ಹಿಂದೂ ಫೈಯರ್ ಬ್ರಾಂಡ್ ತಿಮರೋಡಿ ಸಮೀರ್ ಪರ ಮಹತ್ವ ಹೆಜ್ಜೆ, ನಿನ್ನ ಜೊತೆ ನಾವಿದ್ದೇವೆ
Mar 6, 2025, 12:56 IST
|

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಪ್ರಕರಣದ ಕುರಿತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ನಂತರ ಯೂಟ್ಯೂಬರ್ ಸಮೀರ್ ಎಂಡಿ ಅವರಿಗೆ ಬುಧವಾರ ತಡ ರಾತ್ರಿ ಪೊಲೀಸರು ಅವರ ಮನೆ ಪ್ರವೇಶಿಸಿ ಬಂಧಿಸಲು ಪ್ರಯತ್ನಿಸಿದ್ದು, ನಂತರ ನೋಟಿಸ್ ನೀಡಿದ್ದಾರೆ ಎಂದು ಸುದ್ದಿಯಾಗಿದೆ.
ಇದಕ್ಕೂ ಮೊದಲು ಸಮೀರ್ ಮಾಡಿದ್ದ ವೀಡಿಯೋ ಮೊದಲ ನಾಲ್ಕು ದಿನ ತಕ್ಕಮಟ್ಟಕ್ಕೆ ವೀಕ್ಷಣೆ ಪಡೆದುಕೊಂಡಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಅಕ್ಷರಶಃ ವೈರಲ್ ಆಗಿದ್ದು, ಇದೀಗ ಬುಧವಾರ ರಾತ್ರಿ ವೇಳೆಗೆ ಬರೋಬ್ಬರಿ 1.23 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇದಕ್ಕೆ 43 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಬಟನ್ ಒತ್ತಿದ್ದಾರೆ.
ಈ ಚಾನಲ್‌ನಲ್ಲದೆ ಬೇರೆ ಬೇರೆ ಚಾನಲ್‌ಗಳಲ್ಲಿಯೂ ಈ ವಿಡಿಯೋ ಮರು ಪೋಸ್ಟ್ ಆಗಿದ್ದು ಅಲ್ಲೂ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್ ಮೊದಲಾದೆಡೆ ಈ ವಿಡಿಯೋದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಹಲವು ಯೂಟ್ಯೂಬರ್‌ಗಳು, ರೀಲ್ಸ್ ಸ್ಟಾರ್‌ಗಳು, ಕಿರುತೆರೆ ನಟರೆಲ್ಲ ಈ ಬಗ್ಗೆ ಮಾತನಾಡಲು ಆರಂಭಿಸಿದ್ದು, 14 ವರ್ಷಗಳ ಹಿಂದಿನ ಪ್ರಕರಣ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ.
ಇನ್ನು ಈ ಕುರಿತಾಗಿ ಮಹೇಶ್ ತಿಮರೋಡಿ ಅವರು ಬೂದಿ ಮುಚ್ಚಿದ ಕೆಂಡದಂತೆ ಇದ್ದ ಸೌಜನ್ಯಾ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ. ಸಮೀರ್ ಎಂಡಿ ಒಳ್ಳೆಯ ವಿಷಯಗಳ ಕಲೆ ಹಾಕಿ ಸೌಜನ್ಯಾ ಗೆ ನ್ಯಾಯ ಕೊಡಿಸಲು ನಮ್ಮ ಜೊತೆಗೂಡಿದ್ದಾರೆ. ಅವರನ್ನು ನಾವು ಬೆಂಬಲಿಸೋಣ. ನತದೃಷ್ಟ ಸೌಜನ್ಯಾ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡೋಣ ಎಂದು ಲೈವ್ ಗೆ ಬಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.