ತುಳುನಾಡಿನ ದೈವ ಭಕ್ತಿಯನ್ನು ನೋಡಲು ಅಮೇರಿಕಾದಿಂದ ಓಡೋಡಿ ಬಂದ ಬಿಳಿ ಮಾನವ

 | 
Give

ನಮ್ಮವರು ನಮ್ಮ ಭಾಷೆ ಮರೆತಿದ್ದಾರೆ ಎನ್ನುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಈ ಯುವಕ ಅಮೆರಿಕಾದವ. ಆದರೆ ಈತ ತುಳುವಿನಲ್ಲಿ ಮಾತನಾಡಲು ಆರಂಭಿಸಿದರೆ ತುಳುವರೇ ಒಮ್ಮೆ ಅವಕ್ಕಾಗಬೇಕು ಹಾಗೆ ಮಾತನಾಡುತ್ತಾನೆ. ಹೌದು ಎಲ್ಲರೂ ವಿಶ್ವದ ದೊಡ್ಡಣ್ಣನತ್ತ ಆಕರ್ಷಿತರು. ಆದರೆ ಸ್ಯಾಮ್ ಮಾತ್ರ ವಿಶ್ವದ ಭೂಪಟದಲ್ಲಿ ಸಣ್ಣ ಚುಕ್ಕಿಯಷ್ಟಿರುವ ತುಳುನಾಡಿನ, ತುಳುಭಾಷೆಯತ್ತ ಆಕರ್ಷಿತ. ತುಳುವಿನಲ್ಲಿ ಮಾತನಾಡುವುದೆಂದರೆ ಈತನಿಗೆ ಇಷ್ಟ. 

ವ್ಲಾಗರ್ ಆಗಿರುವ ಸ್ಯಾಮ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧ. ಅಮೆರಿಕಾದಲ್ಲಿ ನೆಲೆಸಿರುವ ಕರಾವಳಿಯ ವ್ಲಾಗರ್ ಗಳು ಹೆಮ್ಮೆಯಿಂದ ಈತನ ತುಳುಭಾಷಾ ಪ್ರೇಮವನ್ನು ಪರಿಚಯಿಸಿದ್ದರು. ಈತನ ಭಾಷಾ ಮೋಡಿಗೆ ಫಿದಾ ಆಗಿರುವ ತುಳುವರು ಅವರಿಗರಿವಿಲ್ಲದೆ ಸ್ಯಾಮ್‍ನನ್ನು ಮನೆಮಗನೇ ಎನ್ನುವಷ್ಟು ಪ್ರೀತಿಸುತ್ತಿದ್ದಾರೆ. ವಾರದ ಹಿಂದಷ್ಟೇ ಆತ ಮಂಗಳೂರಿಗೆ ಕಾಲಿಟ್ಟಿದ್ದಾನೆ.

ಇನ್ನೂ ಎರಡು ತಿಂಗಳ ಕಾಲ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದು, ಜಾತ್ರೆ, ಕೋಲ, ನೇಮ, ಯಕ್ಷಗಾನ ನೋಡುತ್ತಾ ಒಂದಷ್ಟು ಊರು ಸುತ್ತಾಟ ಮಾಡಿ, ಇಲ್ಲಿನ ಸಂಸ್ಕೃತಿ, ಆಚರಣೆ, ಆರಾಧನೆಯನ್ನು ಸವಿಯಲಿದ್ದಾನೆ. ಅಂದಹಾಗೆ ಸ್ಯಾಮ್ ಅಮೆರಿಕಾದ ರೋಧ್ ಐಲ್ಯಾಂಡ್ ನಿವಾಸಿ. ಡಾಟಾ ಅನಾಲಿಸಿಸ್ ಮಾಸ್ಟರ್ಸ್ ವಿದ್ಯಾರ್ಥಿ. ಅಮೆರಿಕಾದಲ್ಲಿ ಕರಾವಳಿಯ ಒಂದಷ್ಟು ಮಂದಿ ಸ್ಯಾಮ್ ಗೆ ಗೆಳೆಯರಾಗಿದ್ದಾರೆ. 

ಅವರು ತುಳುವಿನಲ್ಲಿ ಮಾತನಾಡುತ್ತಿರುವುದನ್ನು ಕಂಡು ಆಕರ್ಷಿತನಾಗಿ ತುಳು ಕಲಿಯಲಾರಂಭಿಸಿದ ಒಂದೊಂದೇ ಪದಗಳನ್ನು ಕಲಿತು, ತುಳುವಿನಲ್ಲಿಯೇ ವಾಕ್ಯಗಳನ್ನು ಹೆಣೆದು ಮಾತನಾಡುವಷ್ಟಾದ. ಈಗ ಸಂಪೂರ್ಣ ಅರ್ಥವಾಗುವ ಮಟ್ಟಕ್ಕೆ ತುಳುಭಾಷೆ ಸ್ಯಾಮ್‍ಗೆ ಕರಗತ. ಎರಡು ವರ್ಷಗಳಿಂದ ತುಳು ಕಲಿಯುತ್ತಿರುವ ಸ್ಯಾಮ್ ಇನ್ನೂ ಹೊಸಹೊಸ ಪದಗಳನ್ನು ಕಲಿಯುತ್ತಿದ್ದಾನಂತೆ. ಈತನ ತುಳು ಭಾಷಾಪ್ರೇಮಕ್ಕೆ ತುಳುವರು ಸಂಪೂರ್ಣ ಫಿದಾ ಆಗಿರೋದಂತೂ ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.