ಕೇವಲ ಆಟೋದಲ್ಲೇ ಪ್ರತಿ ತಿಂಗಳು ಸಾವಿರಾರು ರೂಪಾಯಿ ದುಡಿಯುತ್ತಿರುವ ಮಹಿಳೆ

 | 
Hd
ಕಷ್ಟ ಯಾರಿಗೆ ತಾನೇ ಬರುವುದಿಲ್ಲ ಹೇಳಿ. ಮನುಷ್ಯರಾಗಿ ಜನಿಸಿದ ಮೇಲೆ ಒಂದಲ್ಲ ಒಂದು ಕಷ್ಟ ಇದ್ದಿದ್ದೇ ಹಾಗೆಂದು ಹೆದರಿ ಹಿಂದೆ ನಡೆಯುವ ಹಾಗಿಲ್ಲ. ಎಷ್ಟೆ ಕಷ್ಟವಿದ್ದರು ನಗುನಗುತ್ತಾ ಬದುಕಿ ಬಾಳಿದ ಹಲವಾರು ಮಂದಿ ನಮ್ಮ ಸುತ್ತ ಮುತ್ತಲಲ್ಲಿ ಇದ್ದಾರೆ ಅವರಲ್ಲಿ ಕೆಲವರು ಕಣ್ಣಿಗೆ ಬೀಳುತ್ತಾರೆ ಇನ್ನೂ ಕೆಲವರು ಕಣ್ಣಿಗೆ ಕಾಣದಂತೆ ಬದುಕು ನಡೆಸುತ್ತಿರುತ್ತಾರೆ.
ಇಂದು ನಮ್ಮ ಸುತ್ತ ಸಾಮಾನ್ಯವಾಗಿ ಆಟೋ ಚಾಲಕರು ಗಂಡಸರು ಕಾಣಸಿಗುತ್ತಾರೆ. ಆದರೆ ಇಲ್ಲೊಬ್ಬ ಲಕ್ಷ್ಮಿ ಎನ್ನುವ ಮಂಡ್ಯದ ಮಹಿಳೆಯೊಬ್ಬರು ಆಟೋ ಚಾಲಕಿ ಆಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೌದು ಆಶ್ಚರ್ಯವಾದರೂ ಸತ್ಯ. ಲಕ್ಷ್ಮಿ ಎನ್ನುವ ಈ ಮಹಿಳೆ ಮೂಲತಃ ಮಂಡ್ಯ ಜಿಲ್ಲೆಯವರು. ಇವರ ಪತಿ ಶಿವಮೊಗ್ಗದ ಸಮೀಪ ಭದ್ರಾವತಿಯವರು.
ಪ್ರೀತಿಸಿ ಮದುವೆಯಾದ ಜೋಡಿಗಳು ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ತಮ್ಮ ಮಕ್ಕಳಿಗಾಗಿ ಬದುಕುವ ಆಸೆ ಇಟ್ಟುಕೊಂಡಿದ್ದರು. ಮೊದಮೊದಲು ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ ಲಕ್ಷ್ಮಿ ಅವರು ಗಂಡನ ಸಹಾಯದಿಂದ ಆಟೋ ಓಡಿಸಲು ಕಲಿತು ಉತ್ತಮ ಚಾಲಕಿಯಾಗಿ ಬದುಕು ನಡೆಸುತ್ತಿದ್ದಾರೆ.
ಇದೀಗ ಗಂಡನ ಬಳಿ ಒಂದು ಆಟೊ ಇದ್ದರೆ ಇವರ ಬಳಿ ಒಂದು ಆಟೋ ಇದೆ ಇಬ್ಬರು ಸೇರಿ ಪ್ರತಿದಿನ ಸರಿ ಸುಮಾರು 2ಸಾವಿರ ರೂಪಾಯಿ ದುಡಿಯುತ್ತಾರೆ. ಇದರಿಂದಾಗಿಯೇ ಇವರ ಮನೆ ನಡೆಯುತ್ತಿದೆ. ಎಂದು ಲಕ್ಷ್ಮಿ ಅವರು ಸಂತೋಷದಿಂದ ಹೇಳಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿಗೆ ಆಟೋ ಚಾಲನೆ ಮಾಡಲು ಸಾಧ್ಯವೇ ಎನ್ನುವವರೊಮ್ಮೆ ಈ ಸ್ಟೋರಿ ನೋಡಲೇ ಬೇಕು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.