ಮುದ್ದಾದ ಯುವತಿಯನ್ನು ಮದುವೆಯಾದ ಯುವಕ; ಮೊದಲ ರಾತ್ರಿಯಲ್ಲಿ ಎಡವಟ್ಟು ಮಾಡುತ್ತಿರುವ ವಧು
Nov 16, 2024, 08:01 IST
|
ಯಾರೆಲ್ಲ ಸಿಂಗಲ್ಸ್ ಇದೀರಾ.. ಯಾರೆಲ್ಲ ಸಿಂಗಲ್ ಲೈಫ್ ಸಾಕು ಮದುವೆಯಾಗಿ ಹ್ಯಾಪಿ ಆಗಿರೋಣ ಅಂತಿದೀರಾ ಅವರೆಲ್ಲ ಈ ಸ್ಟೋರಿಯನ್ನ ಮಿಸ್ ಮಾಡದೇ ನೋಡ್ಲೇಬೇಕು. ನೀವೇನಾದ್ರೂ ಯಾಮಾರಿ ಯಾಱರನ್ನೋ ಮದುವೆಯಾಗ್ಬಿಟ್ರೆ ಎರಡು ವೈಟ್ ಒಂದು ರೆಡ್ ಮಾತ್ರ ಕನ್ಫರ್ಮ.ಯಾಕಂದ್ರೆ ನಿಮ್ಮ ಸಿಂಗಲ್ ಲೈಫ್ನಲ್ಲಿ ಮಿಂಗಲ್ ಆಗೋಕೆ ಬಂದವರು ಅದ್ಯಾವಗ ಪಂಗನಾಮ ಹಾಕಿ ಪರಾರಿಯಾಗಿಬಿಡ್ತಾರೋ ಹೇಳೋದಿಕ್ಕೆ ಆಗಲ್ಲ. ಇಂಥಾ ಮೋಸದ ಮದುವೆಯ ಕಂಪ್ಲೀಟ್ ಕಹಾನಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.
ತುಮಕೂರಿನಲ್ಲಿ ಲಕ್ಷ್ಮಿ ಅನ್ನೋ ಹೆಸರಿನವಳು ಮಾಡಿದ ಕೆಲಸದ ಬಗ್ಗೆ ಕೇಳಿದ್ರೆ ನೀವು ಅಲಾ ಇವಳಾ ಅಂತ ನಿಬ್ಬೆರಾಗಾಗ್ತೀರಾ.. ಯಾಕಂದ್ರೆ ಲಕ್ಷ್ಮೀ ಆಂಟಿ ಮಾಡಿದ ಮಹಾ ಮೋಸಕ್ಕೆ ಇಲ್ಲೊಂದು ಕುಟುಂಬ ಅಕ್ಷರಶಃ ತತ್ತರಿಸಿ ಹೋಗಿದೆ. ಈಕೆ ಮಾಡಿದ ನಂಬಿಕೆ ದ್ರೋಹದಿಂದ ಮದುವೆ ಅನ್ನೋ ಪದಕ್ಕೆ ಕಳಂಕ ತಟ್ಟಿದೆ.ಲಕ್ಷ್ಮೀ ಮಾಡಿದ ಐನಾತಿ ಕೆಲಸಕ್ಕೆ ಪಾಲಾಕ್ಷಯ್ಯ ಅನ್ನುವವರು ಪೊಲೀಸ್ ಠಾಣೆಯ ಮುಂದೆ ಬಂದು ನಿಲ್ಲುವ ಸ್ಥಿತಿ ಬಂದಿದೆ. ಇವರ ಮಗನ ಹೆಸರು ದಯಾನಂದ ಮೂರ್ತಿ ಅಂತ ಮಗನಿಗೆ ಮದುವೆ ಮಾಡ್ಬೇಕು ಅವನಿಗೂ ಒಂದು ಸಂಸಾರ ಅಂತ ಮಾಡ್ಬೇಕು ಅನ್ನೋದು ಪಾಲಾಕ್ಷಯ್ಯನವರ ಕನಸಾಗಿತ್ತು.
ಆದ್ರೆ ದಯಾನಂದ ಮೂರ್ತಿಗೆ 37 ವರ್ಷ ದಾಟಿದ್ರೂ ಮದುವೆಗೆ ಹೆಣ್ಣು ಸಿಕ್ಕಿರಲಿಲ್ಲ. ನೂರಾರು ಹೆಣ್ಣು ನೋಡಿದ್ರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಮದುವೆಯ ಬ್ರೋಕರ್ಗಳು ಹೆಣ್ಣು ಹುಡುಕಿಸಿದ್ರೂ ದಯಾನಂದ ಮೂರ್ತಿಗೆ ಮದುವೆ ಭಾಗ್ಯ ಒಲಿದಿರಲಿಲ್ಲ. ಆಗ ಈ ಪಾಲಾಕ್ಷಯ್ಯನರವಿಗೆ ಪರಿಚಯವಾಗಿದ್ದು ಹುಬ್ಬಳ್ಳಿಯ ಬ್ರೋಕರ್ ಈ ಲಕ್ಷ್ಕೀ.ಪಾಲಾಕ್ಷಯ್ಯ ಪರಿಸ್ಥಿತಿಯನ್ನ ಅರ್ಥ ಮಾಡ್ಕೊಂಡಿದ್ದ ಲಕ್ಷ್ಮೀ ಹುಬ್ಬಳ್ಳಿಯಲ್ಲಿ ಒಬ್ಬಳು ಹುಡುಗಿ ಇದ್ದಾಳೆ. ಅಪ್ಪ ಅಮ್ಮ ಯಾರೂ ಇಲ್ಲ ಅಂತ ಕೋಮಲ ಅನ್ನೋ ಹುಡುಗಿಯ ಫೋಟೋವನ್ನ ಕಳಿಸಿದ್ದಾಳೆ.
ಇತ್ತ ಪಾಲಾಕ್ಷಯ್ಯನವರಿಗೆ ಮಗನಿಗೆ ಹೆಣ್ಣು ಸಿಕ್ಕಿದ್ರೆ ಸಾಕಿತ್ತು. ಹಾಗಾಗಿ ಕೋಮಲಾಳನ್ನ ಮನೆ ಸೊಸೆ ಮಾಡಿಕೊಳ್ಳೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಅದ್ರಂತೆ ಈ ಲಕ್ಷ್ಮಿ ಕೋಮಲಾಳನ್ನ ಪಾಲಾಕ್ಷಯ್ಯನವರ ಮನೆಗೆ ಕರ್ಕೊಂಡು ಬಂದಿದ್ಳು.ಯಾವಾಗ ಪಾಲಾಕ್ಷಯ್ಯ ಹುಡುಗಿಯನ್ನ ಓಕೆ ಮಾಡಿದ್ರೋ, ಈ ಲಕ್ಷ್ಮಿ ಕೋಮಲಾಳನ್ನ ಗಂಡಿನ ಮನೆಗೆ ಕರ್ಕೊಂಡು ಬಂದಿದ್ಳು. ಜೊತೆಗೆ ಸಂಬಂಧಿಕರು ಅಂತ ಹೇಳಿಕೊಂಡು ಇನ್ನೂ ಐದಾರು ಜನ ಈ ಲಕ್ಷ್ಮಿ ಜೊತೆ ಬಂದಿದ್ರು. ಅವತ್ತೆ ಮದುವೆ ಮಾತುಕತೆ ಕೂಡ ನಡೆದು ಹೋಗಿತ್ತು. ವಿಚಿತ್ರ ಏನಂದ್ರೆ ಮಾತುಕತೆ ನಡೆದ ಮರುದಿನವೇ ದಯಾನಂದ ಮೂರ್ತಿ ಮತ್ತು ಕೋಮಲಾರ ಮದುವೆಯೂ ನಡೆದು ಹೋಗಿತ್ತು. ಗ್ರಾಮದಲ್ಲೇ ಸುಮಾರು 200 ಜನರ ಸಮ್ಮುಖದಲ್ಲಿ ವಿವಾಹ ನಡೆದು ಹೋಗಿತ್ತು.
ಮಗನಿಗೆ ಹೆಣ್ಣು ಸಿಕ್ಕ ಖುಷಿಯಲ್ಲಿ ಪಾಲಾಕ್ಷಯ್ಯ ಸೊಸೆಗೆ ಚಿನ್ನದ ಸರ, ತಾಳಿ, ಕಿವಿಗೆ, ಓಲೆ ಅಂತೆಲ್ಲ ಬರೋಬ್ಬರಿ 25 ಗ್ರಾಮ ಚಿನ್ನ ಕೂಡ ಹಾಕಿದ್ರು. ಅತ್ತ ಮಗನಿಗೆ ಹೆಣ್ಣು ಹುಡುಕಿಕೊಟ್ಟಿದ್ದ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ಹಣ ಕೂಡ ಕೊಟ್ಟಿದ್ರು.ಮಗನ ಮದುವೆಯಾಯ್ತು ಅಂತ ನೆಮದಿಯ ನಿಟ್ಟುಸಿರು ಬಿಟ್ಟಿದ್ರು. ಸಂಪ್ರದಾಯದಂತೆ ಸೊಸೆಯನ್ನ ಮನೆ ತುಂಬಿಸಿಕೊಂಡಿದ್ರು. ಆದ್ರೆ ಮದುವೆಯಾದ್ಮೇಲೆ ಎರಡು ದಿನ ಹುಡುಗಿಯನ್ನ ಯುವತಿಯನ್ನ ಮನೆಗೆ ಕರ್ಕೊಂಡು ಹೋಗೋದು ಕಾಮನ್. ಬ್ರೋಕರ್ ಲಕ್ಷ್ಮೀ ಕೂಡ ಸಂಪ್ರದಾಯದ ನೆಪ ಹೇಳಿ ದಯಾನಂದ ಮೂರ್ತಿ ಹೆಂಡತಿ ಕೋಮಲ್ಳನ್ನ ಮಾತ್ರ ವಾಪಸ್ ಊರಿಗೆ ಕರ್ಕೊಂಡು ಹೋಗಿದ್ದಾರೆ. ಇಲ್ಲಿಂದಲೇ ನೋಡಿ ಅಸಲಿ ಕಹಾನಿ ಶುರುವಾಗೋದು.
ಅದ್ಯಾವಾಗ ತವರು ಮನೆಗೆ ಹೋಗಿ ಬರ್ತೀನಿ ಹೋದ ಸೊಸೆ ಒಂದು ವಾರ ಕಳೆದ್ರೂ ವಾಪಸ್ ಬಂದಿರಲಿಲ್ಲ. ಕೊನೆಗೆ ಪಾಲಾಕ್ಷಯ್ಯ ಕುಟುಂಬ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಗೊತ್ತಾಗಿದ್ದು ನಕಲಿ ಮದುವೆಯ ಕರಾಳ ಸತ್ಯ. ಅಸಲಿಗೆ ಪಾಲಾಕ್ಷಯ್ಯ ಮಗನ ಜೊತೆ ನಡೆದಿದ್ದು ಮದುವೆಯಾಗಿರಲಿಲ್ಲ. ಅದೊಂದು ಪಕ್ಕಾ ಪ್ಲಾನ್ಡ್ ದೋಖ ಆಗಿತ್ತು. ಮದುವ ನೆಪದಲ್ಲಿ ನಡೆದ ಮಹಾ ಮೋಸ ಆಗಿಹೋಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.