ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪ. ಘಾತ, ಶಾಸಕ ಪ್ರದೀಪ್ ಈಶ್ವರ್ ಸಂತಾಪ

 | 
Hg

 ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಒಂದಲ್ಲ, ಎರಡರಲ್ಲ ಬರೋಬ್ಬರಿ 13 ಮಂದಿ ಉಸಿರು ಚೆಲ್ಲಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ರವರು ಶವಾಗಾರದ ಬಳಿ ಆಗಮಿಸಿ, ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ರು.

 ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ, ಮೃತರ ಕುಟುಂಸ್ಥರಿಗೆ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದರು. ಮುಖ್ಯಮಂತ್ರಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಮುಖ್ಯಮಂತ್ರಿಗಳು ಘಟನೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಶಾಸಕ ಪ್ರದೀಪ್ ಈಶ್ವರ್ ಭಾವುಕರಾಗಿ ಮಾತು ಹೊರಡದಂತಾಯಿತು. ಅಪಘಾತದಲ್ಲಿ ಮೃತಪಟ್ಟ ಶವಗಳನ್ನು ನೋಡಿ ಕಣ್ಣೀರು ಹಾಕಿದರು. 18 ವರ್ಷಗಳ ಹಿಂದೆ ತನ್ನ ತಾಯಿಯೂ ಶವಗಾರದ ಪ್ರೀಜರ್ ನಲ್ಲಿ ಹೀಗೆ ಮಲಗಿದ್ರು. ಆಂಧ್ರದ ಹಿಂದೂಪುರದ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿಯ ಶವ ಇರಿಸಲಾಗಿತ್ತು ಎಂದರು. ರಸ್ತೆ ಸುರಕ್ಷತೆ ವಿಚಾರದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದರು.ವಿಧಿಯ ಆಟ ದ ಮುಂದೆ ನಮ್ಮದೇನೂ ಇಲ್ಲ ಎಂದು ಸಾಂತ್ವಾನ ನುಡಿದರು.

ಅಷ್ಟಕ್ಕೂ ಹಣೆಯ ಬರಹ ಹೇಗಿರುತ್ತದೆ ನೋಡಿ ಟಾಟಾ ಸುಮೋ ಆಂಧ್ರದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಮುಂಜಾನೆಯಾದ ಕಾರಣ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಪ್ರಾಣ ಬಿಟ್ಟಿದ್ದಾರೆ. ಮೃತರೆಲ್ಲರೂ ಬೇರೆ ಬೇರೆ ಊರಿನವರು. ಗೋರಂಟ್ಲ ತಾಲೂಕಿನ ಟಾಟಾ ಸುಮೋ ಚಾಲಕ ನರಸಿಂಹಪ್ಪ ಮಾರ್ಗ ಮಧ್ಯೆ ವಿವಿಧೆಡೆ ಪ್ರಯಾಣಿಕರನ್ನ ಹತ್ತಿಸಿಕೊಂಡಿದ್ದನಂತೆ. ಇದೀಗ ಚಿಕ್ಕ ಮಗುವನ್ನು ಸೇರಿ 13 ಜನ ಇನ್ನಿಲ್ಲವಾಗಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.