ಗಂಡನ ಕಿಡ್ನಿ ಮಾರಿ ಲವರ್ ಜೊತೆ ಒಂದು ತಿಂಗಳು ಮ ಜಾ ಮಾಡಿ ಬಂದ ಮುದ್ದಾದ ಪತ್ನಿ

 | 
ಕತದ
ಹಣ ಅಂದ್ರೆ ಹೆಣನು ಬಾಯ್ ಬಿಡತ್ತಂತೆ.ಹಣಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂಬುದಕ್ಕೆ ಉತ್ತಮ ನಿದರ್ಶನವೆಂಬ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ನಡೆದಿದೆ. ಬರೋಬ್ಬರಿ 10 ಲಕ್ಷಕ್ಕೆ ಗಂಡನ ಒಂದು ಕಿಡ್ನಿಯನ್ನು ಮಾರಾಟ ಮಾಡಿದ್ದ ಮಹಿಳೆ ಹಣ ಕೈಗೆ ಸಿಗುತ್ತಿದ್ದಂತೆ ತನ್ನ ಪ್ರಿಯಕರನೊಂದಿಗೆ ರಾತ್ರೋರಾತ್ರಿ ಪರಾರಿಯಾಗಿದ್ದಾಳೆ. 
ಪತ್ನಿಯ ಮೋಸದಾಟದಿಂದ ಮನನೊಂದ ಗಂಡ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಚಾನ್‌ಕ್ರಿಲ್‌ನಲ್ಲಿ ವರ್ಣಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದ ಈತನಿಗೆ ಆತನ ಪತ್ನಿ ಕಿಡ್ನಿ ಮಾರಾಟ ಮಾಡುವಂತೆ ಪತ್ನಿ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಮಗಳ ವಿದ್ಯಾಭ್ಯಾಸಕ್ಕೆ ಆದಾಯ ಸಾಕಾಗುತ್ತಿಲ್ಲ ಎಂಬ ಕಾರಣ ಹೇಳಿ ಕಿಡ್ನಿ ಮಾರುವಂತೆ ಪ್ರತಿದಿನ ಗಂಡನಿಗೆ ಹಿಂಸೆ ಕೊಡುತ್ತಿದ್ದಳು. ಕೊನೆಗೆ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಕಿಡ್ನಿ ಮಾರಲು ಪತ್ನಿ ಒಪ್ಪಿಕೊಂಡಿದ್ದಾನೆ.
ಒಂದು ತಿಂಗಳ ನಂತರ, ಒಂದು ಮೂತ್ರಪಿಂಡವನ್ನು 10 ಲಕ್ಷ ರೂ. ಗೆ ಮಾರಾಟ ಮಾಡಲಾಗಿದೆ. ಹಣ ಕೈ ಸೇರುತ್ತಿದ್ದಂತೆ ನಾಟಕವಾಡಿ ಕಿಲಾಡಿ ಹೆಂಡತಿ ಈ ಹಣವನ್ನು ಬೆಳಿಗ್ಗೆ ಬ್ಯಾಂಕಿಗೆ ಜಮಾ ಮಾಡುತ್ತೇನೆ ಎಂದು ಹೇಳಿ ತನ್ನ ಬಳಿ ಇರಿಸಿಕೊಂಡಿದ್ದಾಳೆ. ಬಳಿಕ ನಡು ರಾತ್ರಿ ಹಣದೊಂದಿ ಮನೆಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ.
ಕೆಲವು ದಿನಗಳ ನಂತರ ಶುಕ್ರವಾರ, ತನ್ನ ಪತ್ನಿ ರವಿದಾಸ್ ಎಂಬ ವ್ಯಕ್ತಿಯೊಂದಿಗೆ ಬಾರೇಕ್‌ಪುರದ ಸುಭಾಷ್ ಕಾಲೋನಿಯಲ್ಲಿ ವಾಸಿಸುತ್ತಿರುವುದನ್ನು ತಿಳಿದ ಪತಿ ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದಾನೆ. ಆದರೆ ನಿನಗೆ ವಿಚ್ಛೇದನ ಪತ್ರಗಳನ್ನು ಕಳುಹಿಸಿ ಕೊಡುವುದಾಗಿ ಗಂಡನಿಗೆ ಬೆದರಿಕೆ ಹಾಕಿ ಕಳುಹಿಸಿದ್ದಾಳೆ. ಇದೀಗ ಪತಿ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.