ಬಿಗ್ ಬಾಸ್ ಗೆ ಸೆಡ್ ಹೊಡೆಯಲು ಹೊಸ ರಿಯಾಲಿಟಿ ಶೋ ಆರಂಭ;
Oct 3, 2024, 12:39 IST
|
ಗೆಲ್ಲುವ ಹುಚ್ಚು ಹಂಬಲ. ಟಿಆರ್ಪಿ ಹೆಚ್ಚಿಸಿಕೊಂಡು ಸೈ ಅನಿಸಿಕೊಳ್ಳೋ ಆಸೆ.ಈಗ ಎಲ್ಲೆಲ್ಲೂ ಪೈಪೋಟಿಯೇ ಪೈಪೋಟಿ. ಅದರಲ್ಲಿಯೂ ಸೀರಿಯಲ್, ರಿಯಾಲಿಟಿ ಷೋಗಳಲ್ಲಿ ವಾಹಿನಿಗಳ ನಡುವೆ ಈಗ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳಲು ವಾಹಿನಿಗಳು ಇನ್ನಿಲ್ಲದ ತಂತ್ರಗಳನ್ನು ನಡೆಸುತ್ತಿವೆ. ದಂಪತಿ ಷೋ, ಡಾನ್ಸ್ ಷೋ, ಹಾಸ್ಯ ಕಾರ್ಯಕ್ರಮ, ಮಕ್ಕಳ ನಾಟಕ, ದೊಡ್ಡವರ ನಾಟಕ.
ಹೀಗೆ ರಿಯಾಲಿಟಿ ಷೋಗಳ ಭರ್ಜರಿ ಪ್ರದರ್ಶನ ವಾರಾಂತ್ಯದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಎಲ್ಲರನ್ನೂ ಮೀರಿಸಿ ಕಲರ್ಸ್ ಕನ್ನಡ ವಾಹಿನಿಯ ಬಿಗ್ಬಾಸ್ ಸೀಸನ್ 11 ಶುರುವಾಗಿದೆ. ಸಾಮಾನ್ಯವಾಗಿ ಉಳಿದೆಲ್ಲಾ ರಿಯಾಲಿಟಿ ಷೋಗಳಿಗಿಂತಲೂ ಬಿಗ್ಬಾಸ್ ಪ್ರತಿಬಾರಿಯೂ, ಎಲ್ಲಾ ಭಾಷೆಗಳಲ್ಲಿಯೂ ಅದರದ್ದೇ ಪಾರುಪತ್ಯ. ಅದೇ ಹೈಯೆಸ್ಟ್ ಟಿಆರ್ಪಿ ಪಡೆದುಕೊಳ್ಳುವುದು. ಪ್ರತಿನಿತ್ಯ ಬೈಯುತ್ತಲೇ ಸೀರಿಯಲ್ ನೋಡುವಂತೆ, ಅದಕ್ಕಿಂತಲೂ ಹೆಚ್ಚು ಮಂದಿ ಬಿಗ್ಬಾಸ್ ನೋಡುತ್ತಾರೆ.
ಬಿಗ್ಬಾಸ್ಗೆ ಪ್ರತಿಯಾಗಿ ಯಾವ ರಿಯಾಲಿಟಿ ಷೋಗಳು, ಯಾವ ಭಾಷೆಯಲ್ಲಿಯೂ ಮೇಲೆ ಬರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಇದೀಗ ಕನ್ನಡದ ಬಿಗ್ಬಾಸ್ಗೆ ಪೈಪೋಟಿ ಕೊಡಲೋ ಎಂಬಂತೆ ಜೀ ಕನ್ನಡ ವಾಹಿನಿಯ ಪ್ರೊಮೋ ಒಂದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಶೀಘ್ರದಲ್ಲಿ ಎನ್ನುವ ಪ್ರೊಮೋ ಒಂದನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ಅಷ್ಟಕ್ಕೂ ಇದು ಮನರಂಜನೆಯ ಹೊಸ ಚಾಪ್ಟರ್ ಎಂದು ಶೀರ್ಷಿಕೆ ಕೊಡಲಾಗಿದೆ. ಇದು ಏನಿರಬಹುದು? ಬಿಗ್ಬಾಸ್ ಅನ್ನು ಮೀರಿ ಇದು ಅತಿದೊಡ್ಡ ರಿಯಾಲಿಟಿ ಷೋ ಆಗುವುದಾದರೆ ಅದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ ಅಭಿಮಾನಿಗಳು.ಎತ್ತ ಎನ್ನುವುದನ್ನು ಇನ್ನೂ ಅದರಲ್ಲಿ ತೋರಿಸಿಲ್ಲ. ಈ ಹಿಂದೆ ಇದೇ ರೀತಿಯ ಪ್ರೊಮೋ ತೋರಿಸಲಾಗಿತ್ತು, ಅದರ ಕಥೆಯೇನು ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ. ಉತ್ತರ ದೊರೆತಿಲ್ಲ ಹಾಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.