ಆಸೆ ಈಡೇರಿಸಲು ಬಾಲ್ಯ ವಿವಾಹವಾದ ಪುಟಾಣಿ ಜೋಡಿ; ಮೊದಲ ರಾತ್ರಿಯಲ್ಲಿ ಎಡವಟ್ಟು

 | 
Uu

ಬಾಲ್ಯ ವಿವಾಹ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ  ಸ್ಪಷ್ಟ ನಿದರ್ಶನವಾಗಿದೆ. ಬಾಲಕಿಯ ತಂದೆ ತಾಯಿಗೆ ಮಾಹಿತಿಯನ್ನೇ ತಿಳಿಸದೆ ಆಕೆಯ ದೊಡ್ಡಪ್ಪ ಹಾಗೂ ದೊಡ್ಡಮ್ಮ ಯುವಕನ ಜೊತೆ ಮದುವೆ  ಮಾಡಿಸಿರುವ ಘಟನೆ ನಡೆದಿದೆ. ಇದೀಗ ಆನೇಕಲ್‌ನ ಬಾಲ್ಯ ವಿವಾಹ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. 

ಅಜ್ಜಿಯೇ ತನ್ನ ಕೊನೆಯ ಆಸೆಯನ್ನು ಈಡೇರಿಸಬೇಕು ಎಂದು ಅಪ್ರಾಪ್ತ ವಯಸ್ಕ  ಅಂದರೆ 14 ವರ್ಷದ ಮೊಮ್ಮಗಳ ಮದುವೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ. ಹೌದು, ಅಪ್ರಾಪ್ತ ಬಾಲಕಿ ಬಾಲ್ಯ ವಿವಾಹ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಜ್ಜಿ ಕರೆ ಮಾಡಿ ತನಗೆ ಹುಷಾರಿಲ್ಲ, ನೀನು ನನ್ನನ್ನು ನೋಡೋದಕ್ಕೆ ಹೊಸಕೋಟೆ ಕಾಟೇರಮ್ಮ ದೇವಸ್ಥಾನಕ್ಕೆ ಬಾ ಮೊಮ್ಮಗಳೇ ಎಂದು ಕರೆಸಿಕೊಂಡಿದ್ದಾಳೆ. 

ಆದರೆ, ಅಜ್ಜಿ ನೀನು ನನ್ನ ಕೊನೆ ಆಸೆಯನ್ನು ಈಡೇರಿಸಸಬೇಕು ಎಂದು ಪ್ರಮಾಣ ಮಾಡಿಸಿಕೊಂಡು ಮಾವನೊಂದಿಗೆ ಮದುವೆ ಮಾಡಿಕೊಳ್ಳಬೇಕು ಎಂದು 14 ವರ್ಷದ ಬಾಲಕಿಯನ್ನು ಒಪ್ಪಿಸಿದ್ದಾಳೆ. ಅಜ್ಜಿಯ ಕೊನೇ ಆಸೆ ಈಡೇರಿಸಲು ಒಪ್ಪಿಕೊಂಡ 8ನೇ ತರಗತಿ ಬಾಲಕಿಯನ್ನು 24 ವರ್ಷದ ಯುವಕನೊಂದಿಗೆ ಗುಪ್ತವಾಗಿ ಕೆಲವೇ ಜನರು ಸೇರಿಕೊಂಡು ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ.

ಅಜ್ಜಿ ತನ್ನ ಕೊನೆ ಆಸೆ ಈಡೇರಿಸಲು ಅಪ್ರಾಪ್ತ ವಯಸ್ಸಿನ ಮೊಮ್ಮಗಳಿಗೆ ವಿವಾಹ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ತನ್ನ ಸಂಬಂಧಿಕರಲ್ಲಿಯೇ ಮೊಮ್ಮಗಳ ಮದುವೆ ಮಾಡಿಸುವ ಆತುರದಲ್ಲಿ ಯಡವಟ್ಟು ಮಾಡಿದ್ದಾಳೆ. ಭಾರತೀಯ ಕಾನೂನಿನ ಪ್ರಕಾರ ಹೆಣ್ಣಿಗೆ 18 ವರ್ಷ ಹಾಗೂ ಗಂಡಿಗೆ 21 ವರ್ಷ ಮದುವೆಯಾಗಲು ಇರುವ ವಯಸ್ಸಿನ ಮಿತಿಯಾಗಿದೆ. ಆದರೆ, ಅಜ್ಜಿ 14 ವರ್ಷದ ಮೊಮ್ಮಗಳನ್ನು ಮದುವೆ ಮಾಡಿಸಿ ಈಗ ಕೊನೇ ಆಸೆಯ ಜೊತೆಗೆ ಜೈಲು ಶಿಕ್ಷೆಯನ್ನೂ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.