ್ಸಿನಲ್ಲೇ ಮದುವೆ ಆದ ಜಾಹ್ನವಿಗೆ ಗ್ರಂಥ್‌ ಎಂಬ ಮಗ ಇದ್ದಾನೆ. ಜಾಹ್ನವಿ ಮದುವೆ ಆಗಿದ್ದಾರೆ, ಆಕೆಗೆ ಮಗ ಇದ್ಧಾರೆ ಎಂದು ಬಹಳ ಜನರಿಗೆ ತಿಳಿದಿಲ್ಲ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಬಂದಾಗಲೇ ಜಾಹ್ನವಿ ಗೃಹಿಣಿ ಎಂದು ಎಲ್ಲರಿಗೂ ತಿಳಿದದ್ದು.

ಆದರೆ ಜಾಹ್ನವಿ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ ಈಗ ಪತಿಯಿಂದ ದೂರಾಗಿದ್ದಾರೆ. ಮೊದಲು ಕೆಲಸ ಮಾಡುತ್ತಿದ್ದ ಚಾನೆಲ್‌ ಬಿಟ್ಟು ಈಗ ಟಿವಿ ವಿಕ್ರಮ ಹಾಗೂ ಇತರ ಚಾನೆಲ್‌ಗಳಲ್ಲಿ ಫ್ರೀ ಲ್ಯಾನ್ಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮಗನೊಂದಿಗೆ ಬೆಂಗಳೂರಿನ ಸಹಕಾರ ನಗರದಲ್ಲಿ ವಾಸವಿದ್ದಾರೆ. ಸಿಂಗಲ್‌ ಪೇರೆಂಟ್‌ ಆಗಿ ಜಾಹ್ನವಿ ಮಗನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

 ಮನೆಯಲ್ಲಿ ನಾನೇ ದುಡಿಯಬೇಕು. ನನ್ನ ಮಗನ ಪ್ರತಿಯೊಂದೂ ಜವಾಬ್ದಾರಿ ನಾನೇ ವಹಿಸಿಕೊಂಡಿದ್ದೇನೆ. ಬೆಳಗ್ಗೆ 4 ಗಂಟೆಗೇ ಎದ್ದು ಮಗನಿಗೆ ತಿಂಡಿ ರೆಡಿ ಮಾಡಿ ಎಲ್ಲಾ ಕೆಲಸ ಮುಗಿಸಿ ಬರುತ್ತೇನೆ. ನಾನೂ ಸಾಮಾನ್ಯ ಗೃಹಿಣಿಯಂತೆ ಕೆಲಸ ಮಾಡುತ್ತೇನೆ.ಮಗನನ್ನು ದೊಡ್ಡ ಸ್ಕೂಲ್‌ಗೆ ಸೇರಿಸಬೇಕೆಂದು ಆಸೆ ಇತ್ತು. ಆದರೆ ಅವನು ಮಾತ್ರ ಆ ಸ್ಕೂಲ್‌ಗೆ ಹೋಗಲು ಬಹಳ ಹಟ ಮಾಡುತ್ತಿದ್ದ. ಬಹುಶ: ನಾನು ಪತಿಯಿಂದ ದೂರಾಗಿ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ದೇವರು ಹೀಗೆ ಮಾಡಿದ ಅನ್ನಿಸುತ್ತೆ, ಒಂದು ವೇಳೆ ಮಗನನ್ನು ದೊಡ್ಡ ಶಾಲೆಗೆ ಸೇರಿಸಿದ್ದರೆ ನನಗೆ ಬಹಳ ಕಷ್ಟವಾಗುತ್ತಿತ್ತು.

ಈಗ ಹೀರೋಯಿನ್‌ ಆಗಿದ್ದೇನೆ. ನನ್ನ ಕರಿಯರ್‌ ಶುರು ಆಗಿದ್ದೇ ಮದುವೆಯಾಗಿ ಮಗು ಆದ ನಂತರ. ಆದರೆ ಜೀವನದಲ್ಲಿ ಇಷ್ಟೆಲ್ಲಾ ನಡೆಯುತ್ತದೆ ಎಂದು ನಾನು ಊಹೆ ಕೂಡಾ ಮಾಡಿರಲಿಲ್ಲ ಎಂದು ಜಾಹ್ನವಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ತಮ್ಮ ಹೆಸರಿನಲ್ಲಿ ಯೂಟ್ಯೂಬ್‌ ಚಾನೆಲ್‌ ಕೂಡಾ ಹೊಂದಿರುವ ಜಾಹ್ನವಿ, ತಮ್ಮ ಡಿವೋರ್ಸ್‌ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. 

ಎಲ್ಲಾ ಕಡೆ ನನಗೆ ಡಿವೋರ್ಸ್‌ ಆಗಿದೆ ಎಂಬ ಸುದ್ದಿ ಇದೆ, ಆದರೆ ನಮ್ಮಿಬ್ಬರಿಗೂ ಅಧಿಕೃತವಾಗಿ ಡಿವೋರ್ಸ್‌ ಆಗಿಲ್ಲ, ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದೇವೆ. ಕಾಂಟಾಕ್ಟ್‌ ಅಂತೂ ಇಲ್ಲ, ಕಾನೂನಿನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಿ ಮುಂದೆ ಡಿವೋರ್ಸ್‌ ಸಿಗಬಹುದು ಎಂದು ಜಾಹ್ನವಿ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.